ಜಿಲ್ಲೆ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಜಾತ್ರಾ ಮಹೋತ್ಸವ ದಲ್ಲಿ ದಲಿತರ ಮತ್ತು ಲಿಂಗಾಯತ ಸಮೂದಾಯಗಳ ಯುವಕರ ನಡುವೆ ನಡುವೆ ಸಣ್ಣ-ಪುಟ್ಟ ಜಗಳವಾಗಿರುವ ಘಟನೆ ಜರುಗಿದೆಯೇ ಹೊರತು ಅಲ್ಲಿ ಯಾವುದೇ ರೀತಿಯ ಜಾತಿ ನಿಂದನೆ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣ ನಡೆದಿಲ್ಲ. ಗ್ರಾಮದಲ್ಲಿ ಸೌಹಾರ್ದತೆ-ಸಾಮರಸ್ಯವನ್ನು ಕದಡುವ ದುರುದ್ದೇಶಪೂರ್ವಕವಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಗ್ರಾಮದ ಮುಖಂಡ ಅಮರೇಶ ಗಚ್ಚಿನಮನಿ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಜಾತ್ರಾ ಮಹೋತ್ಸವ ದಲ್ಲಿ ದಲಿತರ ಮತ್ತು ಲಿಂಗಾಯತ ಸಮೂದಾಯಗಳ ಯುವಕರ ನಡುವೆ ನಡುವೆ ಸಣ್ಣ-ಪುಟ್ಟ ಜಗಳವಾಗಿರುವ ಘಟನೆ ಜರುಗಿದೆಯೇ ಹೊರತು ಅಲ್ಲಿ ಯಾವುದೇ ರೀತಿಯ ಜಾತಿ ನಿಂದನೆ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣ ನಡೆದಿಲ್ಲ. ಗ್ರಾಮದಲ್ಲಿ ಸೌಹಾರ್ದತೆ-ಸಾಮರಸ್ಯವನ್ನು ಕದಡುವ ದುರುದ್ದೇಶಪೂರ್ವಕವಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಗ್ರಾಮದ ಮುಖಂಡ ಅಮರೇಶ ಗಚ್ಚಿನಮನಿ ಸ್ಪಷ್ಟಪಡಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅ.16 ರಿಂದ 18ವರೆಗೆ ಗ್ರಾಮದ ಆಂಜನೇಯ್ಯಸ್ವಾಮಿಯ ಜಾತ್ರಾ ಮಹೋತ್ಸವ ನಡೆದಿದ್ದು, ಕಳೆದ ಐದು ದಶಕಗಳಿಂದ ಸೌಹಾರ್ದಯುತವಾಗಿ, ಶಾಂತಿ ಸುವ್ಯವಸ್ಥೆಯಿಂದ ಊರಿನ ಎಲ್ಲ ಸಮುದಾಯಗಳು ಸೇರಿಕೊಂಡು ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ನಡೆದ ಮೂರು ದಿನಗಳ ಜಾತ್ರಾ ಮಹೋತ್ಸವದ ಕೊನೆ ದಿನ ರಥೋತ್ಸವ ನಂತರ ಡ್ರಮ್ ಬಾರಿಸುವ ವಿಚಾರವಾಗಿ ಕೆಲ ಯುವಕರ ನಡುವೆ ಎರಡ್ಮೂರು ಸಲ ಜಗಳವಾಗಿದ್ದು, ಗ್ರಾಮದ ಮುಖಂಡರೇ ಸೇರಿಕೊಂಡು ಅವರಿಗೆ ಬುದ್ಧಿವಾದ ಹೇಳಿ ಸರಿಪಡಿಸಲಾಗಿತ್ತು. ಆದರೆ, ಕೆಲವರು ದುರುದ್ದೇಶಪೂರ್ವಕವಾಗಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಲಾಗಿದೆ, ಅಸ್ಪೃಶ್ಯತೆ ಜೀವಂತವಾಗಿದೆ, ಸಮಾಜಿಕ ಬಹಿಷ್ಕಾರ ಮಾಡಲಾಗಿದೆ ಎಂದು ಆರೋಪಿಸಿ ಸುಳ್ಳು ಪ್ರಕರಣವನ್ನು ದಾಖಲಿಸಿದ್ದು, ಎಲ್ಲಾ ಸಮೂದಾಯಗಳ ಮುಖಂಡರಿಗೂ ದೇವಸ್ಥಾನ ಸಮಿತಿ ಸನ್ಮಾನಿಸಿ ಗೌರವಿಸಿದೆ. ಎಲ್ಲಾ ಸಮೂದಾಯದವರೂ ಸೇರಿಯೇ ಜಾತ್ರ ನಡೆಸಲಾಗಿದೆ. ಆದರೆ ಯಾರು ಜಾತಿ ತಾರತಮ್ಯ, ಸಮಾಜಿಕ ಬಹಿಷ್ಕಾರ ಹಾಕಿಲ್ಲ. ಸುಳ್ಳು ಸೃಷ್ಟಿಸಿ ಅಪಪ್ರಚಾರ ಮಾಡಲಾಗುತ್ತದೆ ಎಂದರು.
