ಸಾಧನೆಗೆ ಪುರುಷ-ಮಹಿಳೆ ಎಂಬ ಭೇದ-ಭಾವವಿಲ್ಲ. ಗುರಿ ಸಾಧಿಸುವ ಛಲ, ಆತ್ಮವಿಶ್ವಾಸ ಹಾಗೂ ನಿರಂತರ ಪರಿಶ್ರಮ ಇದ್ದರೆ ಯಾವುದೇ ಶಿಖರವನ್ನಾದರೂ ಏರಬಹುದು ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಹೇಳಿದರು.

ಕನ್ನಡಪ್ರಭ ವಾರ್ತೆ ನರೇಗಲ್ಲ

ಸಾಧನೆಗೆ ಪುರುಷ-ಮಹಿಳೆ ಎಂಬ ಭೇದ-ಭಾವವಿಲ್ಲ. ಗುರಿ ಸಾಧಿಸುವ ಛಲ, ಆತ್ಮವಿಶ್ವಾಸ ಹಾಗೂ ನಿರಂತರ ಪರಿಶ್ರಮ ಇದ್ದರೆ ಯಾವುದೇ ಶಿಖರವನ್ನಾದರೂ ಏರಬಹುದು ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದ ಯುವ ಪರ್ವತಾರೋಹಿ ಸೃಷ್ಟಿ ಮೇಟಿ ಅವರು 15,500 ಮೀಟರ್ ಎತ್ತರದ ಹರ‍್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಧನೆ ಮಾಡಿರುವ ಹಿನ್ನೆಲೆ ಅವರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದರು.

ಯಾವುದೇ ಕ್ಷೇತ್ರದಲ್ಲಿ ಆಸಕ್ತಿ ಬೆಳೆದಾಗ ಗುರಿ ಸಾಧಿಸುವ ಛಲವೂ ಮೂಡುತ್ತದೆ. ಸೃಷ್ಟಿಯ ಸಾಧನೆ ಇಂದಿನ ಯುವಜನತೆಗೆ ಪ್ರೇರಣೆಯಾಗಿದೆ. ಜೀವನದಲ್ಲಿ ಸಾಧನೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಸೃಷ್ಟಿ ಅವರಲ್ಲಿ ಸಾಧಿಸುವ ಉತ್ಸಾಹ, ಧೈರ್ಯ ಮತ್ತು ಗುರಿಯತ್ತ ಸಾಗುವ ಮನೋಬಲವಿದೆ. ಆಕೆಯ ಮುಂದಿನ ಗುರಿ ಸಾಧನೆಗೆ ಸಮಾಜದ ಪ್ರೋತ್ಸಾಹ ಮತ್ತು ಬೆಂಬಲ ಅಗತ್ಯ ಎಂದರು.ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ತಾಪಂ ಮಾಜಿ ಸದಸ್ಯ ಮಲ್ಲಣ್ಣ ಮೇಟಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿದರು.

ಈ ವೇಳೆ ಉಮೇಶ ಮೇಟಿ, ಹೇಮಾ ಮೇಟಿ, ಮಲ್ಲನಗೌಡರ ಪರಡ್ಡಿ, ಜಿ.ಐ. ಕುರಹಟ್ಟಿ, ಎಂ.ಬಿ. ಅರಹುಣಸಿ, ಜಗದೀಶ ಕಗದಾಳ, ಡಾ. ಮಲ್ಲಿಕಾರ್ಜುನ ಮೂಗನೂರ, ಡಾ. ಎ.ವಿ. ನರೇಗಲ್ಲ, ಬಿ.ಎಂ. ಮೇಟಿ, ಗುರಪ್ಪ ಅಸೂಟಿ, ಚನ್ನಬಸವ ಅರಹುಣಸಿ, ಸಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಮುಧೋಳ, ಆರ್.ಆರ್. ಮೇಟಿ, ಎಂ.ಆರ್. ಮೇಟಿ, ಸಂಜೀವ ಅಸೂಟಿ, ರಾಜು ಮೇಟಿ ಸೇರಿದಂತೆ ಗ್ರಾಮಸ್ಥರು ಇದ್ದರು.

27ಜಿಡಿಜಿ11

15500 ಮೀ. ಎತ್ತರದ ಹರ‍್ರಾ ಟಾಪ್ ಶಿಖರ ಏರಿದ ಸೃಷ್ಟಿ ಮೇಟಿ ಅವರನ್ನು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಸನ್ಮಾನಿಸಿದರು.