ತಂದೆ-ತಾಯಿಗಿಂತ ದೇವರಿಲ್ಲ

| Published : Jan 21 2024, 01:32 AM IST

ಸಾರಾಂಶ

ತಾಳಿಕೋಟೆ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ವೀರಶೈವ ವಿಧ್ಯಾವರ್ದಕ ಸಂಘದ ವತಿಯಿಂದ ಶನಿವಾರ ಸಂಘದ ಸಭಾಭವನದಲ್ಲಿ ಆದರ್ಶ ಶಿಕ್ಷಕರಾದ ಭೋರಮ್ಮ ಟಿ.ಸಜ್ಜನ, ಡಾ.ಅಶ್ವೀನಿ ಆರ್ ಜೋಗೂರ ಸನ್ಮಾನ ಕಾರ್ಯಕ್ರಮದಲ್ಲಿ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಂದೆ-ತಾಯಿಗಿಂತ ಮತ್ಯಾರು ದೇವರಿಲ್ಲ ಎಂಬುವುದನ್ನು ವಿದ್ಯಾರ್ಥಿಗಳು ಮೊದಲು ಅರಿತುಕೊಳ್ಳಬೇಕು ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ನುಡಿದರು.

ಸ್ಥಳೀಯ ಪ್ರತಿಷ್ಠೀತ ವಿದ್ಯಾ ಸಂಸ್ಥೆಯಾದ ವೀರಶೈವ ವಿಧ್ಯಾವರ್ದಕ ಸಂಘದ ವತಿಯಿಂದ ಶನಿವಾರ ಸಂಘದ ಸಭಾಭವನದಲ್ಲಿ ಆದರ್ಶ ಶಿಕ್ಷಕರಾದ ಭೋರಮ್ಮ ಟಿ.ಸಜ್ಜನ, ಡಾ.ಅಶ್ವೀನಿ ಆರ್ ಜೋಗೂರ ಸನ್ಮಾನಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಕ್ರೀಯಾಶೀಲ ದಿನದ ಅಧ್ಯಯನದೊಂದಿಗೆ ಮುಖ್ಯವಾಗಿ ಮಾತಾ-ಪಿತರನ್ನು ಗೌರವಿಸುವ ಕಾರ್ಯ ಮಾಡಬೇಕು. ಮಾತಾ-ಪಿರತನ್ನು ಹೊರತು ಮತ್ಯಾರು ದೇವರಿಲ್ಲ. ನೀವೇ ನನ್ನ ಪಾಲಿಗೆ ದೇವರೆಂಬುವುದನ್ನು ಅವರ ಗಮನಕ್ಕೆ ತಂದು ದಿನನಿತ್ಯದ ಅಧ್ಯಯನವೆಂಬುವುದನ್ನು ಮುಂದುವರೆಸಿಕೊಂಡು ಸಾಗಿ ಸಲಹೆ ನೀಡಿದರು.

ವೀ.ವಿ.ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ(ಹಂಪಿಮುತ್ಯಾ) ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಧನೆ ಎಂಬುವುದು ಅಂಗಡಿ ಮುಗ್ಗಟ್ಟುಗಳಲ್ಲಿ ದೊರೆಯುವಂತಹ ವಸ್ತು ಅಲ್ಲಾ. ಸಾಧನೆಯನ್ನು ಸಾಧಿಸುವುದು ಅಷ್ಟೇನೂ ಸುಲಭವಲ್ಲ. ನಮ್ಮ ಸಂಸ್ಥೆಯಲ್ಲಿ ಮಹಿಳಾ ಶಿಕ್ಷಕರಾಗಲಿ ವಿದ್ಯಾರ್ಥಿಗಳಾಗಲಿ ಪ್ರಶಸ್ತಿ ಪಡೆಯುವುದಲ್ಲದೇ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದನ್ನು ನೋಡಿದರೇ ನಮ್ಮ ಸಂಸ್ಥೆಗೆ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ. ಅವರಿಗೆ ದೊರೆತ ಗೌರವ ನಮಗೆ ದೊರೆತಂತಾಗಿದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಪ್ರಶಸ್ತಿ ಪುರಸ್ಕೃತರಾದ ಎಸ್.ಕೆ.ಪ್ರೌಢಶಾಲಾ ವಿಭಾಗದ ಶಿಕ್ಷಕಿ ಬಿ.ಟಿ.ಸಜ್ಜನ, ಡಾಕ್ಟರೇಟ್ ಪದವಿ ಪಡೆದ ಅಶ್ವಿನಿ ಆರ್.ಜೋಗೂರ ಮಾತನಾಡಿದರು. ಪ್ರಾಚಾರ್ಯ ಕೆ.ಕಿಶೋರಕುಮಾರ ಪ್ರಾಸ್ತಾವಿಕ ಮಾತನಾಡಿದರು.

ವೇ.ಮುರುಘೇಶ ವಿರಕ್ತಮಠ, ವೀ.ವಿ.ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ಎಸ್.ಕೆ.ಪ.ಪೂ ಕಾಲೇಜ್ ಅಧ್ಯಕ್ಷ ಎಂ.ಆರ್.ಕತ್ತಿ, ಎಸ್.ಕೆ.ಪ್ರೌಢಶಾಲೆಯ ಅಧ್ಯಕ್ಷ ಮಹಾಂತೇಶ ಕತ್ತಿ ಹಾಗೂ ವೀ.ವಿ.ಸಂಘದ ನಿರ್ದೇಶಕರ ಮಂಡಳಿ ಹಾಗೂ ಸದಸ್ಯರು, ಸಂಸ್ಥೆಯ ಸಂಬಂಧಿತ ವಿವಿಧ ಶಾಲಾ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ಐಟಿಐ ಕಾಲೇಜ್ ವಿಕ್ಷಕರಾಗಿ ಆಗಮಿಸಿದ ಯು.ಕೆ.ರಜಪೂತ, ಜಂಟಿ ನಿರ್ದೇಶಕ ಬಸವಪ್ರಭು ಹಿರೇಮಠ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕುಮಾರಿ ಸಪ್ನಾ ಹಿರೇಮಠ ಪ್ರಾರ್ಥಿಸಿದರು. ಶಿಕ್ಷಕ ಎಸ್.ಎನ್.ಬೀಳಗಿ ಸ್ವಾಗತಿಸಿದರು. ಶಿಕ್ಷಕ ಆರ್.ಬಿ.ದಾನಿ ನಿರೂಪಿಸಿದರು. ಶಿಕ್ಷಕ ಆರ್.ಜಿ.ರಾಠೋಡ ವಂದಿಸಿದರು.