ಸಾರಾಂಶ
ಸೌಲಭ್ಯ ಕೊರತೆ । 1960ರ ದಶಕದಲ್ಲಿ ವಿಶ್ವ ಬ್ಯಾಂಕಿನ ನೆರವಿನಿಂದ ಸ್ಥಾಪಿತ । ಎಪಿಎಂಸಿ ಮಾರುಕಟ್ಟೆ ಕರ್ನಾಟಕದಲ್ಲೇ ಹೆಸರುವಾಸಿ । ಬೆಳೆಗಳ ದಾಸ್ತಾನು ಕೊರತೆ
ಅನಂತ ನಾಡಿಗ್ಕನ್ನಡಪ್ರಭ ವಾರ್ತೆ ತರೀಕೆರೆ
ಚಿಕ್ಕಮಗಳೂರು ಜಿಲ್ಲೆಯ ಉಪವಿಭಾಗ ಕೇಂದ್ರವಾದ ತರೀಕೆರೆ ಜಿಲ್ಲೆಯ ಎರಡನೆ ದೊಡ್ಡ ನಗರವಾಗಿದೆ. ಈ ನಗರದ ಸಂತೆ ಮಧ್ಯೆಯಲ್ಲೇ 1960ರ ದಶಕದಲ್ಲಿ ವಿಶ್ವ ಬ್ಯಾಂಕಿನ ನೆರವಿನಿಂದ ಸ್ಥಾಪನೆಯಾದ ಎಪಿಎಂಸಿ ಮಾರುಕಟ್ಟೆ ಕರ್ನಾಟಕದಲ್ಲೇ ಹೆಸರುವಾಸಿಯಾಗಿದೆ. ಇಂತಹ ಪ್ರಮುಖ ಎಪಿಎಂಸಿಯಲ್ಲಿ ಶೀಥಲ ಘಟಕವಿಲ್ಲದೆ ರೈತರು ನಷ್ಟ ಅನುಭವಿಸುವ ಸಂಕಷ್ಟ ಮಾತ್ರ ದೂರಾಗಿಲ್ಲ.ತರೀಕೆರೆಯಲ್ಲಿ ಮೊದಲಿನಿಂದಲೂ ಪ್ರತಿ ಶುಕ್ರವಾರ ನಡೆಯುತ್ತಿರುವ ವಾರದ ಸಂತೆ ಶ್ರೀ ಸಾಮಾನ್ಯರ ಮುಕ್ತ ಮಾರುಕಟ್ಟೆಯಾಗಿದ್ದು ತರಕಾರಿ, ಹೂವು, ಹಣ್ಣು, ಧವಸ ಧಾನ್ಯಗಳು, ಬೆಲ್ಲದಿಂದ ಹಿಡಿದು ಬೇಳೆಕಾಳುಗಳವರೆಗೆ, ತೈಲ ಪದಾರ್ಥಗಳು, ಗೃಹೋಪಯೋಗಿ ಪದಾರ್ಥಗಳು ಇಲ್ಲಿ ದೊರೆಯುವುದರಿಂದ ತರೀಕೆರೆ ಶುಕ್ರವಾರದ ಸಂತೆ ಆಪಾರ ಜನಪ್ರಿಯತೆ ಪಡೆದಿದೆ.
ಈ ಭಾಗದ ಪ್ರಮುಖ ಮಾರುಕಟ್ಟೆಯಾದ ತರೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಖ್ಯ ಮಾರುಕಟ್ಟೆಯೊಂದಿಗೆ ಅಜ್ಜಂಪುರ ಮತ್ತು ಶಿವನಿ ಉಪ ಮಾರುಕಟ್ಟೆಗಳನ್ನು ಹೊಂದಿದ್ದು ಇದರಲ್ಲಿ ತರೀಕೆರೆ-ಅಜ್ಜಂಪುರದ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಬೃಹತ್ ಗೋದಾಮಗಳನ್ನು ಹೊಂದಿದೆ.ತರೀಕೆರೆ ಖಾಸಗಿ ಬಸ್ ನಿಲ್ದಾಣದ ಹಿಂದೆ ಇದ್ದ ಶುಕ್ರವಾರದ ಮುಕ್ತ ಮಾರುಕಟ್ಟೆ ಎಪಿಎಂಸಿ ಆವರಣಕ್ಕೆ ಹೊಂದಿ ಕೊಂಡಂತಿದ್ದು, ಇಲ್ಲೂ ಮಾರಾಟಕ್ಕೆ ಅವಕಾಶವಿದ್ದು ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆ ಬೆಳೆಯುವ ಜೊತೆ ಹೊರ ಜಿಲ್ಲೆಗಳು ಮತ್ತು ಹೊರರಾಜ್ಯದಿಂದ ಹಸಿ ಅಡಕೆ ತಂದು ಇಲ್ಲಿಯೇ ಸಂಸ್ಕರಿಸುವ ರೈತರಿಗೆ ಅಡಕೆ ಎಪಿಎಂಸಿ ವರಮಾನದ ಮೂಲ.
