ಸವದತ್ತಿಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆಯಿದೆ: ಶಶಿಕುಮಾರ ಪಟ್ಟಣಶೆಟ್ಟಿ

| Published : Nov 17 2024, 01:19 AM IST

ಸವದತ್ತಿಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆಯಿದೆ: ಶಶಿಕುಮಾರ ಪಟ್ಟಣಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರ ಆರೋಗ್ಯಕ್ಕೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಸವದತ್ತಿಯಲ್ಲಿ ಅತ್ಯುತ್ತಮವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆ ಇದ್ದು, ಶಾಸಕರು ಈ ಕುರಿತು ಚಿಂತನೆ ಮಾಡಿ ಜನರ ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ಕೆ ಮುಂದಾಗಬೇಕೆಂದು ನಾರಾಯಣ ಹೃದಯಾಲಯ ಧಾರವಾಡದ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಸಾರ್ವಜನಿಕರ ಆರೋಗ್ಯಕ್ಕೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಸವದತ್ತಿಯಲ್ಲಿ ಅತ್ಯುತ್ತಮವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆ ಇದ್ದು, ಶಾಸಕರು ಈ ಕುರಿತು ಚಿಂತನೆ ಮಾಡಿ ಜನರ ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ಕೆ ಮುಂದಾಗಬೇಕೆಂದು ನಾರಾಯಣ ಹೃದಯಾಲಯ ಧಾರವಾಡದ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯಲ್ಲಿ ಶಾಸಕ ವಿಶ್ವಾಸ ವೈದ್ಯರವರ ಹುಟ್ಟುಹಬ್ಬದ ನಿಮಿತ್ತ ಎಸ್.ಜಿ.ಎಸ್ ಗೆಳೆಯರ ಬಳಗ ಹಾಗೂ ವೈದ್ಯ ಫೌಂಢೇಶನ್‌ ಮತ್ತು ಧಾರವಾಡದ ಎಸ್.ಡಿ.ಎಂ ನಾರಾಯಣ ಹೃದಯಾಲಯ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಸಕ ವಿಶ್ವಾಸ ವೈದ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನನ್ನ ಶಾಲಾ ದಿನಗಳ ಗೆಳೆಯರೆಲ್ಲ ಸೇರಿ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ನನಗೆ ಅತ್ಯಂತ ಖುಷಿ ತಂದಿದೆ ಎಂದ ಅವರು, ಎಸ್‌ಜಿಎಸ್ ಗೆಳೆಯರ ಬಳಗದವರು ನಡೆಸುವ ಪ್ರತಿಯೊಂದು ಸಾಮಾಜಿಕ ಕಾರ್ಯದಲ್ಲಿ ನಾನು ಸ್ವಯಂ ಪ್ರೇರಣೆಯಿಂದ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸುವದಾಗಿ ಹೇಳಿದರು. ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿ, ಸಮಾಜಕ್ಕೆ ಅಗತ್ಯವಾದ ಸಂಸ್ಕಾರ ಮೈಗೂಡಿಸಿಕೊಳ್ಳಬೇಕೆಂದರು.ಡಾ.ವಿವೇಕಾನಂದ ಗಜಪತಿ ಹಾಗೂ ಡಾ.ಹರೀಶ ಮಮದಾಪುರ ಹೃದಯದ ಕಾಯಿಲೆ ಕುರಿತು ಮಾತನಾಡಿದರು. ಎಸ್‌ಜಿಎಸ್ ಗೆಳೆಯರ ಬಳಗದಿಂದ ದೈಹಿಕ ಶಿಕ್ಷಕ ರಾಮಚಂದ್ರ ಸಿದ್ದಲಿಂಗಣ್ಣವರ ಹಾಗೂ ಶಾಸಕ ವಿಶ್ವಾಸ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ, ಇಕೋ ತಪಾಸಣೆ ಜೊತೆಗೆ ಅನುಭವಿಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಯಿತು. ಶಿಬಿರದಲ್ಲಿ ೨೨೮ ಜನರು ಉಚಿತ ಹೃದಯ ತಪಾಸಣೆ ಮಾಡಿಸಿಕೊಂಡರು. ೧೫ ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಎಸ್‌ಡಿಎಂ ಆಸ್ಪತ್ರೆಗೆ ಕಳಿಸಲಾಯಿತು.

ಬಾಪು ದೀಕ್ಷಿತ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ದಾವಲಬಿ ಸನದಿ, ಬಿಇಒ ಮೋಹನ ದಂಡೀನ, ಸಿಪಿಐ ಧರ್ಮಾಕರ ಧರ್ಮಟ್ಟಿ, ಟಿಎಚ್‌ಒ ಡಾ.ಶ್ರೀಪಾದ ಸಬನೀಸ್‌, ಪ್ರಭು ಪ್ರಭುನವರ, ಆರ್.ಐ. ಸಿದ್ದಲಿಂಗಣ್ಣವರ, ಅಶೋಕ ಮುರಗೋಡ, ಅಶ್ವತ ವೈದ್ಯ, ಕೆವಿಜಿ ಬ್ಯಾಂಕಿನ ವ್ಯವಸ್ಥಾಪಕ ಸುನೀಲ ಸಪ್ಪಂಡಿ, ಬಿ.ಎನ್. ಪ್ರಭುನವರ, ಜಗದೀಶ ಶಿರಸಂಗಿ, ಸುನೀಲ ಸುಳ್ಳದ, ಮಂಜು ಪಾಚಂಗಿ, ಬಾಪು ಪುಣೇದ, ಸುನೀಲ ತಾರೀಹಾಳ, ಮೈತ್ರಾದೇವಿ ವಸ್ತ್ರದ, ಶಿವಾನಂದ ಪಟ್ಟಣಶೆಟ್ಟಿ, ಕಿರಣ ಉದಪುಡಿ, ಬಾಲು ರೇವಡಿ ಇತರರು ಇದ್ದರು.

ರಾಮನಗೌಡ ಗಿದಿಗೌಡರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.