ಸಾರಾಂಶ
ಮೈಸೂರು: ಮಂಡ್ಯ ಜಿಲ್ಲೆಯ ಮೈಸೂರು ನಿವಾಸಿಗಳು ಪುಣ್ಯಕೋಟಿ ಸೇವಾ ಟ್ರಸ್ಟ್ ಮತ್ತು ಮೈಸೂರು ಜಿಲ್ಲೆಯ ನಾಗರೀಕರ ಸಹಯೋಗದೊಂದಿಗೆ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಅವರೇ ಕಾಳು ಮುದ್ದೆ ಊಟ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಮೈಸೂರು: ಮಂಡ್ಯ ಜಿಲ್ಲೆಯ ಮೈಸೂರು ನಿವಾಸಿಗಳು ಪುಣ್ಯಕೋಟಿ ಸೇವಾ ಟ್ರಸ್ಟ್ ಮತ್ತು ಮೈಸೂರು ಜಿಲ್ಲೆಯ ನಾಗರೀಕರ ಸಹಯೋಗದೊಂದಿಗೆ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಅವರೇ ಕಾಳು ಮುದ್ದೆ ಊಟ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ವಿಜಯನಗರ 1ನೇ ಹಂತದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಅವರೇ ಕಾಳು ಮುದ್ದೆ ಊಟಕ್ಕೆ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ಚಾಲನೆ ನೀಡಿದರು. ಪುಣ್ಯಕೋಟಿ ಸೇವಾ ಟ್ರಸ್ಟ್ ಅಧ್ಯಕ್ಷ ಹನುಮಂತೇಶ್, ಎಂ. ಪುಟ್ಟಸ್ವಾಮಿ, ರಾಮಚಂದ್ರು, ಮಂಜೇಗೌಡ ಮೊದಲಾದವರು ಇದ್ದರು.