ಶೀಥಲ ಘಟಕದ ಅಗತ್ಯತೆ:ಬೆಲೆ ಬರುವವರೆಗೆ ಬೆಳೆದ ಬೆಳೆಯನ್ನು ಇಟ್ಟುಕೊಂಡು ಕಾಯಲು ಶೀಥಲ ಘಟಕಗಳೇ ಇಲ್ಲದಿರುವುದರಿಂದ ಪದಾರ್ಥಗಳನ್ನು ಹಿಡಿದಿಟ್ಟುಕೊಳ್ಳಲು ಆಗದೆ ಬಂದಷ್ಟಕ್ಕೆ ಮಾರುವಂತಹ ಸ್ಥಿತಿ ಇದೆ. ಇದಕ್ಕೆ ಶಾಶ್ವತ ಪರಿಹಾರ ಪಡೆಯಲು ಎಪಿಎಂಸಿ ಆವರಣದಲ್ಲಿ ಸುಸಜ್ಜಿತ ಶೀಥಲ ಘಟಕ ಸ್ಥಾಪನೆ ಅಗತ್ಯವಿದೆ.
ಶೀಥಲ ಘಟಕದಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಸಂಗ್ರಹಿಸಿ ಅವಶ್ಯವಿದ್ಯರೆ ತಾತ್ಕಾಲಿಕ ಆಡಮಾನ ಸಾಲ ಪಡೆದು. ನಂತರ ಬೆಲೆ ಬಂದಾಗ ಮಾರು ವಂತಾದರೆ ರೈತರ ಶ್ರಮ ಸಾರ್ಥಕವಾದೀತು. ಕಷ್ಟಪಟ್ಟು ಬೆಳೆದ ವಿವಿಧ ಬೆಳೆಗಳಿಗೂ ಸಹ ಉತ್ತಮ ಬೆಲೆ ದೊರಕುತ್ತದೆ.ಇತ್ತೀಚೆಗೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧೆಡೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಗಳಲ್ಲಿ ಹತ್ತು ಶೀಥಲ ಘಟಕ ಸ್ಥಾಪಿಸುವ ತೀರ್ಮಾನ ತೆಗೆದುಕೊಂಡಿದ್ದು ಇದರಲ್ಲಿ ಒಂದು.
ತರೀಕೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಶೀಥಲ ಘಟಕ ಸ್ಥಾಪನೆಯಾದರೆ, ರೈತರು ತಾವು ಬೆಳೆದ ವಿವಿಧ ಬೆಳೆಗಳನ್ನು ಕೆಡದಂತೆ ಸುರಕ್ಷಿತವಾಗಿಡಬಹುದು, ಈ ಬಗ್ಗೆ ಸರ್ಕಾರದ ಗಮನ ಸೆಳೆದು ತರೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೀಥಲ ಘಟಕ ಸ್ಥಾಪನೆಗೆ ಪ್ರಯತ್ನಿಸ ಲಾಗುವುದು.ಜಿ.ಎಚ್.ಶ್ರೀನಿವಾಸ್, ಶಾಸಕ
ಉಪವಿಭಾಗ ಕೇಂದ್ರವಾದ ತರೀಕೆರೆ ಎಪಿಎಂಸಿಯಲ್ಲಿ ಶೀಥಲ ಘಟಕ ಸ್ಥಾಪನೆಯಿಂದ ರೈತರು ತಾವು ಬೆಳೆದ ವಿವಿಧ ಕೃಷಿ ಉತ್ಪನ್ನಗಳನ್ನು ಶೀಥಲ ಘಟಕದಲ್ಲಿ ಶೇಖರಿಸಿಬಹುದು. ತರೀಕೆರೆ ಎಪಿಎಂಸಿಗೆ ಶೀಥಲ ಘಟಕ ಅಗತ್ಯವಾಗಿದೆ.
ಟಿ.ಆರ್.ಶ್ರೀಧರ್, ಎಪಿಎಂಸಿ ಮಾಜಿ ಸದಸ್ಯ.