ಸಾರಾಂಶ
ಹಾನಗಲ್ಲ: 30 ವರ್ಷಗಳ ಹಿಂದೆ ಹಾನಗಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದ ವಿದ್ಯಾರ್ಥಿಗಳು, ಗುರುವಂದನೆ ಮೂಲಕ ಗುರು ಬಳಗಕ್ಕೆ ಗೌರವ ವಂದನೆ ಕೃತಜ್ಞತೆ ಸಲ್ಲಿಸುವ ಹೃದಯಸ್ಪರ್ಶಿ ಸಮಾರಂಭ ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಿತು.ಇಲ್ಲಿನ ಎನ್‌ಸಿಜೆಸಿ ಕಾಲೇಜು ಹಾಗೂ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ 30 ವರ್ಷಗಳ ಹಿಂದೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ತಮಗೆ ವಿದ್ಯಾದಾನ ಮಾಡಿದ ಗುರುಗಳನ್ನು ಕರೆದು ಗೌರವಿಸಿ ಮತ್ತೊಮ್ಮೆ ಆಶೀರ್ವಾದ ಪಡೆದ ಕ್ಷಣಗಳು ಅತ್ಯಂತ ಹೃದಯಸ್ಪರ್ಶಿಯಾಗಿದ್ದವು.ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಎನ್.ಬಿ. ಬಣಕಾರ ಅವರು, ಗುರು- ಶಿಷ್ಯರ ಸಂಬಂಧಕ್ಕೆ ಕಾಲದ ಮಿತಿಯನ್ನು ಹಾಕಲಾಗದು. ಗುರುವಿನ ಮಾರ್ಗದರ್ಶನ ಹಾಗೂ ವೈಯಕ್ತಿಕ ಪರಿಶ್ರಮದಿಂದ ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡು ಉತ್ತಮ ಜೀವನ ಮಾರ್ಗ ಕಂಡುಕೊಂಡ ವಿದ್ಯಾರ್ಥಿಗಳು ಗುರುಗಳನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸಿರುವುದು ಅತ್ಯಂತ ಅಪರೂಪದ ಹಾಗೂ ಮರೆಯಲಾರದ ಸಂದರ್ಭ. ಇಲ್ಲಿ ಓದಿ ವಿದೇಶದಲ್ಲಿ ನೆಲೆಸಿದ್ದರೂ ಕಾರ್ಯಕ್ರಮಕ್ಕೆ ದೂರದ ದೇಶದಿಂದ ಬಂದು ಭಾಗಿಯಾಗಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದರು.ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಮಾತನಾಡಿ, ವಿದ್ಯಾದಾನ ಮಾಡಿದ ಸಂಸ್ಥೆ, ಗುರುಗಳನ್ನು ನೆನಪಿಸಿಕೊಂಡು ಬಂದು ಒಂದು ಉತ್ತಮ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ, ಗುರುಶಿಷ್ಯರ ಸಂಬಂಧವನ್ನು ಮರುದಾಖಲೀಕರಣ ಮಾಡಿದ ವಿದ್ಯಾರ್ಥಿಗಳ ಕಾರ್ಯ ನಿಜಕ್ಕೂ ಅಭಿನಂದನೆಗೆ ಸಲ್ಲುವಂತಹದ್ದು ಎಂದರು.ಗುರುವಂದನಾ ಸಂಘಟಕ ಪ್ರತಿನಿಧಿ ಅರವಿಂದ ನಾಗಜ್ಜನವರ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ಶಾಲೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನನಗೆ ನಮ್ಮ ಗುರುಗಳಿಗೂ ಗುರುವಂದನೆ ಸಲ್ಲಿಸಬೇಕು ಎಂಬ ಭಾವನೆ ಮೂಡಿತು. ಕೂಡಲೆ ನನ್ನೆಲ್ಲ ಗೆಳೆಯರಿಗೆ ಸಂಪರ್ಕಿಸಿದಾಗ ಎಲ್ಲರಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದಿತು. ಅದರಿಂದ ಈ ಕಾರ್ಯ ಸಾಧ್ಯವಾಯಿತು ಎಂದರು.ವಿದ್ಯಾದಾನ ಮಾಡಿದ ಗುರುಗಳಾದ ಇಂದುಮತಿ ಜೋಶಿ, ಎನ್.ಬಿ. ಕನವಳ್ಳಿ, ಮಾರುತಿ ಶಿಡ್ಲಾಪೂರ, ಪಿ.ಎನ್. ಜೋಶಿ, ಸಿ. ಮಂಜುನಾಥ, ಎಲ್.ಎಂ. ದೇಸಾಯಿ, ಟಿ.ಎನ್. ಕಾಮನಹಳ್ಳಿ, ಎಸ್.ಬಿ. ದೊಡ್ಡಮನಿ, ವಿ.ಎಲ್. ಪಾಟೀಲ, ಬಿ.ಐ. ಹುನಗುಂದ, ಬಿ.ಎಂ. ಮಠಪತಿ ಗೌರವ ಗುರುವಂದನೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಾದ ವಿ.ಪಿ. ಮೋರೆ, ವಸಂತ ಗುಡಗುಡಿ, ಉಷಾ ದೇಸಾಯಿ, ಕೆ.ಎಂ. ದೇಸಾಯಿ, ಆರ್.ಎಂ. ತಿತ್ತಿ, ಅರುಣ ತಿರುಮಲೆ, ಐ.ಜಿ. ಹಿರೇಮಠ, ಆರ್.ಎಂ. ಭಂಡಾರಿ, ಎನ್.ಎಚ್. ಪುರೋಹಿತ, ಡಿ.ಕೆ. ನರೇಗಲ್ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.ವಿದ್ಯಾರ್ಥಿಗಳಾದ ಅನುರಾಧ ಕುಲಕರ್ಣಿ, ಸರಸ್ವತಿ ಹಿರೇಮಠ, ಬಾಲಚಂದ್ರ ಅಂಬಿಗೇರ, ಜಯಶ್ರೀ ಉದಾಸಿ, ಪಾರ್ವತಿ ಹಿರೇಮಠ, ಕಲಾ ಹಿರೇಗೌಡರ, ರೂಪಾ ಜೋಶಿ, ವಿಜಯಲಕ್ಷ್ಮಿ ಉಪಾಧ್ಯಾಯ, ವೀಣಾ ಜೋಶಿ, ಲತಾ ಗುಡಿ, ಸುರೇಖಾ ಕಾಮಟೆ, ವೀಣಾ ಕೌಜಲಗಿ, ಸುಜಾತಾ ಪರಾಂಡೆ, ಡಾ. ಆರ್.ಸಿ. ಹಿರೇಮಠ, ಸಿ.ಎಸ್. ರೂಗಿ, ಪ್ರಭಾನಂದ ನಾಗಜ್ಜನವರ, ರಿಯಾಜ ಚಿಕ್ಕೇರಿ, ಚಂದ್ರು ಕಲಕೇರಿ, ದೇವರಾಜ ಅಡಿಗ, ಕಾಂತಿಲಾಲ ಪುರೋಹಿತ, ಲಿಂಗರಾಜ ಧಾರವಾಡ, ಪ್ರಕಾಶಗೌಡ ಪಾಟೀಲ, ಶಿವಬಸವ ಪೂಜಾರ, ದಾನಪ್ಪ ಗಂಟೇರ ಅವರು ಮಾತನಾಡಿದರು. ನೀಲಮ್ಮ ಮೂರಮಟ್ಟಿ ನಿರೂಪಿಸಿದರು.