ಸಾರಾಂಶ
ಡಂಬಳ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶಾಸಕ ಜಿ.ಎಸ್. ಪಾಟೀಲ್ ಅವರು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಅನುದಾನಕ್ಕೆ ಯಾವುದೇ ಕೊರತೆಯಿಲ್ಲ ಎಂದು ಹೇಳಿದರು.
ಡಂಬಳ: ರಾಜ್ಯ ಸರ್ಕಾರದಲ್ಲಿ ಅನುದಾನಕ್ಕೆ ಯಾವುದೇ ಕೊರತೆಯಿಲ್ಲ. ಒಂದೂವರೆ ವರ್ಷದಲ್ಲಿ ಈ ಕ್ಷೇತ್ರಕ್ಕೆ ತಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳೇ ಅದಕ್ಕೆ ಸಾಕ್ಷಿಯಾಗಿವೆ ಎಂದು ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ಡಂಬಳ ಹೋಬಳಿಯಲ್ಲಿ ಸೋಮವಾರ ವೆಂಕಟಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ₹70 ಲಕ್ಷ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಯಕ್ಲಾಸಪುರ ಗ್ರಾಮದ ಎಸ್‍ಸಿ ಕಾಲನಿಯಿಂದ ಹಳ್ಳದ ವರೆಗೆ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ₹20 ಲಕ್ಷ ಸಿಸಿ ರಸ್ತೆ, ಮುಜರಾಯಿ ಇಲಾಖೆ ಅಡಿ 5 ಲಕ್ಷ, ಪೇಠಾಆಲೂರ ಗ್ರಾಮದಲ್ಲಿ ಪಂಚಾಯತ್‌ರಾಜ್ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದಿಂದ ₹200 ಲಕ್ಷದಡಿ ಕೆರೆ ಸುಧಾರಣೆ ಕಾಮಗಾರಿ, ₹20 ಲಕ್ಷ ಗೋವಿನಕೊಪ್ಪ ರಸ್ತೆಯಿಂದ ಶ್ರೀ ಹೊನ್ನಂತ್ಯಮ್ಮ ದೇವಸ್ಥಾನದ ವರೆಗೆ ಸಿಸಿ ರಸ್ತೆ, ₹13 ಲಕ್ಷ ಆಯುಷ್ ಆರೋಗ್ಯ ಯೋಗಾಸನ ಕಟ್ಟಡ ನಿರ್ಮಾಣ, ಡಂಬಳ ಗ್ರಾಮದಲ್ಲಿ ₹15 ಲಕ್ಷ ಗುಡ್ಡದವರ ಮನೆಯಿಂದ ಸಿಸಿ ರಸ್ತೆ, ಶಾಲೆಯ ಮುಂಭಾಗದ ರಸ್ತೆಯಲ್ಲಿ ₹16.50 ಲಕ್ಷ ಸಿಸಿ ರಸ್ತೆ, ₹100 ಲಕ್ಷದಡಿ ನೂತನ ಕೆರೆ ಕಾಲುವೆ ಅಭಿವೃದ್ಧಿ ಕಾಮಗಾರಿ, ₹10 ಲಕ್ಷ ಕರಿಶಿದ್ದೇಶ್ವರ ದೇವಸ್ಥಾನ, ₹5 ಲಕ್ಷ ಮಹಿಳಾ ಸಂಘದ ಕಟ್ಟಡ, ಜಂತ್ಲಿ-ಶಿರೂರ ಗ್ರಾಮದಲ್ಲಿ ₹80 ಲಕ್ಷ ಸಿಸಿ ರಸ್ತೆ, ₹100 ಲಕ್ಷ ಕೆರೆ ಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕ್ಷೇತ್ರದ ಜನರ ದೂರದೃಷ್ಟಿ ಇಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತದೆ. ಅಂತರ್ಜಲ ವೃದ್ಧಿ ಹಾಗೂ ಜನರಿಗೆ ಸಮರ್ಪಕ ರಸ್ತೆ ನಿರ್ಮಿಸಲಾಗುತ್ತದೆ. ಡಂಬಳ ಗ್ರಾಮದ ಆಸ್ಪತ್ರೆ ಶೀಘ್ರದಲ್ಲೇ 30 ಹಾಸಿಗೆ ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ವಿ.ಆರ್. ಗುಡಿಸಾಗರ, ಡಿ.ಡಿ. ಮೋರನಾಳ, ಗುರಣ್ಣ ಕುರ್ತಕೋಟಿ, ಚೆನ್ನಪ್ಪ ಹಳ್ಳಿ, ಮಂಜುನಾಥ ಕಿನ್ನಾಳ, ಮಾಂತೇಶ ಮುಗಳಿ, ಗುರಣ್ಣ ಸಂಶಿ, ರಾಘು ಕುರಿಯವರ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಜಿ.ಎಸ್. ಕೊರ್ಲಹಳ್ಳಿ, ವಿ.ಎಸ್. ಯರಾಶಿ, ಬಸುರಡ್ಡಿ ಬಂಡಿಹಾಳ, ಮಹೇಶ ಗಡಗಿ, ಮರಿಯಪ್ಪ ಸಿದ್ದನ್ನವರ, ಬಾಬು ಮೂಲಿಮನಿ, ಜಾಕೀರ ಮೂಲಿಮನಿ, ನಾಗರಾಜ ಯಳವತ್ತಿ, ಹಾಲಪ್ಪ ಕಬ್ಬೆರಳ್ಳಿ, ಹಾಲಪ್ಪ ಹರ್ತಿ, ಶಿವಾನಂದ ಚಾಕಲಬ್ಬಿ, ವಿಶ್ವನಾಥ ಪಾಟೀಲ, ರಾಜಕುಮಾರ ಪೂಜಾರ, ರವಿ ದೊಡ್ಡಮನಿ, ಹೇಮಣ್ಣ ಪೂಜಾರ, ಶೇಖಪ್ಪ ದೇಸಾಯಿ, ಶರಣಪ್ಪ ಶಿರುಂದ, ಹನುಮಂತ ಪೂಜಾರ, ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್., ಇಒ ವಿಶ್ವನಾಥ ಹೊಸಮನಿ, ಕೃಷಿ ಅಧಿಕಾರಿ ಪ್ರಾಣೇಶ, ಮಂಜುನಾಥ ಕಲಬುರ್ಗಿ, ಸಣ್ಣ ನೀರಾವರಿ ಅಧಿಕಾರಿ ಪ್ರವೀಣಕುಮಾರ ಪಾಟೀಲ್, ಜಿಪಂ ಅಭಿಯಂತರ ನಿಂಗಪ್ಪ ಬೇವಿನಮರದ, ಪಿಡಬ್ಲುಡಿ ನಾಗೇಂದ್ರ ಪಟ್ಟಣಶೆಟ್ಟರ, ಪಿಡಿಒ ಲತಾ ಮಾನೆ, ವಸಂತ ಗೋಕಾಕ, ಕಂದಾಯ ಅಧಿಕಾರಿ ಪ್ರಭು ಬಾಗಲಿ ಇದ್ದರು.