ಸಾರಾಂಶ
ಇಷ್ಟಲಿಂಗವನ್ನು ಜಾತಿ-ಬೇಧ, ಲಿಂಗ ತಾರತಮ್ಯವಿಲ್ಲದೇ ಎಲ್ಲ ವಯಸ್ಸಿನವರು ಧರಿಸಬಹುದು. ಈ ಬಗ್ಗೆ 12 ವರ್ಷಗಳ ಕಾಲ ಸಂಶೋಧಿಸಿ ಬಸವಣ್ಣನವರು ನಮಗೆ ನೀಡಿದ್ದಾರೆ. ಸರಪಳಿಯಂತೆ ಗುರುವಿನ ಪ್ರಸಾದದವರೆಗೆ ಆದ ಅರಿವು ಅಖಂಡವಾಗಿರುತ್ತದೆ ಎಂದು ರಾಣೆಬೆನ್ನೂರು ಸ್ಥಾನುಭಾವ ನೆಲೆ ವೇದಿಕೆಯ ಶರಣೆ ಸುಧಾ ನಂದಿಹಳ್ಳಿ ಹೇಳಿದ್ದಾರೆ.
- ನ್ಯಾಮತಿ ಪಟ್ಟಣ ಶಂಭುಲಿಂಗಪ್ಪ ನಿವಾಸದಲ್ಲಿ ಶರಣ ಗೋಷ್ಠಿ- - - ನ್ಯಾಮತಿ: ಇಷ್ಟಲಿಂಗವನ್ನು ಜಾತಿ-ಬೇಧ, ಲಿಂಗ ತಾರತಮ್ಯವಿಲ್ಲದೇ ಎಲ್ಲ ವಯಸ್ಸಿನವರು ಧರಿಸಬಹುದು. ಈ ಬಗ್ಗೆ 12 ವರ್ಷಗಳ ಕಾಲ ಸಂಶೋಧಿಸಿ ಬಸವಣ್ಣನವರು ನಮಗೆ ನೀಡಿದ್ದಾರೆ. ಸರಪಳಿಯಂತೆ ಗುರುವಿನ ಪ್ರಸಾದದವರೆಗೆ ಆದ ಅರಿವು ಅಖಂಡವಾಗಿರುತ್ತದೆ ಎಂದು ರಾಣೆಬೆನ್ನೂರು ಸ್ಥಾನುಭಾವ ನೆಲೆ ವೇದಿಕೆಯ ಶರಣೆ ಸುಧಾ ನಂದಿಹಳ್ಳಿ ಹೇಳಿದರು.
ಪಟ್ಟಣದ ನೆಹರು ರಸ್ತೆಯ ಶಂಭುಲಿಂಗಪ್ಪ ಅವರ ನಿವಾಸದಲ್ಲಿ ಶ್ರೀ ಗುರುಬಸವ ಮಹಾಮನೆ ವತಿಯಿಂದ ನಡೆದ ಅರಿವು, ಆಚಾರ, ಅನುಭವ ಉದ್ದೇಶದಿಂದ ವಿಶ್ವಗುರು ಬಸವಣ್ಣನವರ ಮನೆಯಲ್ಲಿ ಮಹಾಮನೆ 16ನೇ ಗೋಷ್ಠಿಯಲ್ಲಿ ಅವರು ಮಾತನಾಡಿದರು. ನನ್ನೊಳಗೆ ದೇವರಿದ್ದಾನೆ ಎಂಬುದನ್ನು ತಿಳಿಸಿಕೊಡುವ ದೃಷ್ಟಿಯಿಂದ ಇಷ್ಟಲಿಂಗ ಪೂಜೆಯನ್ನು ಬಸವಣ್ಣ ನೀಡಿದ್ದಾರೆ. ದೇಹವಿಲ್ಲದ, ವರ್ಣವಿಲ್ಲದ ರೂಪದ ನಿರಾಕಾರ, ಹೂವು ಗಂಧ ಸಕ್ಕರೆ ಒಳಗೆ ಹೇಗೆ ರುಚಿ ತೋರಿಸಲು ಆಗುವುದಿಲ್ಲವೋ, ಹಾಗೆಯೇ ನಮ್ಮೊಳಗೆ ಅಡಗಿರುವ ಭಗವಂತನನ್ನು ತೋರಿಸಲು ಆಗದು ಎಂದರು.ಹೊಳಲ್ಕೆರೆ ಒಂಟಿಕಲ್ ಮುರುಘಾ ಮಠದ ಶ್ರೀ ತಿಪ್ಪೇರುದ್ರ ಶರಣರು ಮಾತನಾಡಿ, 12ನೇ ಶತಮಾನದಲ್ಲಿ ಹೊಸ ತತ್ವ, ಧರ್ಮದ ಸಿದ್ಧಾಂತ ಜೊತೆಜೊತೆಗೆ ಧರ್ಮ ಆಧಾರವಾಗಿ ಬಂದ ಪದಗಳಿಗೆ ಹೊಸ ಸಿದ್ಧಾಂತಗಳನ್ನು ಕಾಣುತ್ತೇವೆ ಎಂದರು.
ಮಹಾಮನೆಯ ಕಲ್ಪನೆಯು 12ನೇ ಶತಮಾನದಲ್ಲಿ ಬಂದಿದೆ. ಇಲ್ಲಿ ಎಲ್ಲ ಮಹಾನುಭಾವರು ಸೇರಿಕೊಂಡು ಗುರುವಿನ ಲಿಂಗ ಸಂಸ್ಕಾರ ಪಡೆದು ಲಿಂಗಪೂಜೆ ನಿಷ್ಠರಾಗಿ ಲಿಂಗಾನುಭಾವ ನಡೆಸುತ್ತಿದ್ದರು. ಅಂದಿನ ಮಹಾಮನೆ ಇಂದಿನ ಕಟ್ಟಡಗಳಂತೆ ಇರದೇ, ಅಲ್ಲಿ ಸೇರಿದ ಮಹಾನುಭಾವರೆಲ್ಲ ಅನವಶ್ಯಕ ಚರ್ಚೆಗಳನ್ನು ಮಾಡದೇ ಗೋಷ್ಠಿಗಳಂತೆ ಚಿಂತನೆಗಳು ನಡೆಯುತ್ತಿದ್ದವು ಎಂದು ಹೇಳಿದರು.ಚರ ಜಂಗಮರಾದ ಷಣ್ಮುಖಪ್ಪ ಸಾಲಿ, ವಿಶ್ವೇಶ್ವರಯ್ಯ ಬಸವ ಬಳ್ಳಿ ಮಾತನಾಡಿದರು. ತಾಲೂಕು ಲಿಂಗಾಯತ ಮಹಾಸಭಾ, ಕದಳಿ ಮಹಿಳೆ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ತಾಲೂಕು ಲಿಂಗಾಯತ ಮಹಾಸಭಾ ಅಧ್ಯಕ್ಷ ಮಹೇಶ್ವರಪ್ಪ ಮುಂಡರಗಿ, ಮುಂಡರಗಿ ಶಿವರಾಜ್, ಶಂಭುಲಿಂಗಪ್ಪ ಮತ್ತಿತರರಿದ್ದರು.
- - - (ಸಾಂದರ್ಭಿಕ ಚಿತ್ರ)