ರಾಜ್ಯದಲ್ಲಿದೆ ಶ್ರೀರಾಮ ವಿರೋಧಿ ಸರ್ಕಾರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

| Published : Jan 22 2024, 02:19 AM IST

ರಾಜ್ಯದಲ್ಲಿದೆ ಶ್ರೀರಾಮ ವಿರೋಧಿ ಸರ್ಕಾರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮ ನೆಲೆಸಿರುವ ಅಯ್ಯೋಧ್ಯೆ ಎಷ್ಟು ಪವಿತ್ರವೋ ಅಷ್ಟೇ ಹನುಮ ಜನಿಸಿದ ಅಂಜನಾದ್ರಿ ಪವಿತ್ರವಾದುದು. ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ₹120 ಕೋಟಿ ಅನುದಾನ ನೀಡಿದ್ದರು. ಅದರಂತೆ ಈಗಿನ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ಶ್ರಮಿಸಬೇಕು.

ಗಂಗಾವತಿ: ಇಡೀ ದೇಶದ ಗಮನವೇ ಅಯೋಧ್ಯೆ ಕಡೆಗೆ ಇರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲು ಮೀನಮೇಷ ಎಣಿಸುತ್ತಿದೆ. ಇದು ಶ್ರೀರಾಮ ವಿರೋಧಿ ಸರ್ಕಾರವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ದೇಶವೇ ರಾಮನತ್ತ ಚಿತ್ತ ಹರಿಸುತ್ತಿದೆ. ಕೆಲ ರಾಜ್ಯಗಳಲ್ಲೂ ಸರ್ಕಾರಗಳು ರಜೆ ಘೋಷಿಸಿವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಜೆ ಘೋಷಿಸದೇ ಇರುವುದು ವಿಷಾದನೀಯ ಎಂದರು.ಶ್ರೀರಾಮ ನೆಲೆಸಿರುವ ಅಯ್ಯೋಧ್ಯೆ ಎಷ್ಟು ಪವಿತ್ರವೋ ಅಷ್ಟೇ ಹನುಮ ಜನಿಸಿದ ಅಂಜನಾದ್ರಿ ಪವಿತ್ರವಾದುದು. ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ₹120 ಕೋಟಿ ಅನುದಾನ ನೀಡಿದ್ದರು. ಅದರಂತೆ ಈಗಿನ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಆರಂಭವಾಗಲಿದೆ. ಇದಕ್ಕಾಗಿ ಇಲ್ಲಿಯ ಸಂಸದರು ಸಾಕಷ್ಟು ಶ್ರಮಿಸಿದ್ದಾರೆ. ಅಯೋಧ್ಯೆ ಮಂದಿರ ಉದ್ಘಾಟನೆ ಆಗುತ್ತಿರುವುದು ಇತಿಹಾಸಿಕ ಘಟನೆಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಿಂಗನಾಳ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.