ಸಾರಾಂಶ
ರಬಕವಿ-ಹೊಸೂರಿನ ಹಜಾರೆ ಫೌಂಡೇಶನ್ ಪದ್ಮಾವತಿ ವಿಜ್ಞಾನ ಮತ್ತು ವಾಣಿಜ್ಯ ಪಪೂ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವನ್ನು ಕೆಇಎಸ್ ಅಧಿಕಾರಿ ಅರಿಹಂತ ಪಾಟೀಲ ಉದ್ಘಾಟಿಸಿದರು. ಬಳಿಕ ಮಾತನಾಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ವಿದ್ಯಾರ್ಥಿಗಳ ಜೀವನದಲ್ಲಿ ಗುರಿಯಿದ್ದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಬಹುದೆಂದು ಕೆಇಎಸ್ ಅಧಿಕಾರಿ ಅರಿಹಂತ ಪಾಟೀಲ ಹೇಳಿದರು..
ರಬಕವಿ-ಹೊಸೂರಿನ ಹಜಾರೆ ಫೌಂಡೇಶನ್ ಪದ್ಮಾವತಿ ವಿಜ್ಞಾನ ಮತ್ತು ವಾಣಿಜ್ಯ ಪಪೂ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಲವಾರು ವಿಫುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಕುಟುಂಬದ, ರಾಷ್ಟ್ರದ ಆಸ್ತಿಯಾಗಬೇಕೆಂದರು.
ಮಲ್ಲಿಕಾರ್ಜುನ ಫುಲಾರೆ ಮಾತನಾಡಿ, ಮನುಷ್ಯ ಜೀವನದಲ್ಲಿ ಉತ್ತಮ ಗುರಿ ತಲುಪಬೇಕಾದರೆ ಬುದ್ಧಿ ಮತ್ತು ಮನಸ್ಸು ವಿಕಾಸ ಹೊಂದಿರಬೇಕು. ಯಾವದೇ ವ್ಯಕ್ತಿಗೆ ಬುದ್ಧಿ, ಮನಸ್ಸುಗಳು ಸರಿ ಇಲ್ಲದಿದ್ದರೆ ಆತನ ಭವಿತವ್ಯದ ಜೀವನ ದುರ್ಗತಿ ಹೊಂದುತ್ತದೆ. ಉತ್ತಮ ಜೀವನ ನಡೆಸಲು ಮೊದಲು ಬುದ್ಧಿ ಹಾಗೂ ಮನಸ್ಸು ಸರಿಯಿರಬೇಕೆಂದರು.
ಹಲವಾರು ರಂಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಸತೀಶ ಹಜಾರೆ, ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಶ್ರೀಶೈಲ ಕುಂಬಾರ, ಸತೀಶ ಬೆಳಗಲಿ, ಬಸವರಾಜ ಕಲಾದಗಿ ಇತರರು ಇದ್ದರು.