ಪ್ರತಿಭೆಯು ಯಾರ ಸೊತ್ತಲ್ಲ. ಸೃಜನಶೀಲ ಮನಸ್ಸು ಅರಮನೆಯಲ್ಲಿರಲಿ, ಅಂಗಡಿಯಲ್ಲಿರಲಿ ತನ್ನ ಪ್ರತಿಭಾಶಕ್ತಿಯಿಂದ ಪ್ರಕಾಶಮಾನವಾಗಿ ಗೋಚರಿಸಬಲ್ಲದು ಎಂದು ಕವಿವಿ ಪ್ರಸಾರಾಂಗ ನಿವೃತ್ತ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ ಹೇಳಿದರು.

ಧಾರವಾಡ:

ಸಾಹಿತ್ಯವೆಂಬುದು ಯಾರ ಸ್ವತ್ತಲ್ಲ. ಅದನ್ನು ವ್ಯಕ್ತಪಡಿಸುವಿಕೆಗೆ ಯಾವುದೇ ಅಂತಸ್ತುಗಳ ಅವಶ್ಯಕತೆಯಿಲ್ಲ ಎಂದು ಕವಿವಿ ಪ್ರಸಾರಾಂಗ ನಿವೃತ್ತ ನಿರ್ದೇಶಕ ಡಾ.ಚಂದ್ರಶೇಖರ ರೊಟ್ಟಿಗವಾಡ ಹೇಳಿದರು.

ಗಣಕರಂಗ ಸಂಸ್ಥೆಯು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಕವನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನದಲ್ಲಿ ಮಾತನಾಡಿದ ಅವರು, ಪ್ರತಿಭೆಯು ಯಾರ ಸೊತ್ತಲ್ಲ. ಸೃಜನಶೀಲ ಮನಸ್ಸು ಅರಮನೆಯಲ್ಲಿರಲಿ, ಅಂಗಡಿಯಲ್ಲಿರಲಿ ತನ್ನ ಪ್ರತಿಭಾಶಕ್ತಿಯಿಂದ ಪ್ರಕಾಶಮಾನವಾಗಿ ಗೋಚರಿಸಬಲ್ಲದು. ಅದರಂತೆ ಗಣಕರಂಗ ಸಂಸ್ಥೆಯ ಸಿದ್ಧರಾಮ ಹಿಪ್ಪರಗಿ ಏರ್ಪಡಿಸುವ ಸಾಹಿತ್ಯಿಕ ಸ್ಪರ್ಧೆಗಳೆಂದರೆ ಪ್ರತಿಭಾ ವಿಕಸನಕ್ಕೆ ಸೂಕ್ತ ವೇದಿಕೆ ಎಂದರು,

ಗಣಕರಂಗ ಸ್ಪರ್ಧೆಯ ಆನ್ಲೈನ್‌ ಸ್ಪರ್ಧೆಗಳಲ್ಲಿ ವಿಶ್ವದ ಯಾವುದೇ ಭಾಗದ ಪ್ರತಿಭಾವಂತರು ಭಾಗವಹಿಸುವಂಥ ಉತ್ತಮ ವೇದಿಕೆಯನ್ನು ಎಲ್ಲರೂ ಸದೂಪಯೋಗಪಡಿಸಿಕೊಳ್ಳಬೇಕು.ಇಂಥ ಸಂದರ್ಭದಲ್ಲಿ ವಿಶ್ವಮಟ್ಟದಿಂದ ಹಿಡಿದು ಸ್ಥಳೀಯ ವಲಯದ ವರೆಗೂ ಸಾಹಿತ್ಯ ಸೃಷ್ಟಿಗೆ ಬಡವ-ಬಲ್ಲಿದನೆಂಬ ಭೇದವಿಲ್ಲ. ಜಾತಿ-ಧರ್ಮದ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಡಾ. ಲಿಂಗರಾಜ ರಾಮಾಪೂರ (ಗ್ರಂಥಾಲಯ), ಡಾ. ಮಾಧುರಿ ಚೌಗುಲೆ (ಸಂಶೋಧನೆ), ಡಾ. ಪ್ರಭಾಕರ ಕಾಂಬಳೆ (ಮಾಧ್ಯಮ), ಶ್ರೀಧರ ಗಸ್ತಿ (ಶಿಕ್ಷಣ), ವೈ.ಜಿ. ಭಗವತಿ (ಸಾಹಿತ್ಯ) ಮತ್ತು ಡಾ. ಪ್ರಕಾಶ ಮಲ್ಲಿಗವಾಡ (ಕಲೆ) ಮುಂತಾದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.

ಜಾನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ. ಪ್ರಕಾಶ ಮಲ್ಲಿಗವಾಡ ಮಾತನಾಡಿ, ಈ ಕಲೆ, ಸಾಹಿತ್ಯ ಮುಂತಾದ ಸೃಜನಶೀಲ ಪ್ರಕಾರಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದರು.

208ನೇ ಕೋರೆಗಾಂವ ವಿಜಯೋತ್ಸವದ ಪ್ರಯುಕ್ತ ಅಯೋಜಿಸಿದ್ದ ಕೋರೆಗಾಂವ ಕದನದ ಕಲಿಗಳು ಶಿರ್ಷಿಕೆಯ ಕವನ ಸ್ಪರ್ಧೆ ಮತ್ತು ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಶಿರ್ಷಿಕೆಯ ಕವನ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಪುಸ್ತಕ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಗಣಕರಂಗದ ಸಿದ್ಧರಾಮ ಹಿಪ್ಪರಗಿ ನಿರೂಪಿಸಿದರು.