ಸಾರಾಂಶ
- ವಿಜಯ ಯುವಕ ವಿದ್ಯಾಸಂಸ್ಥೆ ಕಾರ್ಯಕ್ರಮದಲ್ಲಿ ಪಾಂಡೋಮಟ್ಟಿ ಶ್ರೀ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಅವಮಾನ, ಅಭಿಮಾನ, ಸನ್ಮಾನಗಳು ಕನಸನ್ನು ನನಸು ಮಾಡುವ ಮಾರ್ಗಗಳಾಗಿವೆ. ಇವುಗಳನೆಲ್ಲಾ ಸಾರ್ಥಕಪಡಿಸಿದ ಕೀರ್ತಿ ಸಂತೆಬೆನ್ನೂರು ಗ್ರಾಮದ ನಾಡಿಗ್ ಅವರಿಗೆ ಸಲ್ಲುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದರು.ತಾಲೂಕಿನ ಸಂತೆಬೆನ್ನೂರು ಗ್ರಾಮದ ವಿಜಯ ಯುವಕ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥೆ ಹುಟ್ಟುಹಬ್ಬ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಹಾಗೂ ಸಂಸ್ಥಾಪಕ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಾತೃಭಾಷೆ ವಿಷಯದಲ್ಲಿ 125ರಿಂದ 100ಕ್ಕೆ ಅಂಕ ನಿಗದಿಮಾಡುವ ಪ್ರಯತ್ನ ಮಾಡುತ್ತಿದೆ. ಸರ್ಕಾರದ ಈ ನಿರ್ಧಾರಕ್ಕೆ ಅಕ್ಷೇಪಾರ್ಹ. ಮಾತೃಭಾಷೆಯನ್ನು ತಾತ್ಸಾರ ಮನೋಭಾವದಿಂದ ನೋಡುವುದು ಸರಿಯಲ್ಲ. ಮಾತೃಭಾಷೆಗೆ ಮನ್ನಣೆ ನೀಡುವ ಉದ್ದೇಶದಿಂದ 125 ಅಂಕ ನಿಗದಿ ಮಾಡಲಾಗಿದೆ ಎಂದರು.ವಿಧಾನ ಪರಿಷತ್ತು ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಬ್ರಿಟಿಷರು ನಮ್ಮ ಶೈಕ್ಷಣಿಕ ಹಕ್ಕನ್ನು ಮೊದಲು ಕಸಿದಿದ್ದರಿಂದ 300ಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮನ್ನು ಆಳ್ವಿಕೆ ನಡೆಸಿದರು. ಇದರ ಹೊರತಾಗಿ ಇಂದು ಗ್ರಾಮೀಣ ಭಾಗದಲ್ಲಿ ಬಡ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ 65 ವರ್ಷಗಳಿಂದ ಸಾಕ್ಷರತೆ ನೆಲೆ ನೀಡಿದ ಸತ್ಯನಾರಾಯಣ ನಾಡಿಗ್ ಅವರಿಗೆ ಅಭಿನಂದನೆಗಳು ಎಂದರು.
ಬೆಂಗಳೂರಿನ ವಾಣಿಜ್ಯ ಬರಹಗಾರ ಹಾಗೂ ಮಾರುಕಟ್ಟೆ ತಜ್ಞ ಕೆ.ಜಿ.ಕೃಪಾಲ್ ಮಾತನಾಡಿದರು. ವಿಜಯ ಯುವಕ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಸತ್ಯನಾರಾಯಣ ನಾಡಿಗ್ ಅವರಿಗೆ ಸಂಸ್ಥೆ ಆಡಳಿತ ಮಂಡಳಿ, ಹಳೆಯ ವಿದ್ಯಾರ್ಥಿಗಳ ಸಂಘ, ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಗ್ರಾಮಸ್ಥರು ಅಭಿನಂದಿಸಿ, ಸನ್ಮಾನಿಸಿದರು.ಸಂಸ್ಥೆ ಅಧ್ಯಕ್ಷ ಕೆ.ಮೂರ್ತಿ, ಡಾ. ಎಸ್.ಆರ್. ಸುಧಾಕರ್, ಕೆ.ಸಿದ್ದಲಿಂಗಪ್ಪ, ಸುಮತೀಂದ್ರ ನಾಡಿಗ್, ಡಾ. ಎಂ.ಜಯಪ್ಪ, ಎಂ.ಎನ್. ಸುಂದರರಾಜ್, ಇಜಾಜ್ ಅಹಮದ್, ಪ್ರಭು, ಮಲ್ಲಿಕಾರ್ಜುನಯ್ಯ, ವೀರಯ್ಯ, ಎಂ.ಎನ್. ರುದ್ರಪ್ಪ, ಆನಂದ್, ತೀರ್ಥಾಚಾರ್, ಶ್ರೀವತ್ಸ, ವೀರೇಶ್ ಪ್ರಸಾದ್, ಕೆ.ಸಿ. ನಾಗರಾಜ್, ಕುಬೇಂದ್ರ ಗೌಡ ಉಪಸ್ಥಿತರಿದ್ದರು.
- - --19ಕೆಸಿಎನ್‌ಜಿ1.ಜೆಪಿಜಿ:
ಸಂತೆಬೆನ್ನೂರು ಗ್ರಾಮದ ವಿಜಯ ಯುವಕ ಸಂಘ ಸಂಸ್ಥಾಪಕ ಅಧ್ಯಕ್ಷ ಸತ್ಯನಾರಾಯಣ ನಾಡಿಗ್ ಅವರನ್ನು ಗೌರವಿಸಲಾಯಿತು.