ಕಳ್ಳನ ಬಂಧನ: ₹2.63 ಲಕ್ಷ ಮೌಲ್ಯದ ಐದು ಬೈಕ್‌ಗಳ ಜಪ್ತಿ

| Published : Sep 26 2024, 11:37 AM IST

ಕಳ್ಳನ ಬಂಧನ: ₹2.63 ಲಕ್ಷ ಮೌಲ್ಯದ ಐದು ಬೈಕ್‌ಗಳ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಅನುಮಾನಾಸ್ಪದವಾಗಿ ಗಸ್ತು ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಯನ್ನು ವಶಕ್ಕೆ ಪಡೆದ ತಾಲೂಕಿನ ಹದಡಿ ಪೊಲೀಸರು, ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳನ್ನು ಬೇಧಿಸಿದ್ದಾರೆ. ಬಂಧಿತನಿಂದ, ₹2.63 ಲಕ್ಷ ಮೌಲ್ಯದ 5 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

- ನಿಟುವಳ್ಳಿ ನಿವಾಸಿ, ಚಾಲಕ ಎಸ್.ಶಂಕರಪ್ಪ ಬಂಧಿತ ಆರೋಪಿ

- - - ದಾವಣಗೆರೆ: ಅನುಮಾನಾಸ್ಪದವಾಗಿ ಗಸ್ತು ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಯನ್ನು ವಶಕ್ಕೆ ಪಡೆದ ತಾಲೂಕಿನ ಹದಡಿ ಪೊಲೀಸರು, ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳನ್ನು ಬೇಧಿಸಿದ್ದಾರೆ. ಬಂಧಿತನಿಂದ, ₹2.63 ಲಕ್ಷ ಮೌಲ್ಯದ 5 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ದಾವಣಗೆರೆ ತಾಲೂಕು 6ನೇ ಕಲ್ಲು ತರಳಬಾಳು ನಗರದ ವಾಸಿ, ಹಾಲಿ ನಗರದ ನಿಟುವಳ್ಳಿ ನಿವಾಸಿಯಾದ ಚಾಲಕ ಎಸ್.ಶಂಕರಪ್ಪ (35) ಬಂಧಿತ ಆರೋಪಿ. ಹೊಸ ಬಿಸಲೇರಿ ಗ್ರಾಮದ ವಾಸಿ, ವಿದ್ಯಾರ್ಥಿ ಬಿ.ಆರ್. ಅರವಿಂದ ತಮ್ಮ ಆಕ್ಟೀವಾ ಹೊಂಡಾ ಸ್ಕೂಟಿ ಕಳುವಾದ ಬಗ್ಗೆ ಹದಡಿ ಠಾಣೆಗೆ ಸೆ.22ರಂದು ದೂರು ನೀಡಿದ್ದರು.

ಪೊಲೀಸರು ಸೋಮವಾರ ಬೆಳಗಿನ ಜಾವ 4 ಗಂಟೆ ವೇಳೆ ಅನುಮಾನಾಸ್ಪದವಾಗಿ ಕಂಡ ಎಸ್.ಶಂಕರಪ್ಪನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದರು. ಆಗ ಹದಡಿ ಠಾಣೆ ವ್ಯಾಪ್ತಿಯ 2 ದ್ವಿಚಕ್ರ ವಾಹನಗಳ ಕಳವು, ದಾವಣಗೆರೆ ಬಡಾವಣೆ ಠಾಣೆ, ಕೆ.ಟಿ.ಜೆ. ನಗರ, ವಿದ್ಯಾನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ತಲಾ 1 ಬೈಕ್ ಸೇರಿದಂತೆ ಒಟ್ಟು 5 ದ್ವಿಚಕ್ರ ವಾಹನಗಳ ಕಳವು ಪ್ರಕರಣ ಪತ್ತೆಯಾಗಿವೆ. ಆರೋಪಿ ಕಳವು ಮಾಡಿದ್ದ 5 ಬೈಕ್‌ಗಳನ್ನು ಪಂಚರ ಸಮಕ್ಷಮ ಅಮಾನತುಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಎಎಸ್‌ಪಿಗಳಾದ ಸಂತೋಷ ಜಿ.ವಿಜಯಕುಮಾರ, ಜಿ.ಮಂಜುನಾಥ, ಗ್ರಾಮಾಂತರ ಡಿವೈಎಸ್‌ಪಿ ಬಿ.ಎಸ್‌.ಬಸವರಾಜ, ಮಾಯಕೊಂಡ ವೃತ್ತ ನಿರೀಕ್ಷಕ ಡಿ.ನಾಗರಾಜ ಮಾರ್ಗದರ್ಶನದಲ್ಲಿ ಹದಡಿ ಠಾಣೆ ಎಸ್ಐಗಳಾದ ಶ್ರೀಶೈಲ ಪಟ್ಟಣಶೆಟ್ಟಿ, ಶಕುಂತಲಾ, ಸಿಬ್ಬಂದಿ ಕೆ.ನಾಗರಾಜ, ವಿಜಯಕುಮಾರ, ಜಯಪ್ರಕಾಶ, ಸಂತೋಷಕುಮಾರ, ಅರುಣಕುಮಾರ, ಟಿ.ಲೋಹಿತ, ಅರುಣಕುಮಾರ ಕುರುಬರ, ಜಗದೀಶರ ಕಾರ್ಯಕ್ಕೆ ಎಸ್‌ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.

- - - -24ಕೆಡಿವಿಜಿ16:

ದಾವಣಗೆರೆ ತಾಲೂಕಿನ ಹದಡಿ ಪೊಲೀಸರು ಬೈಕ್‌ ಕಳ್ಳನ ವಶಕ್ಕೆ ಪಡೆದು, ಕಳವು ಮಾಡಿದ್ದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರು.