ಪಟ್ಟಣ ಮಕ್ಕಳಿಗಿಂತಲೂ ನಮ್ಮ ಗ್ರಾಮೀಣ ಭಾಗದ ಮಕ್ಕಳೇ ತುಂಬಾ ಪ್ರತಿಭೆಗಳನ್ನು ಹೊಂದಿರುತ್ತಾರೆ. ಹಾಗಾಗಿ ಶಿಕ್ಷಕರು ಅದನ್ನು ಹೊರತೆಗೆಯುವ ಪ್ರಯತ್ನ ಮಾಡಬೇಕು.

ಕನ್ನಡಪ್ರಭ ವಾರ್ತೆ ಹನೂರು

ಗ್ರಾಮೀಣ ಭಾಗದ ಅನೇಕ ಪ್ರತಿಭೆ ಗಳು ಅಡಗಿರುತ್ತದೆ. ಅಂತಹ ಮಕ್ಕಳಲ್ಲಿ ಅಡಗಿರುವಂತಹ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದು ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.

ತಾಲೂಕಿನ ರಾಮಾಪುರ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಮಾಪುರ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ನಂತರ ಮಾಸತನಾಡಿದರು.ಪಟ್ಟಣ ಮಕ್ಕಳಿಗಿಂತಲೂ ನಮ್ಮ ಗ್ರಾಮೀಣ ಭಾಗದ ಮಕ್ಕಳೇ ತುಂಬಾ ಪ್ರತಿಭೆಗಳನ್ನು ಹೊಂದಿರುತ್ತಾರೆ. ಹಾಗಾಗಿ ಶಿಕ್ಷಕರು ಅದನ್ನು ಹೊರತೆಗೆಯುವ ಪ್ರಯತ್ನ ಮಾಡಬೇಕು. ಮಕ್ಕಳಲ್ಲಿ ಪಟ್ಟದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಅಡಕವಾಗಿರುತ್ತದೆ. ಇಂತಹ ಪ್ರತಿಭೆಗಳು ಹೊರತೆಗೆದಾಗ ಮಾತ್ರ ಅನಾವರಣಗೊಳ್ಳುತ್ತದೆ. ಹಾಗಾಗಿ ಮಕ್ಕಳಲ್ಲಿ ಅಡಗಿರುವಂತಹ ಸೂಕ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ಮಕ್ಕಳಿಗೂ ಇದೊಂದು ಸುವರ್ಣ ಅವಕಾಶ. ಮಕ್ಕಳು ತಾವು ಯಾವುದೇ ಕ್ಷೇತ್ರದಲ್ಲಾದರೂ ಸಹ ಪ್ರತಿಭೆಗಳಿದ್ದಲ್ಲಿ ಗುರುತಿಸಿಕೊಂಡು ಅದರ ಕಡೆ ಹೆಚ್ಚಿನ ಗಮನವಹಿಸಿದ್ದೇ ಆದಲ್ಲಿ ಅಂತಹ ಕಲೆಯಲ್ಲಿ ಗುರಿ ಸಾಧಿಸಬಹುದು ಎಂದರು.

ಕ್ಲಸ್ಟರ್ ವಲಯ ಸಂಪನ್ಮೂಲ ವ್ಯಕ್ತಿ ಮಹಾದೇವ ಪ್ರಸಾದ್ ಮಾತಾನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಅನೇಕ ರೀತಿಯ ಒಳ್ಳೆಯ ಪ್ರತಿಭೆಗಳು ಅಡಗಿರುತ್ತದೆ. ಇಂತಹ ಪ್ರತಿಭೆಗಳಿಗೆ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿದಾಗ ಮಾತ್ರ ಮಕ್ಕಳು ಗುರಿ ತಲುಪಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ತೀರ್ಪುಗಾರರು ಸರಿಯಾದ ತೀರ್ಪನ್ನು ನೀಡಬೇಕು. ಎಲ್ಲಾ ಮಕ್ಕಳು ಒಂದೇ ಎಂಬ ಮನೋಭಾವ ತೀರ್ಪುಗಾರರಲ್ಲಿ ಇರಬೇಕು ಎಂದರು.

ಛದ್ಮ ವೇಷದಲ್ಲಿ ಮಿಂಚಿದ ಮಕ್ಕಳು

ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳು ವಿವಿಧ ವೇಷಗಳನ್ನು ಹಾಕುವ ಮೂಲಕ, ಅವರ ಸಂದೇಶಗಳನ್ನು ಮೂಲಕ ಛದ್ಮಾವೇಶ ಹಾಕುವ ಮೂಲಕ ವಿವಿಧ ಆಯಾಮಗಳಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಪೋಷಕರನ್ನು ರಂಜಿಸಿದರು.

ಇದೇ ಸಂದರ್ಭದಲ್ಲಿ ಬಿಆರ್‌ಸಿ ವೆಂಕಟೇಶ್, ಇಸಿಒ ಚಿನ್ನಪ್ಪಯ್ಯ, ಅಶೋಕ್, ಮಹೇಶ್, ,ಮುಖ್ಯ ಶಿಕ್ಷಕ ಕೆಂಚಪ್ಪ, ರಾಜು,ಮುತ್ತುಸ್ವಾಮಿ, ಹಾಗೂ ಸಿಆರ್‌ಪಿ ಮಹಾದೇವ ಪ್ರಸಾದ್, ರಾಮಾಪುರ ಶಾಲೆಯ ಸಹ ಶಿಕ್ಷಕ ದೊರೆಸ್ವಾಮಿ, ರಮೇಶ್, ಹಾಗೂ ವಿವಿಧ ಶಾಲೆಯ ಮುಖ್ಯ ಶಿಕ್ಷಕರೂ, ಸಹ ಶಿಕ್ಷಕರೂ ಹಾಗೂ ಮಕ್ಕಳು ಇದ್ದರು.---------4ಸಿಎಚ್ಎನ್‌12

ಹನೂರು ತಾಲೂಕಿನ ರಾಮಾಪುರ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಮಾಪುರ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಉದ್ಘಾಟಿಸಿದರು.