ಪ್ರತಿ ವಿಗ್ರಹದಲ್ಲೂ ಜೀವಂತಿಕೆ ಇದೆ

| Published : Jan 03 2025, 12:33 AM IST

ಸಾರಾಂಶ

ಭಾರತದ ಶ್ರೀಮಂತ ವಾಸ್ತುಶಿಲ್ಪ ವಿಶ್ವದ ಎಲ್ಲರ ಗಮನ ಸೆಳೆಯಲು ಕಾರಣ ಮಹಾನ್ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಎಂಬುದನ್ನು ಯಾರು ಮರೆಯಬಾರದು ಎಂದು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕಮಲ ನಾಭಚಾರ್ ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಗುಬ್ಬಿ

ಭಾರತದ ಶ್ರೀಮಂತ ವಾಸ್ತುಶಿಲ್ಪ ವಿಶ್ವದ ಎಲ್ಲರ ಗಮನ ಸೆಳೆಯಲು ಕಾರಣ ಮಹಾನ್ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಎಂಬುದನ್ನು ಯಾರು ಮರೆಯಬಾರದು ಎಂದು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕಮಲ ನಾಭಚಾರ್ ತಿಳಿಸಿದರು.

ಪಟ್ಟಣದ ವಿಶ್ವಕರ್ಮ ಸಮಾಜದ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಲವು ದೇವಾಲಯಗಳು, ಸ್ಮಾರಕಗಳು, ವಿಗ್ರಹಗಳನ್ನು ಕೆತ್ತನೆ ಮಾಡಿರುವಂತಹ ಕೀರ್ತಿ ಅಮರಶಿಲ್ಪಿ ಜಕಣಾಚಾರ್ಯ ಅವರಿಗೆ ಸೇರುತ್ತದೆ. ಅವರು ಕೆತ್ತನೆ ಮಾಡಿರುವಂತಹ ಪ್ರತಿ ವಿಗ್ರಹಗಳು ಸಹ ಇಂದಿಗೂ ಜೀವಂತಿಕೆಯಿಂದ ಇದ್ದು, ಅಂದಿನ ಕಾಲದಲ್ಲಿ ಶಿಲ್ಪಕಲೆಗೆ ಎಷ್ಟು ಒತ್ತು ನೀಡಿದ್ದರು ಎಂಬುದನ್ನು ತಿಳಿಯಬಹುದಾಗಿದೆ. ವಿಶ್ವಕರ್ಮ ಸಮಾಜವು ಹಲವು ಸಾಮಾಜಿಕ ಸೇವೆಗಳನ್ನು ನೀಡುತ್ತಾ ಬಂದಿದ್ದು ಅವರ ವಿಷಯವು ಮುಂದಿನ ಜನಾಂಗಕ್ಕೂ ತಿಳಿಯುವಂತಾಗಬೇಕು ಎಂದರೆ ಇಂತಹ ಕಾರ್ಯಕ್ರಮಗಳಲ್ಲಿ ಸಮುದಾಯದವರು ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ವಿಶ್ವಕರ್ಮ ಸಮಾಜದ ನಿರ್ದೇಶಕ ವಿವೇಕಾನಂದ ಸ್ವಾಮಿ ಮಾತನಾಡಿ, ಜಕಣಾಚಾರಿ ಅವರಿಂದ ಹಿಡಿದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವನ್ನ ಕೆತ್ತನೆ ಮಾಡಿದಂತಹ ಅರುಣ್ ಯೋಗರಾಜ್ ವರೆಗೂ ನೂರಾರು ವಿಶ್ವಕರ್ಮ ಸಮಾಜದ ಶಿಲ್ಪಿಗಳಿದ್ದು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹರೀಶ ಚಾರ್ ಶಿಲ್ಪಿ ಅವರನ್ನ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ರಾಜಶೇಖರಚಾರ್, ನಿರ್ದೇಶಕರಾದ ನಾಗರಾಜ ಚಾರ್, ಮಹೇಶ್ ಕುಮಾರ್ ದಯಾನಂದ, ನಾಗರಾಜ ಚಾರ್, ಚನ್ನಬಸಮ್ಮ ಶಿವಕುಮಾರಿ, ಹರೀಶ ಚಾರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.