ಹಿಂದುಳಿದವರ ಏಳಿಗೆಗೆ ಶ್ರಮಿಸಬೇಕಾದ ಅಗತ್ಯವಿದೆ

| Published : Jul 07 2025, 11:48 PM IST

ಸಾರಾಂಶ

ಟಿ.ನರಸೀಪುರ: ದಲಿತ ವರ್ಗದ ಅಭಿವೃದ್ಧಿಗೆ ಶ್ರಮಿಸಿದ ಡಾ. ಬಾಬು ಜಗ ಜೀವನರಾಂ ಅವರ ಜೀವನದ ಆದರ್ಶ ಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳುವ ಮೂಲಕ ಸಮಾಜದಲ್ಲಿ ಹಿಂದುಳಿದವರ ಏಳಿಗೆಗೆ ಶ್ರಮಿಸಬೇಕಾದ ಅಗತ್ಯವಿದೆ ಎಂದು ಪುರಸಭೆ ಸದಸ್ಯ, ತಾಲೂಕು ಡಾ.ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಅರ್ಜುನ್ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಟಿ.ನರಸೀಪುರ: ದಲಿತ ವರ್ಗದ ಅಭಿವೃದ್ಧಿಗೆ ಶ್ರಮಿಸಿದ ಡಾ. ಬಾಬು ಜಗ ಜೀವನರಾಂ ಅವರ ಜೀವನದ ಆದರ್ಶ ಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳುವ ಮೂಲಕ ಸಮಾಜದಲ್ಲಿ ಹಿಂದುಳಿದವರ ಏಳಿಗೆಗೆ ಶ್ರಮಿಸಬೇಕಾದ ಅಗತ್ಯವಿದೆ ಎಂದು ಪುರಸಭೆ ಸದಸ್ಯ, ತಾಲೂಕು ಡಾ.ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಅರ್ಜುನ್ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 39ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಎಲ್ಲ ಜಾತಿಯ ಬಡವರ ಉದ್ದಾರವಾಗುವವರೆಗೆ ದೇಶದ ಅಭಿವದ್ಧಿ ಸಾಧ್ಯವಿಲ್ಲ. ದೇಶದ ರೈತರು ಆಧುನಿಕ ಬೇಸಾಯ ಪದ್ದತಿ ಅಳವಡಿಸಿ ಕೊಳ್ಳುವವರೆಗೆ ದೇಶದಲ್ಲಿ ರೈತರ ಅಭಿವೃದ್ಧಿಯಾಗಲ್ಲ ಎಂದು ಹೇಳುತ್ತಿದ್ದ ಜಗ ಜೀವನರಾಂ ಅವರು ದೇಶದ ಕೃಷಿ ಸಚಿವರಾಗಿ ಕ್ರಾಂತಿಯನ್ನೇ ಸೃಷ್ಠಿ ಸಿದ ವ್ಯಕ್ತಿ. ಇವರ ಅವಧಿಯಲ್ಲಿ ರಾಸಾಯನಿಕ ಗೊಬ್ಬರ ಪದ್ದತಿಯನ್ನು ಪರಿಚಯಿಸಿ, ಆಧುನಿಕ ಬೇಸಾಯ ಪದ್ದತಿ ಅಳವಡಿಸಲಾಯಿತು ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ. ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ, ಜಿಪಂ ಮಾಜಿ ಸದಸ್ಯ ಹೊನ್ನನಾಯಕ, ಬಾಬೂಜಿ ಸಂಘದ ನಿಕಟಪೂರ್ವ ಅಧ್ಯಕ್ಷ ಪುಟ್ಟಯ್ಯ, ಸಿದ್ದರಾಜು, ಮೈಸೂರು ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಬಸವಣ್ಣ ಮಾತನಾಡಿದರು.

ಬಾಬು ಜಗಜೀವನರಾಂ ಜನಕಲ್ಯಾಣ ಟ್ರಸ್ಟ್ ನ ಅಧ್ಯಕ್ಷ ಮಲಿಯೂರು ಶಂಕರ್, ತಾಪಂ ಮಾಜಿ ಸದಸ್ಯ ರಾಮಲಿಂಗಯ್ಯ ಪ್ರಸನ್ನ, ಗ್ರಾಪಂ ಸದಸ್ಯ ಶಿವಶಂಕರ್, ಗ್ರಾಪಂ ಮಾಜಿ ಅಧ್ಯಕ್ಷ ನಿಂಗರಾಜು, ಮುಖಂಡರಾದ ಗೋವಿಂದರಾಜು, ಮಾದೇಶ್, ಸಂದೀಪ್, ಸಿ.ಡಿ. ವೆಂಕಟೇಶ್, ಕೃಷ್ಣಮೂರ್ತಿ, ಪುಟ್ಟಸ್ವಾಮಿ, ಸುನಿಲ್, ಲಿಂಗರಾಜು, ಸುಂದರ್, ರಜಿನಿರಾಜ್, ರಾಚಯ್ಯ, ಶಿವಪ್ರಸಾದ್, ರಾಚಪ್ಪ, ಸಮಾಜ ಕಲ್ಯಾಣ ಅಧಿಕಾರಿ ವಿನೂತನ್, ಬಿಇಓ ಶಿವಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಬಿ.ಕೆ. ವಸಂತ ಕುಮಾರಿ, ಹಿಂದುಳಿದ ವರ್ಗಗಳ ಅಧಿಕಾರಿ ರಾಜಣ್ಣ ಇದ್ದರು.