ಸಾರಾಂಶ
ಮನುಷ್ಯರು ಮಾಡಿಕೊಂಡಿರುವ ಅನಿಷ್ಟ ಪದ್ಧತಿಯನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯ. ಗ್ರಾಮಗಳಲ್ಲಿ ಜನರು ಜಾತಿಬೇಧಗಳನ್ನು ಮರೆತು ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಮನುಷ್ಯ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು.
ಕನ್ನಡಪ್ರಭ ವಾರ್ತೆ ಭಾರತೀನಗರ
ದೇವರಿಗೆ ಯಾವುದೇ ಜಾತಿ ಧರ್ಮವಿಲ್ಲ. ಮನುಷ್ಯರು ಯಾವುದೇ ವರ್ಣಬೇಧ, ಜಾತಿ-ಧರ್ಮ ಎಂದು ವಿಂಗಡಿಸದೆ ಎಲ್ಲರನ್ನೂ ಸರಿಸಮಾನರಂತೆ ಕಾಣಬೇಕು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸಲಹೆ ನೀಡಿದರು.ಅಣ್ಣೂರು ಗ್ರಾಮದಲ್ಲಿ ಶ್ರೀಹಟ್ಟಿಮಾರಮ್ಮ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿ, ಮನುಷ್ಯರು ಮಾಡಿಕೊಂಡಿರುವ ಅನಿಷ್ಟ ಪದ್ಧತಿಯನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದರು.
ಗ್ರಾಮಗಳಲ್ಲಿ ಜನರು ಜಾತಿಬೇಧಗಳನ್ನು ಮರೆತು ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಮನುಷ್ಯ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಕಾಂಗ್ರೆಸ್ ಮುಖಂಡ ಆಶಯ್‌ಮಧು ಮಾತನಾಡಿ, ಮಾನವ ಜನ್ಮ ಅಮೂಲ್ಯವಾದ ದೇವರ ಅನುಗ್ರಹವಿರುವ ಜನ್ಮ. ವೈರಾಗ್ಯವನ್ನು ರೂಢಿಸಿಕೊಂಡು ದ್ವೇಷ-ಅಸೂಯೆಗಳನ್ನು ಬಿಟ್ಟು ಪರೋಪಕಾರಂ ಇದಂ ಶರೀರಂ ಎಂಬ ನಾಣ್ಣುಡಿಯಂತೆ ನಾವು ಜೀವನ ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಇದೇ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಕಾಂಗ್ರೆಸ್ ಮುಖಂಡ ಆಶಯ್‌ಮಧು ಅವರನ್ನು ಅಭಿನಂದಿಸಲಾಯಿತು.ತುಮಕೂರು ಜಿಲ್ಲೆಯ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಿಂದ ಆಗಮಿಸಿದ್ದ ಆನೆಯಿಂದ ವೇಳೆ ಡಿ.ಸಿ.ತಮ್ಮಣ್ಣ ಮತ್ತು ಆಶಯ್ ಮಧು ಆಶೀರ್ವಾದ ಪಡೆದುಕೊಂಡರು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಜರುಗಿತು. ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಮಧುಜಿಮಾದೇಗೌಡ, ಕಾಂಗ್ರೆಸ್ ಮುಖಂಡ ರವಿಕುಮಾರ್, ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಣಿ, ಶ್ರೀಹಟ್ಟಿಮಾರಮ್ಮ ದೇವಸ್ಥಾನದ ತೆಂಡೆಯಜಮಾನರು, ಯಜಮಾನರು, ಮುಖಂಡರು ಭಾಗವಹಿಸಿದ್ದರು.