ಬಿರ್ಯಾನಿ ತಡವಾಗಿ ತಂದಿದ್ದಕ್ಕೆ ಗುಂಪುಗಳ ಮಧ್ಯೆ ಗಲಾಟೆ!

| Published : Jun 22 2024, 12:47 AM IST

ಸಾರಾಂಶ

ಜನ್ಮದಿನದ ಕಾರ್ಯಕ್ಕೆ ಆರ್ಡರ್‌ ಮಾಡಲಾಗಿದ್ದ ಬಿರ್ಯಾನಿ ಸರಿಯಾದ ಸಮಯಕ್ಕೆ ಬರಲಿಲ್ಲ ಎಂದು ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದಿದ್ದು, ಎರಡೂ ಗುಂಪುಗಳಿಂದ ದೂರು, ಪ್ರತಿದೂರು ದಾಖಲಾಗಿದೆ.ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಸಚೀನ ಲಕ್ಷ್ಮಣ ದಡ್ಡಿ ಸೇರಿದಂತೆ ಇನ್ನೂ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಗಲಾಟೆಯಲ್ಲಿ ಗಾಂಧಿ ನಗರದ ಸಲೀಂ ನದಾಫ, ಮುಸ್ತಾಕ ದಸ್ತಗಿರ ದಾವಣಗೆರೆ, ಅಮನ ನಗರದ ಅಫ್ಜಲ್‌ ಮಹಮ್ಮದಸಾಬ ಸಯ್ಯದ ಎಂಬುವರಿಗೆ ಗಾಯವಾಗಿದ್ದರಿಂದ ದೂರು ದಾಖಲಾಗಿದೆ. ಇನ್ನು ಸಚಿನ್‌ ದಡ್ಡಿ ಕಡೆಯಿಂದಲೂ ದೂರುದಾರರ ವಿರುದ್ಧ ಅಟ್ರಾಸಿಟಿ ಕುರಿತು ಪ್ರತಿದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಸಚಿನ್ ದಡ್ಡಿ ಎಂಬುವವರ ಹುಟ್ಟುಹಬ್ಬ ಇರುವುದರಿಂದ ಬೆಳಗಾವಿಯ ಗಾಂಧೀ ನಗರದ ಸಲೀಂ ನದಾಫ್ ಎಂಬುವವರಿಗೆ 200 ಬಿರ್ಯಾನಿ ಆರ್ಡರ್ ಮಾಡಿದ್ದರು. ರಾತ್ರಿ 8 ಗಂಟೆಗೆ ಬಿರ್ಯಾನಿ ಬರಬೇಕಾಗಿತ್ತು. ಆದರೆ, ರಾತ್ರಿ 11 ಗಂಟೆಯಾದರೂ ಬಿರ್ಯಾನಿ ಬರಲಿಲ್ಲ. ಇದರಿಂದ ಜನ್ಮ ದಿನದ ಶುಭಾಶಯ ಕೋರಲು ಆಗಮಿಸಿದ್ದವರ ಮುಂದೆ ಮುಜುಗರವಾಗಿದ್ದರಿಂದ ಅಸಮಾಧಾನಗೊಂಡ ಸಚಿನ್ ದಡ್ಡಿ ಕಡೆಯವರು ಬಿರ್ಯಾನಿ ತಡ ಆಗಿದೆ ಎಂದು ಗಲಾಟೆ ಶುರು ಮಾಡಿದ್ದಾರೆ. ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.