ಆಂಗ್ಲ ಭಾಷೆ ಕಲಿಯುವ ಅನಿವಾರ್ಯತೆ ಇದೆ

| Published : Feb 02 2025, 01:02 AM IST

ಸಾರಾಂಶ

ಆಂಗ್ಲ ಭಾಷೆ ಕಲಿಕೆ ಸುಗಮಗೊಳಿಸುವ ಹಿನ್ನೆಲೆಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಪ್ರೋತ್ಸಾಹಿಸಿದ ಶಾಲೆಯ ಆಂಗ್ಲ ಭಾಷೆಯ ಕ್ಲಬ್ ಸಂಚಾಲಕ ಹಾಗೂ ಪ್ರೌಢಶಾಲಾ ಶಿಕ್ಷಕರಾದ ಆರ್.ಎಂ.ನರಸಿಂಹ ಅವರ ಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಮುಖ್ಯ ಶಿಕ್ಷಕರಾದ ಯರಿಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ ಆಂಗ್ಲ ಭಾಷೆ ಕಲಿಕೆ ಸುಗಮಗೊಳಿಸುವ ಹಿನ್ನೆಲೆಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಪ್ರೋತ್ಸಾಹಿಸಿದ ಶಾಲೆಯ ಆಂಗ್ಲ ಭಾಷೆಯ ಕ್ಲಬ್ ಸಂಚಾಲಕ ಹಾಗೂ ಪ್ರೌಢಶಾಲಾ ಶಿಕ್ಷಕರಾದ ಆರ್.ಎಂ.ನರಸಿಂಹ ಅವರ ಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಮುಖ್ಯ ಶಿಕ್ಷಕರಾದ ಯರಿಸ್ವಾಮಿ ಸಂತಸ ವ್ಯಕ್ತಪಡಿಸಿದರು.ತಾಲೂಕಿನ ರಾಜವಂತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಂಗ್ಲ ಭಾಷಾ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಆಂಗ್ಲ ಭಾಷೆ ಕಲಿಕೆ ಸುಗಮಗೊಳಿಸುವ ಹಿನ್ನೆಲೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ (ಅಭಿವೃದ್ಧಿ) ಕೆ.ಮಂಜುನಾಥ್‌ ಅವರ ಆದೇಶ ಮೇರೆಗೆ ಶಾಲೆಯ ವಿದ್ಯಾರ್ಥಿಗಳಿಗೆ ಆಂಗ್ಲ‌ ಭಾಷೆಯ ಮಹತ್ವ ಹಾಗೂ ಕಲಿಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ಹಾಡು, ನೃತ್ಯ ಸಂಭಾಷಣೆ, ಗುಂಪು ಚಟುವಟಿಕೆ, ಶಬ್ಧ ಬಳಕೆ, ಕಥೆ ಹೇಳುವುದು ಹಾಗೂ ಇತರೆ ವಿವಿಧ ಆಯಾಮದ ಮೂಲಕ ಭಾಷಾ ಕೌಶಲ್ಯ ಹಾಗೂ ಆಂಗ್ಲ‌ ಬಳಕೆಯ ಸುಗಮ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿ ಪ್ರದರ್ಶಿಸಿದ ಶಾಲೆಯ ಆಂಗ್ಲ ಕ್ಲಬ್ ಸಂಚಾಲಕರ ಶ್ರಮ ನಿಜಕ್ಕೂ ಮೆಚ್ಚುವಂತದ್ದಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾ ಜಗತ್ತಿನಲ್ಲಿ ಜೀವಿಸಲು ಆಂಗ್ಲ ಭಾಷೆಯನ್ನು ಕಲಿಯುವ ಅನಿವಾರ್ಯತೆ ಇದೆ ಎಂದರು. ಆಂಗ್ಲ‌ ಭಾಷಾ ಶಿಕ್ಷಕ ಆರ್‌.ಎಂ. ನರಸಿಂಹಪ್ಪ ಮಾತನಾಡಿ ಉಪ ನಿರ್ದೇಶಕರ ಆದೇಶದ ಮೇರೆಗೆ ವಿವಿಧ ರೀತಿಯ ಚಟವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು ಸಂತಸ ತಂದಿದೆ. ಇಂದಿನ ಸ್ವರ್ಧಾ ಜಗತ್ತಿನಲ್ಲಿ ಆಂಗ್ಲ‌ ಭಾಷೆ ಅತ್ಯಂತ ಮಹತ್ವ ಪಡೆದಿದೆ. ಕನ್ನಡದ ಜತೆ ಆಂಗ್ಲ‌ ಭಾಷೆಯ ಕಲಿಕೆಗೆ ಅಸಕ್ತಿವಹಿಸಬೇಕು. ಇದರಿಂದ ಎಲ್ಲಿಗೆ ಹೋದರೂ ಧೈರ್ಯವಾಗಿ ಸಮಸ್ಯೆ ಎದುರಿಸಲು ಸಾಧ್ಯವಿದೆ. ಸರಗವಾಗಿ ಮಾತನಾಡಲು ಆಂಗ್ಲ ಕಲಿಕೆಗೆ ವಿದ್ಯಾರ್ಥಿಗಳು ಮುಂದಾಗುವಂತೆ ಕರೆ ನೀಡಿದರು.ಇದೇ ವೇಳೆ ಶಿಕ್ಷಕರಾದ ಕೆ.ಜೆ.ಗಿರೀಶ್ ಬಾಬು.ನರಸಪ್ಪ,ಕರಿಯಣ್ಣ, ತಿಪ್ಪೇಸ್ವಾಮಿ, ಪ್ರಸಾದ್, ವಾಗ್ದೇವಿ, ರಾಮಾಂಜಿನಮ್ಮ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.