ಕುಟುಂಬದಲ್ಲಿ ಮೈನಿಂಗ್ ಬಿಸಿನೆಸ್‌ ಇಲ್ಲವೇ ಇಲ್ಲ

| Published : May 05 2024, 02:03 AM IST

ಸಾರಾಂಶ

ನಮ್ಮ ಕುಟುಂಬದಲ್ಲಿ ಮೈನಿಂಗ್ ಬಿಸಿನೆಸ್‌ ಇಲ್ಲವೇ ಇಲ್ಲ. ಕೇಂದ್ರ ಸಚಿವರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ನಾವೆನಿದ್ದರೂ ಅಭಿವೃದ್ಧಿ ಪರ ರಾಜಕೀಯ ಮಾಡುವವರು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ನಮ್ಮ ಕುಟುಂಬದಲ್ಲಿ ಮೈನಿಂಗ್ ಬಿಸಿನೆಸ್‌ ಇಲ್ಲವೇ ಇಲ್ಲ. ಕೇಂದ್ರ ಸಚಿವರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ನಾವೆನಿದ್ದರೂ ಅಭಿವೃದ್ಧಿ ಪರ ರಾಜಕೀಯ ಮಾಡುವವರು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಕಿಡಿಕಾರಿದರು.

ಕವಟಗಿಮಠ ನಗರದ ಸ್ವಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಇದೆ. ಪ್ರಚಾರ ಸಭೆಯಲ್ಲಿಯೂ ಅಪಾರ ಸಂಖ್ಯೆಯ ಜನ ಸೇರುತ್ತಿದ್ದಾರೆ. ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಜನ ಬೆಂಬಲ ದೊರೆಯುತ್ತಿದ್ದು, 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಚಿಕ್ಕೋಡಿ ಜನತೆ ಆಶೀರ್ವದಿಸಿದರೇ ಖಂಡಿತವಾಗಿ ಚಿಕ್ಕೋಡಿಯಲ್ಲೇ ಮನೆ ಮಾಡುತ್ತೇನೆ. ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಿ, ಸಾಫ್ಟವೇರ್ ಕಂಪನಿ, ಎಂಎನ್‌ಸಿ ಕಂಪನಿಗಳನ್ನು ತರುವ ಪ್ರಯತ್ನ ಮಾಡುತ್ತೇನೆ. ಇನ್ನು ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ಚಿಕ್ಕೋಡಿಯಲ್ಲಿ ಆರಂಭಿಸುವುದಾಗಿ ಭವರಸೆ ನೀಡಿದರು.ಪ್ರಚಾರ ಸಭೆಗಳಲ್ಲಿ ಜನ ನೀರಾವರಿ ಯೋಜನೆ, ಯುವಕರ ಉದ್ಯೋಗ ಕಲ್ಪಿಸಬೇಕೆಂದು ಮನವಿಗಳನ್ನು ಸಲ್ಲಿಸಿದ್ದಾರೆ. ಜನತೆ ಆಶೀರ್ವದಿಸಿದರೇ ಪ್ರಾಮಾಣಿಕವಾಗಿ ಈ ಭಾಗದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಯವಕರಿಗೆ ಉದ್ಯೋಗ ಕಲ್ಪಿಸುವುದಕ್ಕಾಗಿ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳಲ್ಲಿ ನನ್ನನ್ನು ಸೇರಿ 15 ರಿಂದ 18 ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಚಿಕ್ಕೋಡಿ, ಗೋಕಾಕ ಜಿಲ್ಲೆ ಘೋಷಣೆ ಬಗ್ಗೆ ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸುತ್ತೇನೆ. ಬಿಹಾರ್ ಮೂಲದವರು ಚಿಕ್ಕೋಡಿ ಕ್ಷೇತ್ರದಲ್ಲಿ ಕಾರ್ಡ್‌ಗಳನ್ನು ಹಂಚುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ಶಾಸಕರು, ಮುಖಂಡರು, ಕಾರ್ಯಕರ್ತರು ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಬಾವುಟ ಹಾರಿಸಲು ಹಗಲಿರುಳು ದುಡಿಯುತ್ತಿದ್ದಾರೆ. ಮೇ.7 ರಂದು ನಡೆಯುವ ಚುನಾವಣೆಯಲ್ಲಿ ಈ ಭಾಗದ ಸರ್ವರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನನ್ನು ಆಶೀರ್ವದಿಸಬೇಕು. ನಾನು ಜಯಗಳಿಸಿದರೇ ದೇಶದಲ್ಲಿಯೇ ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಂಸದೆಯಾದ ಕೀರ್ತಿ ಸಿಗುತ್ತದೆ. ಈ ಕೀರ್ತಿಯನ್ನು ಚಿಕ್ಕೋಡಿ ಜನತೆಗೆ ಒಪ್ಪಿಸುತ್ತೇನೆ.

-ಪ್ರಿಯಾಂಕಾ ಜಾರಕಿಹೊಳಿ,

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ.