ಸಾರಾಂಶ
ಹಾನಗಲ್ಲ: ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ರಸ್ತೆಗಳ ಗುಂಡಿಮುಚ್ಚಲು ಹಣವಿಲ್ಲದಾಗಿದ್ದು, ಈ ಸರಕಾರ ತೊಲಗುವವರೆಗೆ ಈ ರಾಜ್ಯದ ಜನ ಸೌಲಭ್ಯ ವಂಚಿತರು ಎಂದು ಬಿಜೆಪಿ ಮುಖಂಡ ಸೋಮಶೇಖರ ಕೋತಂಬರಿ ಕಿಡಿಕಾರಿದರು. ಗುರುವಾರ ಹಾನಗಲ್ಲಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ರೈತ ವಿರೋಧಿ ಸರಕಾರ. ಈವರೆಗೂ ಬೆಳೆಹಾನಿ ನೀಡಲಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವೇ ಈ ಸರಕಾರದ ಸಾಧನೆ. ಅಧಿಕಾರಿಗಳು ಜನಪ್ರತಿನಿಧಿಗಳು ಈ ಗುಂಡಿಗಳನ್ನು ಮುಚ್ಚಲು ಯಾಕೆ ಯೋಚಿಸುತ್ತಿಲ್ಲ ಎಂಬುದೆ ಯಕ್ಷ ಪ್ರಶ್ನೆಯಾಗಿದೆ. ಇದು ರಾಜ್ಯದ ಸಮಸ್ಯೆ ಎಂದರು. ಮಾಜಿ ಶಾಸಕ ಶಿವರಾಜ ಸಜ್ಜನ ಅವರ ನೇತೃತ್ವದಲ್ಲಿ ಪ್ರತಿಭಟನೆಯ ಜೊತೆಗೆ ಮಹಾತ್ಮಾ ಗಾಂಧಿ ವೃತ್ತದಿಂದ ತಹಸೀಲ್ದಾರ್ ಕಚೇರಿಗೆ ಹೋಗುವ ದಾರಿಯಲ್ಲಿನ ಗುಂಡಿಗಳನ್ನು ಪ್ರತಿಭಟನಾಕಾರರು ಮುಚ್ಚಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನ, ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕಟ್ಟೇಗೌಡರ, ಮುಖಂಡರಾದ ಬೋಜರಾಜ ಕರೂದಿ, ಶಿದ್ಲಿಂಗಪ್ಪ ಕಮಡೊಳ್ಳಿ, ಪದ್ಮನಾಭ ಕುಂದಾಪುರ, ಕಲ್ಯಾಣಕುಮಾರ ಶೆಟ್ಟರ, ರಾಘವೇಂದ್ರ ತಹಶೀಲ್ದಾರ, ಮಾಲತೇಶ ಸೊಪ್ಪಿನ, ನಿಜಲಿಂಗಪ್ಪ ಮುದಿಯಪ್ಪನವರ, ಮಾರುತಿ ಪುರ್ಲಿ, ಅಣ್ಣಪ್ಪ ಚಾಕಾಪೂರ, ರಾಮೂ ಯಳ್ಳೂರ, ವಿನಾಯಕ ಕುರುಬರ, ಸದಾನಂದ ಮೆಳ್ಳಳ್ಳಿ, ಆನಂದ ಹವಳಣ್ಣನವರ, ಸಚಿನ್ ರಾಮಣ್ಣನವರ, ಬಸವರಾಜ ಹಾದಿಮನಿ, ಅಮಿತ ಶಡಗರವಳ್ಳಿ, ಭಾಸ್ಕರ ಹುಲ್ಮನಿ ಮೊದಲಾದವರಿದ್ದರು.