ಯೋಗ ಬಲ್ಲವರಿಗೆ ಯಾವ ರೋಗವಿಲ್ಲ: ಸತ್ಯನಾರಾಯಣ

| Published : May 24 2024, 01:01 AM IST / Updated: May 24 2024, 11:18 AM IST

ಸಾರಾಂಶ

ಚಿತ್ರದುರ್ಗದ ಐಯುಡಿಪಿ ಬಡಾವಣೆಯ ನಿಸರ್ಗ ಯೋಗ, ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಸಸಿಗೆ ನೀರೆರೆಯುವ ಮೂಲಕ ಸತ್ಯನಾರಾಯಣ ಉದ್ಘಾಟಿಸಿ, ಬಳಿಕ ಯೋಗದ ಮಹತ್ವದ ಕುರಿತು ಮಾತನಾಡಿದರು.

  ಚಿತ್ರದುರ್ಗ :  ನಿತ್ಯ ಯೋಗ ಮಾಡುವವರಿಗೆ ಯಾವುದೇ ರೋಗ ಬರುವುದಿಲ್ಲವೆಂದು ಬಸವೇಶ್ವರ ಆಸ್ಪತ್ರೆಯ ವ್ಯವಸ್ಥಾಪಕ ಸತ್ಯನಾರಾಯಣ ಹೇಳಿದರು.

ಚಿತ್ರದುರ್ಗದ ಐಯುಡಿಪಿ ಬಡಾವಣೆಯ ನಿಸರ್ಗ ಯೋಗ, ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಹಿಂದೆ ತಾವು ಸಹ ದೈತ್ಯ ದೇಹವನ್ನು ಹೊಂದಿದ್ದು, ನಿರಂತರ ವ್ಯಾಯಾಮ, ವಾಕಿಂಗ್ ಹಾಗೂ ಆಹಾರ ಬಳಕೆಯಲ್ಲಿ ನಿಯಮ ವನ್ನು ಪಾಲಿಸುವ ಮೂಲಕ ದೇಹದ ತೂಕವನ್ನು ಇಳಿಸಿದ್ದೇನೆ ಎಂದರು.

ಯೋಗಗುರು ಶಿವಲಿಂಗಪ್ಪ ಮಾತನಾಡಿ, ಸತತ ಹತ್ತು‌ ವರ್ಷಗಳ ಪರಿಶ್ರಮದಿಂದ ನಮ್ಮ ಯೋಗ ಕೇಂದ್ರ ಹೆಮ್ಮರವಾಗಿ ಬೆಳೆದು ನಿಂತಿದೆ. ಇದಕ್ಕೆಲ್ಲ ಬೆನ್ನೆಲು ಬಾಗಿ ನಿಂತಿದ್ದ ಪತಾಂಜಲಿ ಯೋಗ ಸಂಸ್ಥೆಯ ಮಾಜಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ ಅವರು ಸ್ಫೂರ್ತಿ ಎಂದರು.

ಯೋಗ ಕೇಂದ್ರದ ಅಧ್ಯಕ್ಷ ರಾಮಪ್ಪ ಮಾತನಾಡಿ, ಈ ನಿಸರ್ಗ ಯೋಗ ಕೇಂದ್ರವೊಂದು ಕುಟುಂಬದಂತೆ. ಎಲ್ಲರೂ ತಮ್ಮ ಆರೋಗ್ಯ ರಕ್ಷಣೆಗಾಗಿ ನಿತ್ಯ ಯೋಗಾ ಭ್ಯಾಸ ಮಾಡುತ್ತೇವೆ. ಅಲ್ಲದೇ ಯೋಗ ಕೇಂದ್ರದಲ್ಲಿನ ಎಲ್ಲಾ‌ ಸದಸ್ಯರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇವೆ ಎಂದರು.

ನಿಸರ್ಗ ಯೋಗ, ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು ಸ್ವಾಗತಿಸಿದರು. ಯೋಗಪಟು ಶಬರಿ ಪ್ರಾರ್ಥಿಸಿದರು. ಗೌರವ ಸಲಹೆಗಾರರಾದ ಮಹಲಿಂಗಪ್ಪ‌, ಖಜಾಂಚಿ‌ ಜಯ್ಯಣ್ಣ, ಹಿರಿಯ ಯೋಗಬಂಧುಗಳಾದ ಚಿದಾನಂದಮೂರ್ತಿ, ನಳಿನಾ, ಹನುಮಂತಪ್ಪ, ಗೀತಮ್ಮ, ಪುಷ್ಪವತಿ‌, ಕೌಸಲ್ಯ ಮತ್ತು ಯುವ ಯೋಗಪಟುಗಳಾದ ಶಬರಿ, ಸಂಯುಕ್ತ, ದಿವ್ಯ, ಮಧುಸೂದನ್, ಅಣ್ಣೇಶ್ ಇದ್ದರು.