ಖಾಕಿ ತೊಟ್ಟ ಮೇಲೆ ಪೊಲೀಸ್-ಹೋಂಗಾರ್ಡ್ ಭೇದ ಭಾವ ಬೇಡ: ಎಸ್ಪಿ ಶ್ರೀಹರಿಬಾಬು

| Published : Dec 10 2024, 12:31 AM IST

ಖಾಕಿ ತೊಟ್ಟ ಮೇಲೆ ಪೊಲೀಸ್-ಹೋಂಗಾರ್ಡ್ ಭೇದ ಭಾವ ಬೇಡ: ಎಸ್ಪಿ ಶ್ರೀಹರಿಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಗೃಹರಕ್ಷಕರು ಪೊಲೀಸ್ ಇಲಾಖೆಗೆ ಬೆನ್ನೆಲುವಾಗಿ ಹೆಗಲಿಗೆ, ಹೆಗಲು ಕೊಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೊಸಪೇಟೆ: ಖಾಕಿ ತೊಟ್ಟ ಮೇಲೆ ಪೊಲೀಸ್ - ಹೋಂಗಾರ್ಡ್ ಭೇದ ಭಾವ ಬೇಡ. ಗೃಹರಕ್ಷಕರು ಪೊಲೀಸ್ ಇಲಾಖೆಗೆ ಬೆನ್ನೆಲುವಾಗಿ ಹೆಗಲಿಗೆ, ಹೆಗಲು ಕೊಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿಜಯನಗರ ಎಸ್ಪಿ ಬಿ.ಎಲ್. ಶ್ರೀಹರಿಬಾಬು ಹೇಳಿದರು.

ನಗರದ ಜಿಲ್ಲಾ ಒಳಾಂಗಣ ಕ್ರೀಡಾ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಗೃಹರಕ್ಷಕ ದಳದ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೋಂ ಗಾರ್ಡ್‌ಗಳು ಪೊಲೀಸ್‌ ಇಲಾಖೆಗೆ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಭೇದಭಾವ ಇಲ್ಲವೇ ಇಲ್ಲ. ಹೋಂ ಗಾರ್ಡ್‌ಗಳು ಕೂಡ ನಿಸ್ವಾರ್ಥವಾಗಿ ಕರ್ತವ್ಯ ಮಾಡುತ್ತಿದ್ದಾರೆ ಎಂದರು.

ಸಹಾಯಕ ಆಯುಕ್ತ ಪಿ. ವಿವೇಕಾನಂದ ಮಾತನಾಡಿ, ಪೊಲೀಸರಿಗೆ ಹೋಲಿಸಿದರೆ ಗೃಹರಕ್ಷಕರಿಗೆ ಯಾವುದೇ ಸೌಲಭ್ಯ ಇಲ್ಲ. ಆದರೂ ನಿಸ್ವಾರ್ಥಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಜಿಲ್ಲಾ ಬೋಧಕ ಪ್ರಶಾಂತ್ ಪಾಟೀಲ್ ಮಾತನಾಡಿ, ಹಬ್ಬ ಹರಿದಿನ, ಚುನಾವಣೆ ಬಂದೋಬಸ್ತ್ ಕರ್ತವ್ಯದಲ್ಲಿ ಹಾಗೂ ಇನ್ನಿತರ ಸಂದರ್ಭದಲ್ಲಿ ಗೃಹರಕ್ಷಕರ ಸೇವೆ ಶ್ಲಾಘನೀಯವಾದುದು ಎಂದರು.

ಜಿಲ್ಲಾ ಸಮಾದೇಷ್ಟ ಬಸವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಇಲಾಖೆಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸಲು ಗೃಹರಕ್ಷಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಲು ಸರ್ಕಾರಕ್ಕೆ ಮಂಜೂರಾತಿ ಕೋರಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಮಂಜೂರಾತಿ ಇರುವುದರ ಕಾರಣ ಸರದಿ ಆಧಾರದಲ್ಲಿ ಕರ್ತವ್ಯ ನೀಡಲು ಗೃಹರಕ್ಷಕ ದಳದ ಅಧಿಕಾರಿಗಳಿಗೆ ಸೂಚಿಸಿದರು.

ಗೃಹ ರಕ್ಷಕ ದಳ ಇಲಾಖೆಯಲ್ಲಿ ಮೂವತ್ಮೂರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳಾದ ಶಂಕರ್ ರಾವ್ ಹಾಗೂ ನಾಗರಾಜ್ ಮಲ್ಕಿ ಒಡೆಯರ್ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿಗಳನ್ನು ನೀಡಲಾಯಿತು. ಜಿಲ್ಲಾ ಅತ್ಯುತ್ತಮ ಘಟಕಾಧಿಕಾರಿ ರಾಜ್ ಪೀರ್ , ಜಿಲ್ಲಾ ಅತ್ಯುತ್ತಮ ಘಟಕ ಹಗರಿಬೊಮ್ಮನಹಳ್ಳಿ , ಜಿಲ್ಲಾ ಅತ್ಯುತ್ತಮ ಗೃಹರಕ್ಷಕ ಪಿ. ಬಾಷಾಸಾಹೇಬ್, ಬಿ. ಚಂದ್ರಪ್ಪ,

ಜಿಲ್ಲಾ ಅತ್ಯುತ್ತಮ ಗೃಹರಕ್ಷಕಿ ಹಸೀನಬಾನು ಪ್ರಶಸ್ತಿಗಳನ್ನು ಪಡೆದರು.

ಘಟಕಾಧಿಕಾರಿಗಳಾದ ಮಲ್ಲಿಕಾರ್ಜುನ, ಶಂಕರ್ ನಾಯ್ಕ, ಗುರುಬಸವರಾಜ್, ಜೆ. ಎಂ. ಬಾಷಾ , ವಿರೂಪಾಕ್ಷಿ, ಅನ್ವರ್ ಬಾಷಾ, ಮಲ್ಲಿಕಾರ್ಜುನ ಸ್ವಾಮಿ, ಪೂಜಾರ್ ವಾಗೇಶ್ , ಉದಯ ಚಂದ್ರ, ಸಂತೋಷ್, ಹಾಗೂ ಗೃಹರಕ್ಷಕ, ಗೃಹರಕ್ಷಕಿಯರು ಇದ್ದರು. ಘಟಕಾಧಿಕಾರಿ ಎಸ್‌.ಎಂ. ಗಿರೀಶ್, ಎಲ್. ವಾಲ್ಯಾ ನಾಯ್ಕ, ಬಿ. ಪರಶುರಾಮ್ ನಿರ್ವಹಿಸಿದರು.

ಹೊಸಪೇಟೆಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಗೃಹರಕ್ಷಕ ದಳದ ದಿನಾಚರಣೆ ಕಾರ್ಯಕ್ರಮಕ್ಕೆ ವಿಜಯನಗರ ಎಸ್ಪಿ ಬಿ.ಎಲ್. ಶ್ರೀಹರಿಬಾಬು ಚಾಲನೆ ನೀಡಿದರು.