.ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ: ಬೆಳ್ಳಾವಿ ಸ್ವಾಮೀಜಿ

| Published : Nov 15 2024, 12:35 AM IST

.ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ: ಬೆಳ್ಳಾವಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ದಿನದಲ್ಲಿ ಈ ದೇಶದ ಕಥೆ ಏನು ಎಂಬುದರ ಬಗ್ಗೆ ತಾವೆಲ್ಲರೂ ಕೂಡ ಯೋಚಿಸಬೇಕಾಗಿದೆ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಬೆಳ್ಳಾವಿ ಮಠದ ಕಾರದ ವೀರಬಸವೇಶ್ವರ ಸ್ವಾಮೀಜಿ ತಿಳಿಸಿದರು. ಗುಬ್ಬಿಯಲ್ಲಿ ಶ್ರೀಕೋಡಿ ಕೆಂಪಮ್ಮ ದೇವಿಯ ನೂತನ ದೇವಿ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ಗುಬ್ಬಿ

ಹಿಂದೂ ದೇಶದಲ್ಲಿ ಹಿಂದುಗಳಿಗೆ ಉಳಿಗಾಲವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿರುವುದು ನೋಡಿದಾಗ ಮುಂದಿನ ದಿನದಲ್ಲಿ ಈ ದೇಶದ ಕಥೆ ಏನು ಎಂಬುದರ ಬಗ್ಗೆ ತಾವೆಲ್ಲರೂ ಕೂಡ ಯೋಚಿಸಬೇಕಾಗಿದೆ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಬೆಳ್ಳಾವಿ ಮಠದ ಕಾರದ ವೀರಬಸವೇಶ್ವರ ಸ್ವಾಮೀಜಿ ತಿಳಿಸಿದರು. ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಶ್ರೀಕೋಡಿ ಕೆಂಪಮ್ಮ ದೇವಿಯವರ ನೂತನ ದೇವಾಲಯ ಪ್ರವೇಶ, ಮೂಲ ವಿಗ್ರಹ ಪ್ರತಿಷ್ಠಾಪನೆ ನೂತನ ವಿಮಾನ ಗೋಪುರ ಕಳಸಾರೋಹಣ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಕ್ಫ್ ಕಮಿಟಿ ನಮ್ಮ ಭೂಮಿಗಳನ್ನು ಕಬಳಿಸಲು ಹೊರಟಿದ್ದಾರೆ. ಅದಕ್ಕೆ ಈಗಾಗಲೇ ಎಲ್ಲಾ ಶ್ರೀಗಳು ಸಹ ಇದರ ವಿರುದ್ಧ ಹೋರಾಟಕ್ಕೆ ನಿಂತಿದ್ದು, ಮಠಮಾನ್ಯಗಳು ದೇವಾಲಯಗಳು ನೂರಾರು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿರುವ ರೈತರ ಭೂಮಿಯನ್ನು ಕಬಳಿಸಲು ಮುಂದಾದರೆ ರಕ್ತ ಕೊಟ್ಟರು ನಮ್ಮ ಭೂಮಿಯನ್ನು ಬಿಡುವುದಿಲ್ಲ ಎಂಬುದರ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ನಾವೆಲ್ಲರೂ ಒಟ್ಟಾಗಿರಬೇಕು ಇಲ್ಲದೆ ಹೋದರೆ ಈ ದೇಶ ನಮ್ಮದು ಎಂಬುದನ್ನ ನೀವೆಲ್ಲರೂ ಮರೆಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ದೇಶಿ ಕೇಂದ್ರ ಮಹಾಸ್ವಾಮಿಜಿ ಮಾತನಾಡಿ ಪ್ರತಿಯೊಂದು ಗ್ರಾಮದಲ್ಲಿ ದೇವಾಲಯಗಳು ನಿರ್ಮಾಣವಾದಾಗ ಶಾಂತಿ ಸಹಬಾಳ್ವೆ, ನಮ್ಮ ಸಂಸ್ಕೃತಿ ಸಂಸ್ಕಾರಗಳು ಹೆಚ್ಚು ಹೆಚ್ಚು ಬೆಳೆಯಬೇಕು ದೇವಾಲಯ ನಿರ್ಮಾಣವಾದಾಗ ಇರುವಂತಹ ಹುಮ್ಮಸ್ಸು ನಂತರ ತಮಗೆ ಇರುವುದಿಲ್ಲ ಅದು ಖಂಡಿತ ಆಗಾಗಬಾರದು ದೇವಾಲಯ ನಿರ್ಮಾಣವಾದ ನಂತರವೂ ಪ್ರತಿನಿತ್ಯ ದೇವರಿಗೆ ತಾವು ಅರ್ಪಣೆ ಯಾಗಬೇಕು ಆಗ ಮಾತ್ರ ನೆಮ್ಮದಿ ಸಾಧ್ಯ ಎಂದು ತಿಳಿಸಿದರು.ಗೋಡೆಕೆರೆ ಮಠದ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ ದೇವಾಲಯಗಳಿಗೆ ನಾವು ತೆರಳುವ ಅಂತಹ ಸಂದರ್ಭದಲ್ಲಿ ಸ್ವಾರ್ಥ ಮನೋಭಾವನೆಯನ್ನು ಬಿಟ್ಟು ನಿಸ್ವಾರ್ಥದಿಂದ ಕೇಳಿದಾಗ ಖಂಡಿತವಾಗಿಯೂ ಭಗವಂತ ಎಲ್ಲವನ್ನು ನೀಡುತ್ತಾನೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ತಮ್ಮಡಿಹಳ್ಳಿ ಮಠದ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮಿಜಿ, ಶಿಡ್ಲಹಳ್ಳಿ ಮಠದ ಇಮ್ಮಡಿ ಕರಿಬಸವ ಸ್ವಾಮೀಜಿ, ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ, ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಶ್ರೀ ಕೋಡಿ ಕೆಂಪಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಟೇಲ್ ಟಿ ಎಂ ರಾಜಶೇಖರಯ್ಯ, ಪಣಗಾರ್ ಭಕ್ತವತ್ಸಲಾ, ಶಂಕರಪ್ಪ, ಟಿಪಿ ಶಶಿಧರ್, ಲೀಲಾವತಿ ಟಿಎಸ್ ಸಿದ್ದಲಿಂಗ ಮೂರ್ತಿ, ಕರಿಯಣ್ಣ ಅರಿವೇಸಂದ್ರ, ವೀರೇಶ್ ತಿಪ್ಪೂರು ಪಾಳ್ಯ, ವಕೀಲ ಉಮಾ ಕಾಂತ್, ರಘು ಕೋಡಿಯಾಲ, ರಂಗಸ್ವಾಮಿ ಕೊಡಿಯಾಲ,ಚಿಕ್ಕೇಗೌಡ, ಅರ್ಚಕರಾದ ಕೆಂಪಯ್ಯ, ಸಿದ್ದಯ್ಯ ಶಿಲ್ಪಿ ರಾಘವೇಂದ್ರ ಸೇರಿದಂತೆ ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಸ್ಥರು ಭಕ್ತಾದಿಗಳು ಆಗಮಿಸಿದ್ದರು.