ನಗರದ ಎಲ್ಲಾ ಜಿಬಿಎ ಆಟದ ಮೈದಾನದಲ್ಲಿ ಪಟಾಕಿ ಖರೀದಿ ಜೋರಾಗಿಯೇ ನಡೆದಿದೆ. ಪೋಷಕರು ಮಕ್ಕಳೊಂದಿಗೆ ಆಗಮಿಸಿ ಪಟಾಕಿ ಖರೀದಿಸುತ್ತಿದ್ದು, ಮಕ್ಕಳಿಗೆ ದೀಪಾವಳಿ ಸಡಗರದ ಜೊತೆ ಪಟಾಕಿ ಸಿಡಿಸುವ ಅವಕಾಶವನ್ನೂ ನೀಡುತ್ತಿದ್ದಾರೆ. ಪಟಾಕಿಗಳಲ್ಲಿ 63 ಬಗೆಯ ಪಟಾಕಿಗಳಿರುವ ಬಾಕ್ಸ್ ಒಂದಕ್ಕೆ 750 ರು.ನಿಂದ 900 ರು.ವರೆಗೆ, 83 ವಿವಿಧ ಪಟಾಕಿಗಳಿರುವ ಬಾಕ್ಸ್ ಒಂದಕ್ಕೆ 1900 ರು.ನಿಂದ 2500 ರು.ವರೆಗೆ ಮಾರಾಟವಾಗುತ್ತಿವೆ.
ದೀಪಾವಳಿಗೆ ಪಟಾಕಿಗಳ ಖರೀದಿ ಬಲು ಜೋರು
ಉಮಾಶಂಕರ ಕಾರ್ಯಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಎಲ್ಲಾ ಜಿಬಿಎ ಆಟದ ಮೈದಾನದಲ್ಲಿ ಪಟಾಕಿ ಖರೀದಿ ಜೋರಾಗಿಯೇ ನಡೆದಿದೆ. ಪೋಷಕರು ಮಕ್ಕಳೊಂದಿಗೆ ಆಗಮಿಸಿ ಪಟಾಕಿ ಖರೀದಿಸುತ್ತಿದ್ದು, ಮಕ್ಕಳಿಗೆ ದೀಪಾವಳಿ ಸಡಗರದ ಜೊತೆ ಪಟಾಕಿ ಸಿಡಿಸುವ ಅವಕಾಶವನ್ನೂ ನೀಡುತ್ತಿದ್ದಾರೆ. ಪಟಾಕಿಗಳಲ್ಲಿ 63 ಬಗೆಯ ಪಟಾಕಿಗಳಿರುವ ಬಾಕ್ಸ್ ಒಂದಕ್ಕೆ 750 ರು.ನಿಂದ 900 ರು.ವರೆಗೆ, 83 ವಿವಿಧ ಪಟಾಕಿಗಳಿರುವ ಬಾಕ್ಸ್ ಒಂದಕ್ಕೆ 1900 ರು.ನಿಂದ 2500 ರು.ವರೆಗೆ ಮಾರಾಟವಾಗುತ್ತಿವೆ.ಪಟಾಕಿ ಪ್ರಿಯರು ಹೆಚ್ಚಿನ ಪ್ರಮಾಣದಲ್ಲಿ ಬಾಕ್ಸ್ ಗಳನ್ನೇ ಖರೀದಿಸುತ್ತಿರುವುದು ಕಂಡು ಬಂತು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ತಮ್ಮ ಪೋಷಕರ ಜೊತೆ ಪಟಾಕಿ ಖರೀದಿಸಲು ಆಗಮಿಸುತ್ತಿದ್ದರು. ಬೆಳಿಗ್ಗೆ 9ರಿಂದಲೇ ಆರಂಭವಾದ ಪಟಾಕಿ ಖರೀದಿ ಮಧ್ಯಾಹ್ನ ಹಾಗೂ ಸಂಜೆಯಾದರೂ ಗ್ರಾಹಕರು ಅಂಗಡಿಗಳಲ್ಲಿ ತುಂಬಿದ್ದರು. ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಯುವಕರು ಲಕ್ಷ್ಮಿ ಪಟಾಕಿ, ಆಟಂ ಬಾಂಬ್ಗಳಂತಹ ಭಾರಿ ಸದ್ದು ಮಾಡುವ ಪಟಾಕಿಗಳನ್ನು ಖರೀದಿಸುತ್ತಿದ್ದರು. ಪೋಷಕರು ವಿರೋಧ ಮಾಡಿದರೂ ಬಿಡದೆ ಶಬ್ದ ಉಂಟು ಮಾಡುವ ಪಟಾಕಿಗಳನ್ನೇ ಖರೀದಿಸುತ್ತಿದ್ದರು.
