ಚಿಕ್ಕಮಗಳೂರುಜಿಲ್ಲೆಯ ಗ್ಯಾಸ್ ಸಿಲಿಂಡರ್ ವಿತರಕರು ಪ್ರತಿ ದಿನ ಸಿಲಿಂಡರ್ ದಾಸ್ತಾನು, ವಿತರಣೆ ಕುರಿತು ವರದಿ ನೀಡಬೇಕು. ಜತೆಗೆ, ಆದ್ಯತೆ ಮೇರೆಗೆ ಶಾಲೆ, ಆಸ್ಪತ್ರೆ, ಹಾಸ್ಟಲ್ ಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡಬೇಕೆಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ಸೂಚಿಸಿದ್ದಾರೆ
ಆದ್ಯತೆ ಮೇರೆಗೆ ಶಾಲೆ, ಆಸ್ಪತ್ರೆ, ಹಾಸ್ಟಲ್ ಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ । ವಿತರಣೆ ವ್ಯತ್ಯಯ ಉಂಟಾಗದಂತೆ ಕ್ರಮಕ್ಕೆ ಯೋಗಾನಂದ್ ಸೂಚನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಿಲ್ಲೆಯ ಗ್ಯಾಸ್ ಸಿಲಿಂಡರ್ ವಿತರಕರು ಪ್ರತಿ ದಿನ ಸಿಲಿಂಡರ್ ದಾಸ್ತಾನು, ವಿತರಣೆ ಕುರಿತು ವರದಿ ನೀಡಬೇಕು. ಜತೆಗೆ, ಆದ್ಯತೆ ಮೇರೆಗೆ ಶಾಲೆ, ಆಸ್ಪತ್ರೆ, ಹಾಸ್ಟಲ್ ಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡಬೇಕೆಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ ಅಭಾವ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯ ಗ್ಯಾಸ್ ಸಿಲಿಂಡರ್ ವಿತರಕರೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆ ನೀಡಿದ್ದಾರೆ. ಜತೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ಮಾರ್ಗ ಸೂಚಿ ಬಗ್ಗೆ ಅಡುಗೆ ಅನಿಲ ವಿತರಕರಿಗೆ ಮಾಹಿತಿ ನೀಡಿದರು.ಶುಕ್ರವಾರ ಜಿಲ್ಲೆಯಲ್ಲಿ ಎಷ್ಟು ಶಾಲೆ, ಹಾಸ್ಟೆಲ್ ಹಾಗೂ ಆಸ್ಪತ್ರೆಗೆ ವಾಣಿಜ್ಯ ಬಳಕೆ ಸಿಲಿಂಡರ್ ಅಗತ್ಯವಿದೆ ಎಂಬ ಮಾಹಿತಿ ನೀಡಲು ನಿರ್ದೇಶಿಸಿದರು. ಜತೆಗೆ ಗೃಹ ಬಳಕೆ ಸಿಲಿಂಡರ್ ವಿತರಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಕ್ರಮ ವಹಿಸ ಬೇಕು. ಕಾಳಸಂತೆಯಲ್ಲಿ ಅನಧಿಕೃತ ಸಿಲಿಂಡರ್ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.ತಿಂಗಳಿಗೆ ಬೇಕಾದಷ್ಟು ಸಿಲಿಂಡರ್ ಲಭ್ಯ:
ಜಿಲ್ಲೆಗೆ ದಿನಕ್ಕೆ ಸರಾಸರಿ 9 ಸಾವಿರ ಗೃಹ ಬಳಕೆ ಸಿಲಿಂಡರ್ ಅಗತ್ಯವಿದೆ. ಈ ಪ್ರಕಾರ ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳಿಗೆ ಬೇಕಾಗಿರುವಷ್ಟು ಸಿಲಿಂಡರ್ ದಾಸ್ತಾನು ಇದೆ ಎಂದು ''''''''ಕನ್ನಡಪ್ರಭ'''''''' ಕ್ಕೆ ಮಾಹಿತಿ ನೀಡಿದ್ದಾರೆ.-- ಬಾಕ್ಸ್...ಸಿಲಿಂಡರ್ ಬುಕಿಂಗ್ ನಿಯಮ ಬದಲಾವಣೆಸಿಲಿಂಡರ್ ಅಭಾವ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಂಡರ್ ಬುಕಿಂಗ್ ವಿತರಣೆಯಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗಿದೆ. ಗ್ರಾಹಕರ ಒಟಿಪಿ ಇಲ್ಲದ ಸಿಲಿಂಡರ್ ಪೂರೈಕೆ ಇಲ್ಲ. ಇದು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟಕ್ಕೆ ಕಡಿವಾಣ ಹಾಕಲಿದೆ.
