ಸಾರಾಂಶ
ನ್ಯಾಮತಿ ಪಟ್ಟಣದ ಬನಶಂಕರಿ ದೇವಸ್ಥಾನ ಹತ್ತಿರ ಹಾಗೂ ಪುಷ್ಕರಿಣಿ ಪಕ್ಕದಲ್ಲಿ ರಾತ್ರಿಯಾದರೆ ಕುಡುಕರ ಹಾವಳಿ ಮಿತಿಮೀರುತ್ತಿದೆ. ಭಕ್ತರು ದಿನವೂ ಬೆಳಗ್ಗೆ ದೇವಿ ದರ್ಶನಕ್ಕೆ ಹೋಗುತ್ತಾರೆ. ಆದರೆ, ಅಲ್ಲಲ್ಲಿ ಕುಡಿದು ಒಡೆದ ಹಾಕಿದ ಬಾಟಲಿಗಳು ಇನ್ನಿತರೆ ಪರಿಸರ ಮಾರಕ ವಸ್ತುಗಳಿಂದ ಸ್ವಚ್ಛತೆಗೆ ಧಕ್ಕೆಯಾಗಿದೆ.
ಕನ್ನಡಪ್ರಭ ವಾರ್ತೆ, ನ್ಯಾಮತಿ
ಪಟ್ಟಣದ ಬನಶಂಕರಿ ದೇವಸ್ಥಾನ ಹತ್ತಿರ ಹಾಗೂ ಪುಷ್ಕರಿಣಿ ಪಕ್ಕದಲ್ಲಿ ರಾತ್ರಿಯಾದರೆ ಕುಡುಕರ ಹಾವಳಿ ಮಿತಿಮೀರುತ್ತಿದೆ. ಭಕ್ತರು ದಿನವೂ ಬೆಳಗ್ಗೆ ದೇವಿ ದರ್ಶನಕ್ಕೆ ಹೋಗುತ್ತಾರೆ. ಆದರೆ, ಅಲ್ಲಲ್ಲಿ ಕುಡಿದು ಒಡೆದ ಹಾಕಿದ ಬಾಟಲಿಗಳು ಇನ್ನಿತರೆ ಪರಿಸರ ಮಾರಕ ವಸ್ತುಗಳಿಂದ ಸ್ವಚ್ಛತೆಗೆ ಧಕ್ಕೆಯಾಗಿದೆ.ಮದ್ಯಸೇವನೆ ಮತ್ತಿತರ ಅಕ್ರಮ ಚಟುವಟಿಕೆಗಳು ದೇಗುಲ ಪ್ರದೇಶ ವ್ಯಾಪ್ತಿಯಲ್ಲಿ ನಡೆಯದಂತೆ ಪೊಲೀಸ್ ಅಧಿಕಾರಿಗಳು ಸೂಕ್ತವಾಗಿ ಗಮನಹರಿಸಬೇಕಾಗಿದೆ. ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿ, ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮುಸಿಯ, ನಾಯಿಗಳ ಕಾಟ:ನ್ಯಾಮತಿ ಪಟ್ಟಣದಲ್ಲಿ ಮಂಗ ಮತ್ತು ಬೀದಿನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಮನೆಗಳ ಮೇಲೆ ಮುಸಿಯಗಳು ಓಡಾಡುವುದರಿಂದ ಹೆಂಚುಗಳು ಒಡೆಯುವುದು, ಕೀಳುವುದು ಹಾಳುಮಾಡುವುದು, ಮನೆ ಹಿತ್ತಲಲ್ಲಿ ತರಕಾರಿಗಳನ್ನು ಕಿತ್ತು ತಿಂದು, ಬೀಸಾಡುವುದು ಸಾಮಾನ್ಯವಾಗಿದೆ. ಒಂದುಕಡೆ ಮನೆಗಳ ಮೇಲೆ ಮುಸಿಯಗಳ ಕಾಟವಾದರೆ ಇತ್ತ ಸಾರ್ವಜನಿಕರು ಸಂಚರಿಸುವ ಸ್ಥಳಗಳಲ್ಲಿ ಬೀದಿನಾಯಿಗಳ ಕಾಟವೂ ಹೆಚ್ಚಾಗುತ್ತಿದೆ. ಸಾರ್ವಜನಿಕರು ನೆಮ್ಮದಿ, ನಿರಾತಂಕವಾಗಿ ಸಂಚರಿಸುವುದೇ ಕಷ್ಟವಾಗಿದೆ.
ಸಾರ್ವಜನಿಕರಿಗೆ ಗಂಭೀರ ತೊಂದರೆ ಆಗುವ ಮೊದಲೇ ನ್ಯಾಮತಿ ಪಟ್ಟಣ ಪಂಚಾಯಿತಿ ಆಡಳಿತ ದೇಗುಲ ಬಳಿ ಅಕ್ರಮಗಳು ಹಾಗೂ ಪಟ್ಟನದಲ್ಲಿ ಬೀದಿನಾಯಿಗಳು, ಮುಸಿಯಗಳ ಕಾಟಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಜನರ ಆಗ್ರಹವಾಗಿದೆ.- - -
(ಮಂಕಿ)ಸಾಂದರ್ಭಿಕ ಚಿತ್ರ
;Resize=(128,128))
;Resize=(128,128))
;Resize=(128,128))
;Resize=(128,128))