ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುವುದಿಲ್ಲ: ಶಾಸಕ ಬೇಳೂರು

| Published : Oct 28 2025, 12:26 AM IST

ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುವುದಿಲ್ಲ: ಶಾಸಕ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಯಾವುದೇ ನವೆಂಬರ್ ಕ್ರಾಂತಿ ಆಗುವುದಿಲ್ಲ. ಶಾಂತಿಯಿಂದ ಸಚಿವ ಸಂಪುಟ ರಚನೆಯಾಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ರಾಜ್ಯದಲ್ಲಿ ಯಾವುದೇ ನವೆಂಬರ್ ಕ್ರಾಂತಿ ಆಗುವುದಿಲ್ಲ. ಶಾಂತಿಯಿಂದ ಸಚಿವ ಸಂಪುಟ ರಚನೆಯಾಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಆನಂದಪುರದಲ್ಲಿನ ಪಕ್ಷದ ಕಾರ್ಯಕರ್ತರ ಮನೆಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನವಂಬರ್ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾವುದೇ ಚರ್ಚೆ ನಡೆದರೂ ಹೈಕಮಾಂಡ್ ನಿರ್ಧಾರ ಅಂತಿಮವಾಗಲಿದೆ.

ನಾನು ಕೂಡ ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು ಇದರ ಬಗ್ಗೆ ಪಕ್ಷದ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದೇನೆ ಎಂದರು. ನವಂಬರ್ ಕ್ರಾಂತಿ ಎಂದು ಎಲ್ಲರೂ ಹೇಳುತ್ತಿದ್ದಾರೆ ಆದರೆ ಇದು ಕ್ರಾಂತಿಯಲ್ಲ ಶಾಂತಿಯೊಂದಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ವರಿಷ್ಠರ ನಿರ್ಧಾರದಂತೆ ಬಿಹಾರ ಅಸೆಂಬ್ಲಿ ಚುನಾವಣೆಯ ನಂತರ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿಸಿದರು.

ನಾನು ಆರ್‌ಎಸ್‌ಎಸ್ ವಿರೋಧಿಯಲ್ಲ. ನಾನು ಆರ್‌ಎಸ್‌ಎಸ್‌ ನೋಡಿ ಬಂದವನು. ಈ ಮೊದಲು ಆರ್‌ಎಸ್‌ಎಸ್ ತುಂಬಾ ಚೆನ್ನಾಗೇ ಇತ್ತು. ಆದರೆ ಈಗ ಕಾಮುಕರು ರೌಡಿಗಳು ಚಡ್ಡಿ ,ಪ್ಯಾಂಟ್ ಹಾಕುತ್ತಿರುವುದರಿಂದ ಆರ್ ಎಸ್ ಎಸ್ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಸಚಿವರು ಹೇಳುವ ಹಾಗೆ ಯಾವುದೇ ಒಂದು ಕಾರ್ಯಕ್ರಮಗಳು ನಡೆಯಬೇಕಾದರೆ ಸ್ಥಳೀಯ ಆಡಳಿತದ ಪರವಾನಿಗೆ ಮುಖ್ಯವಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ರೆಹಮತ್ತುಲ್ಲಾ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಳೆಯಪ್ಪ, ಪದ್ಮಣ್ಣ, ಸೋಮಶೇಖರ್ ಲವ್ ಗೆರೆ, ಅನೇಕ ಪಕ್ಷದ ಮುಖಂಡರು ಹಾಜರಿದ್ದರು.