ಡಬ್ಬಲ್ ಸಿಲಿಂಡರ್ ಹೊಂದಿರುವವರ ಬುಕಿಂಗ್ ಅವಧಿಯನ್ನು 30 ದಿನಕ್ಕೆ ಏರಿಕೆ ಮಾಡಲಾಗಿದೆ. ಸಿಂಗಲ್ ಸಿಲಿಂಡರ್ ಇರುವವರಿಗೆ ಬುಕಿಂಗ್ ಗೆ ಕನಿಷ್ಠ 25 ದಿನ ನಿಗದಿ ಪಡಿಸಲಾಗಿದೆ....ಕೋಟ್....ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗೃಹ ಬಳಕೆ ಸಿಲಿಂಡರ್ ಗೆ ಯಾವುದೇ ಕೊರತೆ ಇಲ್ಲ. ಇನ್ನೂ ಒಂದು ತಿಂಗಳಿಗೆ ಬೇಕಾ ದಷ್ಟು ಗೃಹ ಸಿಲಿಂಡರ್ ದಾಸ್ತಾನು ಇದೆ. ಹೀಗಾಗಿ, ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ. ಬುಕಿಂಗ್ ಅವಧಿಯಂತೆ ಸಿಲಿಂಡರ್ ಪೂರೈಕೆ ಆಗಲಿದೆ.
- ಯೋಗಾನಂದ್, ಉಪ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ. ಚಿಕ್ಕಮಗಳೂರು....ಬಾಕ್ಸ್....ಗ್ಯಾಸ್ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತ ಗ್ರಾಹಕರು:
ಚಿಕ್ಕಮಗಳೂರಿನ ದೀಪಾ ನರ್ಸಿಂಗ್ ಹೋಂ ರಸ್ತೆಯಲ್ಲಿರುವ ಇಂಡೇನ್ ಗ್ಯಾಸ್ ಸಿಲಿಂಡರ್ ಗೋದಾಮಿನ ಬಳಿ ನೂರಾರು ಮಂದಿ ಸಿಲಿಂಡರ್ ಗಾಗಿ ನಿಂತ ದೃಶ್ಯ ಗುರುವಾರ ಕಂಡು ಬಂದಿದೆ. ಅದೇ ರೀತಿ ಕಡೂರು, ಬೀರೂರು ಸೇರಿದಂತೆ ಮೊದಲಾದ ಕಡೆ ಇದೇ ಸ್ಥಿತಿ ಕಂಡು ಬಂತು.-- ಬಾಕ್ಸ್..
ಜಿಲ್ಲೆಯ ಅಡುಗೆ ಅನಿಲ ಸಿಲಿಂಡರ್ ವಿತರಕರ ವಿವರ:ಸಂಸ್ಥೆ ವಿತರಕರ ಸಂಖ್ಯೆ
ಇಂಡೇನ್ (ಐಓಸಿ) -12ಭಾರತ್ (ಬಿಪಿಸಿಎಲ್) -9
ಎಚ್ ಪಿ (ಎಚ್ ಪಿಸಿಎಲ್)- 7ಒಟ್ಟು ಸಂಖ್ಯೆ-28
ಜಿಲ್ಲೆಯಲ್ಲಿ ಅಡುಗೆ ಅನಿಲ ದಾಸ್ತಾನು ವಿವರಗೃಹ ಬಳಕೆ -12,716 (14 ಕೆ.ಜಿ)ವಾಣಿಜ್ಯ ಬಳಕೆ-1,442 (19 ಕೆ.ಜಿ)
ವಾಣಿಜ್ಯ ಬಳಕೆ- 3,482 (5ಕೆ.ಜಿ)ದರ ವಿವರ:14 ಕೆ.ಜಿ ಗೃಹ ಬಳಕೆ ದರ: 920 ರು
19 ಕೆ.ಜಿ. ವಾಣಿಜ್ಯ ಬಳಕೆ ದರ: 1896 ರು.ಪೋಟೋಚಿಕ್ಕಮಗಳೂರು ನಗರದಲ್ಲಿ ಗುರುವಾರ ಅಡುಗೆ ಅನಿಲದ ಸಿಲಿಂಡರ್ ಗಾಗಿ ಗ್ರಾಹಕರು ಅನಿಲ ವಿತರಕರ ಗೋದಾಮಿನ ಬಳಿ ಜಮಾಯಿಸಿರುವುದು.
