ಸಾರಾಂಶ
ಯಾರೇ ಶರಣಾಗತಿ ಮಾಡಿಕೊಂಡರು ಸಿಎಂಗೆ ಕ್ರೆಡಿಟ್ ಹೋಗುತ್ತದೆ. ಸಾಮಾಜಿಕ ಬದಲಾವಣೆಗೆ ನಕ್ಸಲರ ಮನಪರಿವರ್ತನೆಗೆ ಅಭಿನಂದನೆ ತಿಳಿಸಬೇಕು
ಗದಗ: ಡಿನ್ನರ್ ಪಾರ್ಟಿ ನಡೆದರೂ, ನಡೆಯದಿದ್ದರೂ ಸಮಸ್ಯೆ ಇಲ್ಲ, ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿನ್ನರ್ ಪಾರ್ಟಿ ವಿಷಯದಲ್ಲಿ ಈಗಾಗಲೇ ಎಲ್ಲರೂ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ಈ ವಿಷಯವಾಗಿ ಜನರನ್ನು ಕನ್ಫ್ಯೂಷನ್ ಮಾಡೋದಕ್ಕೆ ಅನಾವಶ್ಯಕ ಷಡ್ಯಂತ್ರ ನಡೆದಿದೆ ಎಂದರು.ನಕ್ಸಲರ ಶರಣಾಗತಿಯಲ್ಲಿ ಸಿಎಂ ಕ್ರೆಡಿಟ್ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಶರಣಾಗತಿ ಮಾಡಿಕೊಂಡರು ಸಿಎಂಗೆ ಕ್ರೆಡಿಟ್ ಹೋಗುತ್ತದೆ. ಸಾಮಾಜಿಕ ಬದಲಾವಣೆಗೆ ನಕ್ಸಲರ ಮನಪರಿವರ್ತನೆಗೆ ಅಭಿನಂದನೆ ತಿಳಿಸಬೇಕು. ಸಿದ್ದರಾಮಯ್ಯ ನಾಯಕತ್ವ ಇದೆ ಎಂಬ ಕಾರಣಕ್ಕೆ ಶರಣಾಗತಿಯಾಗಿದ್ದೇವೆ ಎಂದು ನಕ್ಸಲರು ತಿಳಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಅಭಿನಂದನೆ ಮಾಡುವ ಬದಲು ಕೀಳು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಸಚಿವರು, ಸಂಪುಟ ವಿಸ್ತರಣೆ ಆಗಬಹುದು, ಸಿಎಂ ಸಿದ್ದರಾಮಯ್ಯ ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಆದರೆ ಸ್ವಲ್ಪ ಮಟ್ಟಿನ ಸಂಪುಟ ವಿಸ್ತರಣೆ ಆಗಬಹುದು, ಆದರೆ ಅದು ಅಂತಿಮವಾಗಿ ಸಿಎಂ ಹಾಗೂ ಹೈ ಕಮಾಂಡ್‌ಗೆ ಬಿಟ್ಟಿದ್ದು, ಸಂದರ್ಭ, ಸಕಾಲ ನೋಡಿ ನಿರ್ಣಯ ಮಾಡುತ್ತಾರೆ ಎಂದರು.ಜ. 21ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅಂದು ಗಾಂಧಿ ಪುತ್ಥಳಿ ಅನಾವರಣ ಮಾಡಲಾಗುತ್ತದೆ. ಕಾಂಗ್ರೆಸ್ ಬಹುದೊಡ್ಡ ಸಮಾವೇಶ ಮಾಡುತ್ತಿದ್ದೇವೆ. 21ರ ವರೆಗೆ ಯಾವುದೇ ಸಚಿವ ಸಂಪುಟ ವಿಸ್ತರಣೆ ಆಗೋದಿಲ್ಲ, ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಆಗೋದು ಸಿಎಂ ಹಾಗೂ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.ಹಿರಿಯರಿಗೆ ಕೊಕ್ ನೀಡುವ ವಿಚಾರ ನನಗೆ ಗೊತ್ತಿಲ್ಲ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.