ಲಿಂಗಾನುಪಾತ ವ್ಯತ್ಯಯ ಸರಿದೂಗಿಸವುದು ಅಗತ್ಯ

| Published : Jan 25 2024, 02:00 AM IST

ಲಿಂಗಾನುಪಾತ ವ್ಯತ್ಯಯ ಸರಿದೂಗಿಸವುದು ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜೀವನದಲ್ಲಿ ಎದುರಿಸುತ್ತಿರುವ ಅಸಮಾನತೆಗಳನ್ನು ಎತ್ತಿ ತೋರಿಸಲು ಬುಧವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 938 ಹೆಣ್ಣು ಮಕ್ಕಳ ಲಿಂಗಾನುಪಾತವಿರುತ್ತದೆ. ಈ ಅನುಪಾತದ ವ್ಯತ್ಯಾಸವನ್ನು ಸರಿದೂಗಿಸಬೇಕು.

ಚಿತ್ರದುರ್ಗ: ಲಿಂಗ ಅಸಮಾನತೆ ತೊಲಗಿಸಿ ಹೆಣ್ಣು ಮಕ್ಕಳಿಗೆ ಸಮಾನತೆ ಕಲ್ಪಿಸೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳವರ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜೀವನದಲ್ಲಿ ಎದುರಿಸುತ್ತಿರುವ ಅಸಮಾನತೆಗಳನ್ನು ಎತ್ತಿ ತೋರಿಸಲು ಬುಧವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 938 ಹೆಣ್ಣು ಮಕ್ಕಳ ಲಿಂಗಾನುಪಾತವಿರುತ್ತದೆ. ಈ ಅನುಪಾತದ ವ್ಯತ್ಯಾಸವನ್ನು ಸರಿದೂಗಿಸಬೇಕು ಎಂದರು.

ಶುಚಿ ಮೈತ್ರಿ ಮುಟ್ಟಿನ ಕಪ್ಪಿನ ಯೋಜನೆ ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಪೈಲೆಟ್ ಯೋಜನೆಯಂತೆ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳಿಸಲಾಗುವುದು. ಪರಿಸರಸ್ನೇಹಿ ಯೋಜನೆಯ ಉಪಯೋಗದಿಂದ ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆಯಾಗುವುದು. ತಾಯಂದಿರ ಸಭೆಗಳಲ್ಲಿ ಪೌಷ್ಟಿಕ ಆಹಾರ ಮುಟ್ಟಿನ ಕಪ್ ಬಳಕೆ ಬಗ್ಗೆ ಹೆಚ್ಚು ಪ್ರಚಾರ ನೀಡಿರಿ ಎಂದರು.

ಡಾ.ಕವಿತಾ ಖಂಡೇನಹಳ್ಳಿ ಮಾತನಾಡಿ, ಮುಟ್ಟಿನ ಕಪ್ಪು ಹೇಗೆ ಬಳಕೆ ಮಾಡಬೇಕು. ಉಂಟಾಗುವ ಆರೋಗ್ಯ ಪರಿಣಾಮಗಳು ಏನು? ಮುಟ್ಟಿನ ಕಪ್‍ಗಳ ಉಪಯೋಗದಿಂದ ಮುಜುಗರ ಹೊರಟು ಹೋಗಿ ಸ್ವಾತಂತ್ರ್ಯದ ಭಾವ ಹೇಗೆ ಉಂಟಾಗುತ್ತದೆ ಎಂಬುದು ವಿವರಿಸಿದರು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಗೌರಮ್ಮ ಮಾತನಾಡಿ, ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಬೇಟಿ ಬಚಾವೋ ಭೇಟಿ ಪಢಾವೋ ಯೋಜನೆ ಜಾರಿಯಲ್ಲಿದೆ. ಸುಕನ್ಯಾ ಸುರಕ್ಷಾ ಯೋಜನೆ ಅಡಿ ಪೋಸ್ಟ್ ಆಫೀಸ್ ಆರ್‌ಡಿ ಖಾತೆ ತೆರೆದಲ್ಲಿ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಉಪಯೋಗವಾಗುತ್ತದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಹೆಣ್ಣು ಮಕ್ಕಳನ್ನು ಬಲಶಾಲಿಯಾಗಿ, ಸ್ವಾತಂತ್ರ್ಯರಾಗಿ ಮತ್ತು ಭಯಮುಕ್ತರಾಗಿ ಬೆಳೆಸೋಣ. ಈ ಸಂಬಂಧ ಗ್ರಾಮ ಗ್ರಾಮಗಳಲ್ಲಿ ಗುಂಪು ಸಭೆಯ ತಾಯಂದಿರ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಬೇಕು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿದರು. ಕಾರ್ಯಕ್ರಮವನ್ನು ಮೈತ್ರಿ ಮುಟ್ಟಿನ ಕಪ್ ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಸ್ಮಿತಾ ಆದಿವಾಲ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹನುಮಂತ ಗೌಡ ಪೂಜಾರ್, ನೇತ್ರಾಧಿಕಾರಿ ರಜಿನಿ ಇತರರು ಇದ್ದರು.