ಬಾಂಬ್ ಇಟ್ಟವ್ರನ್ನೂ ಬ್ರದರ್ಸ್ ಅಂತಾರೆ-ತಾರಾ

| Published : Apr 20 2024, 01:00 AM IST

ಬಾಂಬ್ ಇಟ್ಟವ್ರನ್ನೂ ಬ್ರದರ್ಸ್ ಅಂತಾರೆ-ತಾರಾ
Share this Article
  • FB
  • TW
  • Linkdin
  • Email

ಸಾರಾಂಶ

ಯುಪಿಎ 280 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿ ಗೆಲ್ಲುತ್ತೇವೆ ಎಂದು ಯಾವ ಧೈರ್ಯದ ಮೇಲೆ ಹೇಳುತ್ತೀರಿ. ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಮೋದಿ ಎಂದು ಧೈರ್ಯದಿಂದ ಹೇಳುತ್ತೇವೆ ಎಂದು ಚಿತ್ರನಟಿ ತಾರಾ ಅನುರಾಧಾ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಹುಬ್ಬಳ್ಳಿಯ ಕಾಲೇಜಿನಲ್ಲಿ ಯುವತಿಯ ಹತ್ಯೆ ಹಾಗೂ ಗದಗ ಜಿಲ್ಲೆಯಲ್ಲಿ ನಡೆದ ಎರಡು ಜೋಡಿ ಕೊಲೆ ಪ್ರಕರಣ ಖಂಡನೀಯ. ಡಿಸಿಎಂ ಡಿ.ಕೆ. ಶಿವಕುಮಾರ ಅವರು ಬಾಂಬ್ ಇಟ್ಟವ್ರನ್ನೂ ಬ್ರದರ್ಸ್ ಅಂದರು. ಈ ರೀತಿಯ ಕೊಲೆ ನಡೆಯುತ್ತಿರುವಾಗ ಅವರು ಏನಂತಾರೆ? ಎಂದು ಚಿತ್ರನಟಿ ತಾರಾ ಅನುರಾಧಾ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರಿಗೂ ಕಾನೂನಿನ ಬಗ್ಗೆ ಭಯ ಇಲ್ಲವಾಗಿದೆ. ನಮ್ಮ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಲು ಆಗದಿದ್ದರೆ ಯಾವ ಕಾರಣಕ್ಕೆ ನಿಮ್ಮನ್ನು ಆಯ್ಕೆ ಮಾಡಬೇಕು. ಯುಪಿಎ 280 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿ ಗೆಲ್ಲುತ್ತೇವೆ ಎಂದು ಯಾವ ಧೈರ್ಯದ ಮೇಲೆ ಹೇಳುತ್ತೀರಿ. ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಮೋದಿ ಎಂದು ಧೈರ್ಯದಿಂದ ಹೇಳುತ್ತೇವೆ. ನಿಮ್ಮ ಅಭ್ಯರ್ಥಿ ಯಾರೆಂದು ಯಾಕೆ ಹೇಳುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ಖುಷಿಯಾಗಿದ್ದಾರೆ ಅಂತೀರಿ. ಅವರಿಗೂ ಈಗ ಅರ್ಥವಾಗಿದೆ. ಮಹಿಳೆಯರಿಗೆ ಉಚಿತ ಕೊಟ್ಟು ಗಂಡಸರಿಂದ ದುಪ್ಪಟ್ಟು ವಸೂಲಿ ಮಾಡುತ್ತೀರಿ. ವಿದ್ಯುತ್ ಬಿಲ್ ಹೆಚ್ಚಿಸಿದ್ದೀರಿ. ಗೃಹಲಕ್ಷ್ಮೀ ಮನೆಯ ಯಜಮಾನಿ ಎಂದು ಹೇಳಿದ್ದೀರಿ. ಎರಡು ಸಾವಿರ ರೂ. ಹಲವರಿಗೆ ಬಂದೇ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಅಂತಾ ಹೇಳಲ್ಲ. ನಿಲ್ಲಿಸಲು ಯತ್ನಿಸಿದರೆ ಅದರ ವಿರುದ್ಧ ಹೋರಾಟ ಮಾಡುತ್ತೇವೆ. ರಸ್ತೆಗಳು ಇತರ ಅಭಿವೃದ್ಧಿ ಕೆಲಸ ಸ್ಥಗಿತವಾಗಿವೆ ಎಂದರು.

ಎಚ್.ಡಿ. ಕುಮಾರಸ್ವಾಮಿ ಹೇಳಿಕೆಯನ್ನು ನಾವು ಒಪ್ಪಿಕೊಳ್ಳಲ್ಲ. ಕಾಂಗ್ರೆಸ್‌ನವರು ಕಂಗನಾ ರಣಾವತ್ ಬಗ್ಗೆ ಕೀಳಾಗಿ ಮಾತನಾಡಿದರು. ರಾಜ್ಯ ಮಹಿಳಾ ಆಯೋಗದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರ್ಕಾರ ಸರಿ ಇದ್ದರೆ ಆಯೋಗ ಸರಿ ಇರುತ್ತದೆ. ಅವರಿಗೆ ಮಹಿಳೆಯರ ಬಗ್ಗೆ ನಿಜವಾದ ಗೌರವ ಇದ್ದರೆ ಮೊದಲು ಮಹಿಳೆಯರಿಗೆ ರಕ್ಷಣೆ ಕೊಡಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷೆ, ಭಾರತಿ ಅಳವಂಡಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೃಷ್ಟಿ ಪಾಟೀಲ, ಲತಾ ಗುಂಡೇನಹಳ್ಳಿ ಇತರರು ಇದ್ದರು.