ಈಗಾಗಲೇ ಗ್ರಾಮಕ್ಕೆ ಆಗಮಿಸಿದ್ದ ಡಿಸಿ, ಎಸ್ಪಿ ಅವರಿಗೂ ಸ್ಪಷ್ಟೀಕರಣ ನೀಡಿದ್ದು, ಸುಳ್ಳು ಪ್ರಚಾರದಿಂದಾಗಿ ಗ್ರಾಮದ ಹೆಸರಿಗೆ ಮಸಿಬಳಿಯುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಮುಖಂಡರುಗಳಾದ ಶಿವ ಪುತ್ರಯ್ಯ ಸ್ವಾಮಿ, ಕೆ.ಶರಣಪ್ಪ, ಅಮರೇಗೌಡ, ಶೇಖರಪ್ಪ, ಆದೆಪ್ಪಗುಡುದೂರು, ವೀರನಗೌಡ ಪೊಲೀಸ್ ಪಾಟೀಲ್, ಯಂಕಣ್ಣ ಜಿನಗದ್ ಸೇರಿ ಅನೇಕರು ಇದ್ದರು.ತಡಿಗೋಳ ಚಲೋ ಚಳವಳಿ ಹಿಂಪಡೆಗೆ ತಹಸೀಲ್ದಾರ್ ಮಾಡಿದ ಮನವಿ ವಿಫಲ: ಸಿಂಧನೂರು:ಜಿಲ್ಲಾಧಿಕಾರಿಗಳು ತಿಡಿಗೋಳ ಗ್ರಾಮಕ್ಕೆ ಭೇಟಿ ಅಲ್ಲಿಯ ಜನರ ಅಹವಾಲುಗಳನ್ನು ಕೇಳಿ ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದಲ್ಲದೇ ಹಲವಾರು ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ತಿಡಿಗೋಳ ಚಲೋ ಚಳವಳಿಯನ್ನು ಹಿಂಪಡೆಯಬೇಕು ಎಂದು ತಹಶೀಲ್ದಾರ್ ಅರುಣ್ ಹೆಚ್. ದೇಸಾಯಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರಲ್ಲಿ ಮಾಡಿದ ಮನವಿ ವಿಫಲವಾಯಿತು.
ಶುಕ್ರವಾರ ಮಧ್ಯಾಹ್ನ ಅವರು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿ ಸಭೆ ನಡೆಸಿದರು. ಈಗಾಗಲೇ ಜಿಲ್ಲಾಧಿಕಾರಿಗಳು ಮನೆ ರಹಿತ ಬಡವರಿಗೆ ಎರಡುವರೆ ಎಕರೆ ಜಮೀನನ್ನು ಕಾಯ್ದಿರಿಸಿ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ. ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ₹25 ಲಕ್ಷ ಮಂಜೂರು ಮಾಡಿದ್ದಾರೆ. ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿ ಕೇಂದ್ರ, ಗ್ರಂಥಾಲಯ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ದಲಿತ ಮಹಿಳೆಯರಿಗೆ ಮತ್ತು ಯುವಕರಿಗೆ ಆದ್ಯತೆಯ ಮೇರೆಗೆ ಉದ್ಯೋಗ ಕಲ್ಪಿಸಿಕೊಡಲು ಭರವಸೆ ನೀಡಿದ್ದಾರೆ. ಈಗಾಗಲೆ ಪ್ರಮುಖ ಆರೋಪಿಗಳನ್ನು ಬಂಧಿಸ ಲಾಗಿದೆ. ಆದ್ದರಿಂದ ಚಲೋ ಚಳವಳಿಯನ್ನು ಹಿಂಪಡೆದು ಗ್ರಾಮದಲ್ಲಿ ಶಾಂತಿ ನೆಲೆಸಲು ಸಹಕರಿಸುವಂತೆ ತಹಶೀಲ್ದಾರ್ ಮನವಿ ಮಾಡಿದರು.ಸಿಪಿಐಎಂಎಲ್ (ಮಾಸ್ಲೈನ್) ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಮತ್ತು ಶೇಖರಮ್ಮ ದುಮತಿ ವಕೀಲ ಮಾತನಾಡಿ ತಿಡಿಗೋಳ ಗ್ರಾಮದಲ್ಲಿ ಎಲ್ಲ ಜಾತಿಯ ಬಡವರಿಗೆ ಸ್ವಾತಂತ್ರö್ಯವೇ ಇಲ್ಲ. ಜಾತೀಯತೆ ಮತ್ತು ಭೂ ಮಾಲೀಕತ್ವ ದಬ್ಬಾಳಿಕೆ ಮಾಡುತ್ತಿದೆ. ಅಲ್ಲಿಯ ದಲಿತರು ಉಸಿರುಗಟ್ಟುವ ವಾತಾವರಣದಲ್ಲಿ ಬದುಕಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ಸೌಹಾರ್ದತೆ ಕಾಪಾಡಲು ಪರಸ್ಪರ ಸಾಮರಸ್ಯ ಬೆಸೆಯಲೆಂದೆ ಚಲೋ ಚಳವಳಿ ಮಾಡುತ್ತಿರುವುದಾಗಿ ಪ್ರತಿಕ್ರಿಯಿಸಿದರು.