10 ವರ್ಷಕ್ಕಿಂತ ಕೆಳಗಿನ ಮಕ್ಕಳು ಸುರ್ ಸುರ್ ಬತ್ತಿ, ಹೂ ಕುಂದ, ಚಿನಕುರುಳಿಯಂತಹ ಕಡಿಮೆ ಶಬ್ದದ ಪಟಾಕಿಗಳನ್ನು ಖರೀದಿಸುತ್ತಿದ್ದುದು ಕಂಡು ಬಂತು. ನಗರದ ಬಸವನಗುಡಿ, ರಾಜಾಜಿನಗರ, ಪೀಣ್ಯ, ಆರ್.ಟಿ.ನಗರ, ರಾಮಮೂರ್ತಿ ನಗರ, ಬಾಣಸವಾಡಿ, ಹೆಣ್ಣೂರು, ಎಚ್.ಎಸ್.ಆರ್.ಲೇ ಔಟ್, ಜೆ.ಪಿ.ನಗರ, ಜಯನಗರ ವ್ಯಾಪ್ತಿಯ ಜಿಬಿಎ ಮೈದಾನಗಳಲ್ಲಿ ತೆರೆದಿರುವ ಪಟಾಕಿ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿಯೇ ಸಾಗಿತ್ತು.ಕೆಲ ಪೋಷಕರು ರಕ್ಷಣೆಗಾಗಿ ಕನ್ನಡಕ ಖರೀದಿಸುತ್ತಿದ್ದರು, ಕೆಲವರು ಮಾಸ್ಕ್ ಗಳು, ಪಟಾಕಿ ದೂರದಿಂದಲೇ ಹಚ್ಚಲು ಉಪಯೋಗಿಸುವ ಕಡ್ಡಿಗಳನ್ನು ಖರೀದಿಸುತ್ತಿದ್ದುದು ಸಾಮಾನ್ಯವಾಗಿತ್ತು. ನಗರದ ಸುಮಾರು 423 ಪಟಾಕಿ ಮಾರಾಟಗಾರರು ಐದೂ ಪಾಲಿಕೆಗಳ ವ್ಯಾಪ್ತಿಯ ಜಿಬಿಎ ಮೈದಾನಗಳಲ್ಲಿ ಮಳಿಗೆಗಳನ್ನು ತೆರೆದಿದ್ದು, ಬುಧವಾರ ಮಧ್ಯಾಹ್ನದವರೆಗೂ ಮಳಿಗೆಗಳಲ್ಲಿ ವ್ಯಾಪಾರ ನಡೆಯಲಿದೆ.
ತ.ನಾಡಿನಲ್ಲಿ ಪಟಾಕಿಗೆ ಕಡಿಮೆ ಬೆಲೆಪಕ್ಕದ ತಮಿಳುನಾಡಿಗೆ ಸೇರಿದ ಕರ್ನಾಟಕದ ಗಡಿಯಲ್ಲಿರುವ ಹೊಸೂರಿನಲ್ಲಿ ಪಟಾಕಿ ಕಡಿಮೆ ಬೆಲೆಗೆ ದೊರೆಯುತ್ತಿದ್ದು, ತಾನು ಅಲ್ಲಿಯೇ ಖರೀದಿಸುತ್ತೇನೆ. ತಾನು ಮಕ್ಕಳೊಡನೆ ಬಸವನಗುಡಿಗೆ ಬಂದಿದ್ದರಿಂದ ರಾಮಕೃಷ್ಣ ಆಶ್ರಮ ಸಮೀಪ ಇರುವ ಜಿಬಿಎ ಮೈದಾನದ ಮಳಿಗೆಗೆ ಭೇಟಿ ನೀಡಿದ್ದಾಗಿ ಇಟ್ಟುಮಡುವಿನ ಸುರೇಶ್ ಎಂಬುವರು ಹೇಳಿದರು.
-ಕೋಟ್-ಮಕ್ಕಳ ಜೀವನದ ಜೊತೆ ಆಟವಾಡಬಾರದುಮಕ್ಕಳ ಜೀವನದ ಜೊತೆ ಆಟವಾಡಬಾರದು. ಆದ್ದರಿಂದಲೇ ನಾನು ಅವರಿಗೆ ದೊಡ್ಡ ಪಟಾಕಿ ಕೊಡಿಸ್ತಿಲ್ಲ. ಚಿಕ್ಕ ವಯಸ್ಸಿನಲ್ಲಿ ಇರುವುದರಿಂದ ಅವರಿಗೆ ದೊಡ್ಡಪಟಾಕಿಗಳನ್ನು ಕೊಡಿಸುತ್ತಿಲ್ಲ. ಪಟಾಕಿ ಕೊಡಿಸುತ್ತೇವೆ. ಆದರೆ, ಅವರಿಗೆ ಗಾಯಗಳಾದಾಗ, ಅವರು ಆಸ್ಪತ್ರೆಯಲ್ಲಿ ನರಳಾಡುವುದನ್ನು ಕಣ್ಣಿಂದ ನೋಡಲು ಸಾಧ್ಯವಿಲ್ಲ.
