ನಾಮಪತ್ರ ಸಲ್ಲಿಸಿದ ನಂತರ ವಾಪಸ್‌ ಪಡೆಯೋ ಪ್ರಶ್ನೆಯೇ ಇಲ್ಲ

| Published : Apr 04 2024, 01:00 AM IST / Updated: Apr 04 2024, 01:01 AM IST

ನಾಮಪತ್ರ ಸಲ್ಲಿಸಿದ ನಂತರ ವಾಪಸ್‌ ಪಡೆಯೋ ಪ್ರಶ್ನೆಯೇ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ತಾವು ಸ್ಪರ್ಧಿಸುವುದು ಖಚಿತ. ನಾಮಪತ್ರ ಸಲ್ಲಿಸಿದ ನಂತರ ಅದನ್ನು ವಾಪಸ್‌ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ದಾವಣಗೆರೆಯಲ್ಲಿ ಪುನರುಚ್ಚರಿಸಿದ್ದಾರೆ.

- ಸಿಎಂ, ಡಿಸಿಎಂರಿಂದ ಫೋನ್ ಬರುತ್ತಿವೆ: ಟಿಕೆಟ್ ವಂಚಿತ ವಿನಯ್‌ಕುಮಾರ ಹೇಳಿಕೆ

- - - ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ತಾವು ಸ್ಪರ್ಧಿಸುವುದು ಖಚಿತ. ನಾಮಪತ್ರ ಸಲ್ಲಿಸಿದ ನಂತರ ಅದನ್ನು ವಾಪಸ್‌ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ಪುನರುಚ್ಚರಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ. ಯಾವುದೇ ಕಾರಣಕ್ಕೂ ವಾಪಸ್‌ ತೆಗೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಂದಲೂ ನನಗೆ ಫೋನ್‌ ಕಾಲ್‌ ಬರುತ್ತಿವೆ. ಈಗಾಗಲೇ ಕ್ಷೇತ್ರಾದ್ಯಂತ ಹಳ್ಳಿಹಳ್ಳಿಯಲ್ಲೂ ಸುತ್ತಾಡಿದ್ದೇನೆ. ಕಾಂಗ್ರೆಸ್ ಟಿಕೆಟ್ ನನಗೆ ತಪ್ಪಿರಬಹುದು. ಆದರೆ, ನಾನು ಪಕ್ಕಾ ಕಾಂಗ್ರೆಸ್ಸಿಗ ಎಂದು ಹೇಳಿದರು.

ಕಾಂಗ್ರೆಸ್ಸನ್ನು ಸೋಲಿಸುವುದು, ಬಿಜೆಪಿಯನ್ನು ಗೆಲ್ಲಿಸುವುದು ನನ್ನ ಗುರಿಯಂತೂ ಅಲ್ಲ. ನಾನು ಗೆಲ್ಲಬೇಕು. ಅದಕ್ಕಾಗಿ ಗೆಲ್ಲುವ ಕಡೆಗೆ ನನ್ನೆಲ್ಲಾ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದಲ್ಲಿ ನಾನು ಸಹ ಕಾಂಗ್ರೆಸ್ ಅಭ್ಯರ್ಥಿಯೆಂದೇ ಪ್ರಚಾರ ಮಾಡಿ, ಅಹಿಂದ ಮತಗಳನ್ನು ಒಟ್ಟುಗೂಡಿಸುತ್ತೇನೆ ಎಂದು ತಿಳಿಸಿದರು.

ಎಲ್ಲ ಅಹಿಂದ ಮುಖಂಡರು, ಜಿಲ್ಲೆ, ರಾಜ್ಯ ಕಾಂಗ್ರೆಸ್ ಮುಖಂಡರು ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ನಾನು ನೂರಾರು ಹಳ್ಳಿಗಳ ಜನಸಾಮಾನ್ಯರು, ಮತದಾರರ ಅಭಿಪ್ರಾಯದಂತೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದರು.

- - -(-ಫೋಟೋ: ವಿನಯಕುಮಾರ್‌, ಅಹಿಂದ ಮುಖಂಡ)