ಡಿವೈಎಸ್ಪಿ ಚಂದ್ರಶೇಖರ ನಾಯಕ, ಸರ್ಕಲ್ ಇನ್ಸಪೆಕ್ಟರ್ ವಿನಾಯಕ, ಮುಖಂಡರಾದ ಚಂದ್ರಶೇಖರ ಗೊರೆಬಾಳ, ನಾಗರಾಜ ಪೂಜಾರ್, ಬಿ.ಎನ್.ಯರದಿಹಾಳ, ಪರಶುರಾಮ ತಿಡಿಗೋಳ, ಬಸವರಾಜ ಹಳ್ಳಿ, ಬಸವರಾಜ ಕೊಂಡಿ, ಹುಸೇನಪ್ಪ ತಿಡಿಗೋಳ, ಪಂಪಾಪತಿ ಹಂಚಿನಾಳ ಇದ್ದರು.ದಲಿತರಿಗೆ ಬಹಿಷ್ಕಾರ: ಕಾನೂನು ಕ್ರಮಕ್ಕೆ ಒತ್ತಾಯ:
ಸಿಂಧನೂರು: ತಾಲೂಕಿನ ತಿಡಿಗೋಳ ಗ್ರಾಮದ ದಲಿತರ ಮೇಲೆ ದೌರ್ಜನ್ಯ ನಡೆಸಿ, ಸಾಮಾಜಿಕ ಬಹಿಷ್ಕಾರ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಂಬೇಡ್ಕರ್ ಸ್ವಾಭಿಮಾನ ಸೇನೆಯಿಂದ ಆಗ್ರಹಿಸಿ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಮಾತನಾಡಿದ ಸ್ವಾಭಿಮಾನ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ನಿರುಪಾದಿ ತಿಡಿಗೋಳದಲ್ಲಿ ಅಕ್ಟೋಬರ್ 18 ರಂದು ನಡೆದ ಆಂಜನೇಯಸ್ವಾಮಿ ಜಾತ್ರೆಯಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಹಲಗೆ ಬಾರಿಸುವ ವಿಷಯದಲ್ಲಿ ಮನಸ್ತಾಪವಾಗಿ ಸವರ್ಣೀಯರು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಸಂಘಟಕರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ನಾಳೆ ತಿಡಿಗೋಳದವರೆಗೆ ಬೈಕ್ರ್ಯಾಲಿ, ಬಹಿರಂಗ ಸಭೆಮಾನ್ವಿ: ಸಿಂಧನೂರಿನ ತಿಡಿಗೋಳದಲ್ಲಿ ದಲಿತರ ಮೇಲೆ ದೌರ್ಜನ್ಯ ಖಂಡಿಸಿ ನ.8 ರಂದು ಬೈಕ್ ರ್ಯಾಲಿ ಹಾಗೂ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಶ್ರವಣ ಕುಮಾರ ಮುದ್ದಂಗುಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರು ಕೂಡ ಗೃಹ ಮಂತ್ರಿ ಪ್ರಿಯಾಂಕ ಖಾರ್ಗೆ ರವರು ಜಿಲ್ಲೆಗೆ ಆಗಮಿಸಿ ದಲಿತರ ಸಮಸ್ಯೆಗಳನ್ನು ಅಲಿಸಿ ಅಗತ್ಯ ಕ್ರಮ ಕೈಗೊಳ್ಳದೆ ಇರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ತಿಪ್ಪಣ್ಣ ಬಾಗಲವಾಡ, ಶೇಖ್ ಫರೀದ್ ಉಮ್ರಿ ,ಅಬ್ರಾಹಂ ಪನ್ನೂರು,ಅನಿಲ್ ನಿಲಕಂಠ, ಹನುಮಂತಕೋಟೆ, ರವೀಂದ್ರ ಜಾನೇಕಲ್,ನಾಸಿರ್ ಅಲಿ, ಬಸಪ್ಪ ಸೇರಿದಂತೆ ಇನ್ನಿತರರು ಇದ್ದರು.