-ಶಕುಂತಲಾ ನೆಲಗದರನಹಳ್ಳಿ-ಕೋಟ್-ಬೆಲೆ ಹೆಚ್ಚೇನೂ ಇಲ್ಲ, ಕಳೆದ ಸಲ ಅಷ್ಟೇ ಇತ್ತು
ಕಳೆದ ವರ್ಷವೂ ಇದೆ ಬೆಲೆ ಇತ್ತು. ಹೊರಗೆ ಹಾಲು, ಅಕ್ಕಿ, ಬೇಳೆ ಬೆಲೆ ಹೆಚ್ಚಾದಂತೆ ಪಟಾಕಿ ಬೆಲೆ ಏನೂ ಹೆಚ್ಚಾಗಿಲ್ಲ. ಆದರೆ, ನಿಮಗೆ ಹೆಚ್ಚು ಐಟಂಗಳಿರುವ ಪಟಾಕಿ ಬೇಕೂ ಅಂದ್ರೆ ಹೆಚ್ಚು ಹಣ ಕೊಡಬೇಕು. ನಾನು ಕಂಡಂತೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆಗಲೂ ಇಷ್ಟೇ ಬೆಲೆ ಇತ್ತು. ನಾನು ನನ್ನ ಮಗನಿಗೋಸ್ಕರ ಒಂದು ಬಾಕ್ಸ್ ಪಟಾಕಿ ಖರೀದಿಸಿದೆ. ಮೊದಲೇ ಕನ್ನಡಕ ಖರೀದಿಸಿ ಮನೆಯಲ್ಲಿ ಇಟ್ಟಿದ್ದೇನೆ.-ನಾಗೇಶ್, ಬ್ಯಾಟರಾಯನಪುರ
ಪಟಾಕಿ ಸೌಂಡ್ ಬಂದ್ರೇನೆ ಹಬ್ಬಪಟಾಕಿ ಹೊಡೆದ್ರೇ ಸೌಂಡ್ ಬರ್ಬೇಕು, ಪಟಾಕಿ ಹೊಡೆದ್ರೇ ಗದ್ದಲ ಆಗಬೇಕು. ನಮ್ಮ ಪಟಾಕಿಯೇ ಸೌಂಡ್ ಮಾಡ್ಬೇಕು. ಹಾಗಿದ್ರೇನೆ ಹಬ್ಬ, ವರ್ಷಕ್ಕೆ ಒಂದೇ ಬಾರಿ ಪಟಾಕಿ ಹಬ್ಬ ಬರೋದು ಆದ್ರಿಂದ ಈ ಹಬ್ಬಕ್ಕೆ ಪಟಾಕಿ ಹೊಡೆಯಬೇಕು. ಅದಕ್ಕೆ ನನ್ನ ಮಾವನ ಜೊತೆ ಬಂದಿದ್ದೇನೆ. ಅವರೇ ನನಗೆ ಪಟಾಕಿ ಕೊಡಿಸಿದ್ದು ಎಂದು ಇದೀಗ ತಾನೇ ಪದವಿ ಮುಗಿಸಿರುವ ಕುಶಾಲ್ ಹೇಳಿದರು.
-ಕುಶಾಲ್, ಪದವೀಧರನಮ್ಮ ಮಕ್ಕಳಿಗೂ ಹಬ್ಬ ಗೊತ್ತಾಗಬೇಕು
ನಾವೆಲ್ಲಾ ದೀಪಾವಳಿ ಹಬ್ಬ ನೋಡಿದ್ದೇವೆ. ಮಕ್ಕಳಿಗೂ ಹಬ್ಬ ಅನ್ನೋದು ಗೊತ್ತಾಗ್ಲಿ ಅಂತ ಪಟಾಕಿ ಕೊಡಿಸಲು ಇಲ್ಲಿಗೆ ಬಂದಿದ್ದೇನೆ. ಪಟಾಕಿ ಹೊಡೆದ್ರೆ ದೀಪಾವಳಿ ಅನ್ನೋದು. ಪಟಾಕಿ ಹೊಡೆಯಲಿಲ್ಲ ಅಂದ್ರೆ, ದೀಪಾವಳಿ ಅನ್ನಿಸಿಕೊಳ್ಳಲ್ಲ. ನಾವೆಲ್ಲಾ ನಮ್ಮ ವಯಸ್ಸಿನಲ್ಲಿ ಪಟಾಕಿ ಹೊಡೆದಿದ್ದೇವೆ. ಈಗ ಮಕ್ಕಳೂ ಪಟಾಕಿ ಹೊಡೆಯಬೇಕು. ಸುರಕ್ಷತೆಗಾಗಿ ಕನ್ನಡಕ ಖರೀದಿಸಿದ್ದೇವೆ.-ವಂಶಿ, ಕೆಂಗೇರಿ