ಧರ್ಮಸ್ಥಳ ಪ್ರಕರಣ ಎನ್‌ಐಎ ತನಿಖೆ ತಪ್ಪೇನಿಲ್ಲ

| N/A | Published : Aug 26 2025, 02:00 AM IST / Updated: Aug 26 2025, 12:13 PM IST

 Minister Satish Jarkiholi's Key Statement on Cabinet Reshuffle in Raichur

ಸಾರಾಂಶ

ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಪೂರ್ಣಗೊಂಡಿದೆ. ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಇನ್ನೂ ಸಲ್ಲಿಸಿಲ್ಲ. ಅಂತಿಮ ವರದಿ ಸಲ್ಲಿಕೆಯಾದ ನಂತರ ವರದಿಯಲ್ಲಿ ಏನಿದೆ ಎಂಬುದು ಗೊತ್ತಾಗಲಿದೆ. 

 ಜಮಖಂಡಿ :  ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಪೂರ್ಣಗೊಂಡಿದೆ. ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಇನ್ನೂ ಸಲ್ಲಿಸಿಲ್ಲ. ಅಂತಿಮ ವರದಿ ಸಲ್ಲಿಕೆಯಾದ ನಂತರ ವರದಿಯಲ್ಲಿ ಏನಿದೆ ಎಂಬುದು ಗೊತ್ತಾಗಲಿದೆ. ನಂತರ ರಾಷ್ಟ್ರೀಯ ಏಜೆನ್ಸಿಗಳ ತನಿಖೆ ವಿಚಾರ ಬರುತ್ತದೆ. ಎನ್‌ಐಎ ತನಿಖೆ ನಡೆಸಿದರೆ ತಪ್ಪೇನಿದೆ ಎಂದು ತಮ್ಮ ಈ ಹಿಂದಿನ ಹೇಳಿಕೆಯನ್ನು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು. 

ಸೋಮವಾರ ಜೈನ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಉಪಮುಖ್ಯಮಂತ್ರಿಗಳು ಸದನದಲ್ಲಿ ಆರ್‌ಎಸ್‌ಎಸ್‌ನ ಹಾಡು ಹಾಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಅವರೇ ಅದಕ್ಕೆ ಉತ್ತರಿಸಬೇಕು, ಇಂಥ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಹೈಕಮಾಡ್‌ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಡಿಕೆಶಿ ವಿಚಾರದಲ್ಲಿ ಹೈಕಮಾಂಡ್‌ ಮೃಧು ಧೋರಣೆ ತಾಳಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬ ಕೆಲ ವಿಚಾರಗಳು ಹೈಕಮಾಂಡ್‌ ಗಮನಕ್ಕೆ ಬಂದಿರುವುದಿಲ್ಲ. ಕೆಲ ವಿಚಾರಗಳು ಮಾತ್ರ ರಾಹುಲ್‌ ಗಾಂಧಿ ಅವರಿಗೆ ಮುಟ್ಟುತ್ತವೆ. ಆದ್ದರಿಂದ ಎಲ್ಲ ವಿಷಯಗಳನ್ನು ಅವರಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಮಾಜಿ ಸಚಿವ ರಾಜಣ್ಣ ಅವರಿಗೆ ಅನ್ಯಾಯವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಕೆ,ರಾಜಣ್ಣ ವಿಚಾರದಲ್ಲಿ ಅನ್ಯಾಯ ಆಗಿದ್ದನ್ನು ಹೈಕಮಾಂಡ್‌ಗೆ ವಿವರಿಸುವ ಕೆಲಸವಾಗಬೇಕು. ಮುಖ್ಯಮಂತ್ರಿಗಳು ಹಾಗೂ ಸ್ವತಃ ರಾಜಣ್ಣ ಅವರು ಹೈಕಮಾಂಡ್‌ ಗಮನಕ್ಕೆ ತರಬೇಕು. ಅವರ ವಿಚಾರ ತಿರುಚಿ ಹೇಳಲಾಗಿದ್ದು, ಹೈಕಮಾಂಡ್‌ ಕನ್ವಿನ್ಸ್‌ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

Read more Articles on