ಸಾರಾಂಶ
ಯತ್ನಾಳ್ ಉಚ್ಛಾಟನೆಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುವಾಗ ಸಾಧಕ ಬಾಧಕ ತಿಳಿದುಕೊಂಡಿರುತ್ತಾರೆ, ಹಿರಿಯರ ತೀರ್ಮಾನದಲ್ಲಿ ಯಾವುದೇ ವ್ಯತ್ಯಾಸ ಆಗಲು ಸಾಧ್ಯವಿಲ್ಲ. ಯಾವುದೇ ಪರಿಸ್ಥಿತಿಯನ್ನು ಸುಧಾರಿಸುವ ಶಕ್ತಿ ನಮ್ಮ ಕೇಂದ್ರ ನಾಯಕರಿಗೆ ಇದೆ. ಪಕ್ಷದ ಸೂಚನೆಯ ಮೇರೆಗೆ ರಾಜ್ಯಾಧ್ಯಕ್ಷರು ಕೆಲಸ ಮಾಡುತ್ತಾರೆ. ಪಕ್ಷದ ತೀರ್ಮಾನದ ಬಗ್ಗೆ ಎಲ್ಲರೂ ಒಪ್ಪಿಕೊಳ್ಳಬೇಕು. ರಾಜ್ಯಾಧ್ಯಕ್ಷರ ಬಗ್ಗೆ ಯಾರು ಕೂಡ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿಬಸನಗೌಡ ಪಾಟೀಲ್ ಯತ್ನಾಳ್ ಹಿರಿಯ ನಾಯಕರು, ಕೇಂದ್ರ ಸಚಿವರಾಗಿದ್ದವರು. ಅವರಿಗೆ ಪಕ್ಷದ ವರಿಷ್ಠರು ನೋಟಿಸ್ ನೀಡಿದರೂ ನಿಯಮ ಮೀರಿ ಹೇಳಿಕೆ ನೀಡಿದರು. ಆದರೆ ಕಾಲ ಮಿಂಚಿಲ್ಲ ವರಿಷ್ಠರ ಜೊತೆ ಚರ್ಚೆಗೆ ಅವಕಾಶ ಇದೆ, ತಪ್ಪು ಅರಿವಾಗಿ ಸುಧಾರಿಸಿಕೊಳ್ಳಲು ಅವಕಾಶ ಇದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಅವರು ಗುರುವಾರ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆಗೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.ಯತ್ನಾಳ್ ಉಚ್ಛಾಟನೆಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುವಾಗ ಸಾಧಕ ಬಾಧಕ ತಿಳಿದುಕೊಂಡಿರುತ್ತಾರೆ, ಹಿರಿಯರ ತೀರ್ಮಾನದಲ್ಲಿ ಯಾವುದೇ ವ್ಯತ್ಯಾಸ ಆಗಲು ಸಾಧ್ಯವಿಲ್ಲ. ಯಾವುದೇ ಪರಿಸ್ಥಿತಿಯನ್ನು ಸುಧಾರಿಸುವ ಶಕ್ತಿ ನಮ್ಮ ಕೇಂದ್ರ ನಾಯಕರಿಗೆ ಇದೆ. ಪಕ್ಷದ ಸೂಚನೆಯ ಮೇರೆಗೆ ರಾಜ್ಯಾಧ್ಯಕ್ಷರು ಕೆಲಸ ಮಾಡುತ್ತಾರೆ. ಪಕ್ಷದ ತೀರ್ಮಾನದ ಬಗ್ಗೆ ಎಲ್ಲರೂ ಒಪ್ಪಿಕೊಳ್ಳಬೇಕು. ರಾಜ್ಯಾಧ್ಯಕ್ಷರ ಬಗ್ಗೆ ಯಾರು ಕೂಡ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.ನಮ್ಮ ಕರಾವಳಿ ಭಾಗದಲ್ಲಿ ಈ ಉಚ್ಛಾಟನೆ ಬಗ್ಗೆ ಯಾವುದೇ ಗೊಂದಲ ಇಲ್ಲ, ಕೇಂದ್ರದ ನಾಯಕರು ಶಿಸ್ತು ಸಮಿತಿ ಮೂಲಕ ನಿರ್ಧಾರ ಕೈಗೊಂಡಿದ್ದಾರೆ. ಪಕ್ಷದ ತೀರ್ಮಾನ ದಲ್ಲಿ ಯಾವುದೇ ವ್ಯತ್ಯಾಸ ಗೊಂದಲ ಇಲ್ಲ. ಪಕ್ಷದ ತೀರ್ಮಾನಕ್ಕೆ ಶಾಸಕನಾಗಿ ನಾನು ಬದ್ಧನಾಗಿದ್ದೇನೆ ಎಂದವರು ಹೇಳಿದರು.ಬಿಜೆಪಿ ಪಕ್ಷಕ್ಕೆ ಒಂದು ಶಿಸ್ತು ಇದೆ, ಚೌಕಟ್ಟು ಇದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ರಾಜ್ಯದ ಎಲ್ಲಾ 224 ಬಿಜೆಪಿ ಅಭ್ಯರ್ಥಿಗಳು ಹಿಂದುತ್ವ ಪ್ರತಿಪಾದಕರೇ ಆಗಿದ್ದಾರೆ. ನಾವು ಗೆದ್ದವರು ಎಲ್ಲರೂ ಹಿಂದುತ್ವದ ಪರ ಕೆಲಸ ಮಾಡುವವರು, ಹಿಂದುತ್ವ ಬಿಜೆಪಿಯ ಒಂದು ಭಾಗ, ಹಿಂದುತ್ವ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಕೆಲವರು ಅಗ್ರೆಸ್ಸಿವ್ ಆಗಿ ಇರ್ತಾರೆ, ಕೆಲವರು ವ್ಯವಸ್ಥೆ ಅಡಿಯಲ್ಲಿ ಕಾರ್ಯಕರ್ತರನ್ನು ಜೋಡಿಸುವ ಕೆಲಸ ಮಾಡುತ್ತಾರೆ. ಯಾವುದೇ ಪಕ್ಷ ಕಟ್ಟಲು ಕಾರ್ಯಕರ್ತರು ಬೇಕು, ಕಾರ್ಯಕರ್ತರಿಗೆ ಸಮಸ್ಯೆ ಆದಾಗ ಪಕ್ಷ ಸ್ಪಂದಿಸುತ್ತದೆ ಎಂದು ಶಾಸಕರು ಹೇಳಿದರು.