ಜಿಲ್ಲೆಯಲ್ಲಿ ಬಿತ್ತನೆ ಬೀಜ ರಸಗೊಬ್ಬರದ ಕೊರತೆ ಇಲ್ಲ : ಸುಜಾತ

| Published : May 15 2024, 01:35 AM IST

ಜಿಲ್ಲೆಯಲ್ಲಿ ಬಿತ್ತನೆ ಬೀಜ ರಸಗೊಬ್ಬರದ ಕೊರತೆ ಇಲ್ಲ : ಸುಜಾತ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ ತಿಳಿಸಿದ್ದಾರೆ.

645 ಕ್ವಿಂಟಾಲ್‌ ಬಿತ್ತನೆ ಬೀಜಗಳನ್ನು ರೈತರ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಮೇ 1 ರಿಂದ 13 ರ ವರೆಗೆ ವಾಡಿಕೆಯಂತೆ 29 ಮಿ.ಮೀ. ಮಳೆಯಾಗಬೇಕಾಗಿದ್ದು, ಇದೇ ಅವಧಿಯಲ್ಲಿ 42 ಮಿ.ಮೀ. ಮಳೆಯಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಹದ ಮಳೆಯಾಗುತ್ತಿದೆ ಎಂದು ಹೇಳಿಕೆ ಯಲ್ಲಿ ತಿ‍ಳಿಸಿದ್ದಾರೆ. ಪೂರ್ವ ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಬಿತ್ತನೆ ಬೀಜ ಪೂರೈಕೆ ಪೂರ್ವ ಮುಂಗಾರು ಬೆಳೆಗಳ ಬಿತ್ತನೆಗೆ ಅನುಕೂಲವಾಗುವಂತೆ ಒಟ್ಟ್ಟು 645 ಕ್ವಿಂಟಾಲ್‌ ಬಿತ್ತನೆ ಬೀಜಗಳನ್ನು ರೈತರ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಉದ್ದು- 4.65 ಕ್ವಿಂಟಾಲ್‌, ಹೆಸರು- 35.60 ಕ್ವಿಂಟಾಲ್‌, ಹಲಸಂದೆ 100 ಕ್ವಿಂಟಾಲ್‌, ನೆಲಗಡಲೆ 492 ಕ್ವಿಂಟಾಲ್‌, ಸೂರ್ಯಕಾಂತಿ 13.50 ಕ್ವಿಂಟಾಲ್‌ ರಿಯಾಯಿತಿ ದರದಲ್ಲಿ ವಿತರಣೆ ಪ್ರಗತಿಯಲ್ಲಿದೆ, ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ ಎಂದು ಹೇಳಿದ್ದಾರೆ.ರಸಗೊಬ್ಬರ ಪೂರೈಕೆ ಜಿಲ್ಲೆಯಲ್ಲಿ ಮೇ ಮಾಹೆಯವರೆಗೆ ಒಟ್ಟು 35073 ಟನ್ ವಿವಿಧ ರಸಗೊಬ್ಬರ ಬೇಡಿಕೆ ಇದ್ದು ಪ್ರಸ್ತುತ ದಾಸ್ತಾನು ಮತ್ತು ರಸಗೊಬ್ಬರ ಮಾರಾಟಗಾರರಲ್ಲಿ ಒಟ್ಟು 41151 ಟನ್ ಡಿಎಪಿ 3628 ಟನ್ ಕಾಂಪ್ಲೆಕ್ಸ್, 19578 ಟನ್ ಎಂಒಪಿ 3031 ಟನ್ ಯೂರಿಯಾ 13981 ಟನ್ ಮತ್ತು ಎಸ್‌ಎಸ್‌ಪಿ 933 ಟನ್ ರಸಗೊಬ್ಬರ ದಾಸ್ತಾನಿದೆ. ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ. ಬಿತ್ತನೆ ಗುರಿ ಮುಂಗಾರು ಹಂಗಾಮಿಗೆ 98300 ಹೆಕ್ಟರ್ ಬಿತ್ತನೆ ಗುರಿ ಹೊಂದಿದ್ದು ಪೂರ್ವ ಮುಂಗಾರು ಹಂಗಾಮಿಗೆ 10350 ಹೆಕ್ಟರ್ ನೆಲಗಡಲೆ 2300 ಹೆಕ್ಟೇರ್‌, ಹೆಸರು 1900 ಹೆಕ್ಟೇರ್‌, ಹತ್ತಿ 1500 ಹೆಕ್ಟರ್, ಹಲಸಂದೆ 1150 ಹೆಕ್ಟರ್ ಮತ್ತು ಉದ್ದು 800 ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಪೋಟೋ ಫೈಲ್‌ ನೇಮ್‌ 14 ಕೆಸಿಕೆಎಂ 7