ವಿಜ್ಞಾನವಿಲ್ಲದೇ ಜೀವನವಿಲ್ಲ

| Published : Jan 07 2024, 01:30 AM IST

ಸಾರಾಂಶ

ವಿಜ್ಞಾನವಿಲ್ಲದೇ ಜೀವನವಿಲ್ಲ: ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ವಿಜ್ಞಾನವಿಲ್ಲದ ಜೀವನ ಊಹಿಸಲೂ ಸಾಧ್ಯವಿಲ್ಲ. ಸಾಂಪ್ರದಾಯಿಕ ಭಾರತ ಭರದಿಂದ ಪ್ರಗತಿ ಸಾಧಿಸಲು ವಿಜ್ಞಾನ ಕಾರಣ. ಪ್ರಧಾನಿ ಮೋದಿ ಅವರಿಂದ ದೇಶದ ಪ್ರಗತಿಗೆ ವೇಗ ಸಿಕ್ಕಿದೆ ಎಂದು ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ ಹೇಳಿದರು.

ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ, ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಡಲಗಿಯ ಪ್ರವೀಣ ಕುಲಗೊಡ ರಾಮಪುರದ ಎ.ಕೆ.ಕಾಡದೇವರ ಅತಿಥಿಗಳಾಗಿ ಮಾತನಾಡಿ ವಿಜ್ಞಾನದ ಮಹತ್ವದ ಬಗ್ಗೆ ತಿಳಿಸಿದರು.

ರಾಜ್ಯಮಟ್ಟದ ವಸ್ತು ಪ್ರದರ್ಶನದಲ್ಲಿ 36 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಾದರಿಗಳನ್ನು ಪ್ರದರ್ಶಿಸಿದರು. ಗದಗ ಜೆ.ಟಿ.ಕಾಲೇಜ ಪ್ರಥಮ, ಅಥಣಿಯ ಜೆ.ಎ.ಕಾಲೇಜ್ ದ್ವಿತೀಯ, ಅಥಣಿಯ ಕೆಎಲ್ಇ, ಎಸ್ಎಸ್ಎಂಎಸ್ ಕಾಲೇಜ್ ತೃತೀಯ ಸ್ಥಾನ ಪಡೆದವು. ಸ್ಥಳೀಯ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಸಂಜನಾ ಮಾಳವದೆ ಮತ್ತು ವಿದ್ಯಾಶ್ರೀ ಅವರಾದಿ ತಾವು ಕಲಾ ವಿಭಾಗದವರಾದರೂ ಆಸಕ್ತಿ ವಹಿಸಿ ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಅಳವಡಿಕೆ ಬಗೆಗಿನ ಮಾದರಿ ಪ್ರದರ್ಶಿಸಿ ಗಮನ ಸೆಳೆದರು.

ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ, ಪ್ರಾಚಾರ್ಯ ಎಲ್.ಬಿ.ತುಪ್ಪದ, ಉಪ್ರಾಂಶುಪಾಲ್‌ ಬಿ.ಎನ್.ಅರಕೇರಿ, ಪ್ರಾಚಾರ್ಯರು, ಐಕ್ಯೂಎಸಿ ಸಂಯೋಜಕಿ ಡಾ. ಎಸ್.ಡಿ.ಸೊರಗಾಂವಿ, ಸಿಬ್ಬಂದಿ ಕಾರ್ಯದರ್ಶಿ ಅಭಯ ಉಗಾರೆ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಜೆ.ಆರ್.ಪಾಟೀಲ, ಡಾ.ಎಸ್.ಸಿ.ಬಿಜ್ಜರಗಿ, ಎಸ್.ಎಸ್. ಮುಗಳ್ಯಾಳ, ಐಶ್ವರ್ಯ ಯಾದವಾಡ, ಡಿ.ಎ.ನಾಯ್ಕ ಶ್ರೀಯಾ ದಿವಾನಜಿ ಇದ್ದರು.