ಮುಖ್ಯಮಂತ್ರಿ ಆಗಬೇಕು ಎಂದು ಪಾದಯಾತ್ರೆ, ಆ ಯಾತ್ರೆ, ಈ ಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲವನ್ನು ನೋಡಿನಿ, ಕರ್ನಾಟಕದಲ್ಲಿ ಒಂದು ಜೆಸಿಬಿ ಸರ್ಕಾರ ಬರುವುದು ಬಹಳ ಅವಶ್ಯವಿದೆ.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಮುಖ್ಯಮಂತ್ರಿ ಆಗಬೇಕು ಎಂದು ಪಾದಯಾತ್ರೆ, ಆ ಯಾತ್ರೆ, ಈ ಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲವನ್ನು ನೋಡಿನಿ, ಕರ್ನಾಟಕದಲ್ಲಿ ಒಂದು ಜೆಸಿಬಿ ಸರ್ಕಾರ ಬರುವುದು ಬಹಳ ಅವಶ್ಯವಿದೆ. ವೀರ ಕಿತ್ತೂರು ಚೆನ್ನಮ್ಮ ಮೂರ್ತಿ ತೆರವಿಗೆ ಕೈ ಹಚ್ಚಿದರೆ, ಸ್ವಾತಂತ್ರ್ಯ ಹೋರಾಟಗಾರ ಮೂರ್ತಿಗಳ ತೆರವಿಗೆ ಮುಂದಾದರೆ ಸಹನೆ ತಾಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸ್ಥಳೀಯ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಹೊಸದುರ್ಗ, ಕೊಡುಗು ಸೇರಿ ಎಲ್ಲಿ ನೋಡಿದರೂ ಜನ ಸೇರುತ್ತಿದ್ದಾರೆ, ಏಕೆಂದರೆ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಕಿತ್ತೊಗೆಯಲು ಸೇರುತ್ತಿದ್ದಾರೆ. ೨೦೨೮ಕ್ಕೆ ಜೆಸಿಬಿ ಸರ್ಕಾರ ಬರುವುದು ಅವಶ್ಯವಿದೆ. ಮೊನ್ನೆ ಟಿ, ನರಸಿಂಹಪುರದಲ್ಲಿ ಸಿಪಿಐ ಗ್ರಹಚಾರ ಬಿಡಿಸುತ್ತೇನೆ ಎಂದಿದ್ದ. ಈಗ ಅವನ ಗ್ರಹಚಾರ ಬಿಡಿಸುತ್ತಿದ್ದಾರೆ. ಇಂತಹ ಹುಚ್ಚಾಟ ಮಾಡುವ ಯಾವುದೇ ತಹಸೀಲ್ದಾರ್ ಇರಲಿ, ಪೊಲೀಸ್ ಅಧಿಕಾರಿ ಇರಲಿ. ಅಂತಹ ಅಧಿಕಾರಗಳ ಲಿಸ್ಟ್‌ ನಮ್ಮಲ್ಲಿರುತ್ತದೆ ಎಂಬುದು ತಿಳಿದಿರಲಿ ಎಂದು ಎಚ್ಚರಿಕೆ ನೀಡಿದ ಅವರು, ಇನ್ನೂ ೧೫ ತಿಂಗಳ ಈ ದರಿದ್ರ ಹಿಂದೂ ವಿರೋಧಿ ಸರ್ಕಾರ ಇರಲಿದೆ. ಮುಂದೆ ನಾವು ಅಧಿಕಾರಕ್ಕೆ ಬರಲಿದ್ದೇವೆ. ನೀವು ಒಗ್ಗಟ್ಟಿನಿಂದ ಇರಿ ಎಂದ ಅವರು, ದೇಶ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿ ಇತರ ಮಹನೀಯರ ಮೂರ್ತಿಗಳ ಸ್ಥಳಾಂತರ ಮಾಡುವುದಾಗಲಿ, ರಾತ್ರಿ ಬಂದು ತುಡಗಲೆ ಬಂದು ಕಿತ್ತೊ ಕೆಲಸ ನೀವು ಮಾಡುತ್ತೀರಿ ಎಂದರೆ ಅಂತಹ ಅಧಿಕಾರಿಗಳನ್ನು ನನ್ನ ತಲೆಯಲ್ಲಿ ಇಟ್ಟುಕೊಂಡಿರುತ್ತೇನೆ. ಅಷ್ಟು ತಾಕತ್ತು ಇದ್ದರೆ ಹಗಲೊತ್ತು ಬಂದು ಕೀಳಿ ಎಂದರು.