ಹರಿಹರ: ಕಳ್ಳನ ಬಂಧನ, ₹10.30 ಲಕ್ಷ ಮೌಲ್ಯದ ಸ್ವತ್ತು ವಶ

| Published : Mar 03 2025, 01:48 AM IST

ಹರಿಹರ: ಕಳ್ಳನ ಬಂಧನ, ₹10.30 ಲಕ್ಷ ಮೌಲ್ಯದ ಸ್ವತ್ತು ವಶ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಜಿಲ್ಲೆಗಳ ಮನೆಗಳಲ್ಲಿ ಕಳವು ಕೃತ್ಯ ನಡೆಸಿದ್ದ ಆರೋಪಿಯನ್ನು ಭಾನುವಾರ ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿ, ₹10,30,000 ಮೊತ್ತದ ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಹರಿಹರ: ಹಲವು ಜಿಲ್ಲೆಗಳ ಮನೆಗಳಲ್ಲಿ ಕಳವು ಕೃತ್ಯ ನಡೆಸಿದ್ದ ಆರೋಪಿಯನ್ನು ಭಾನುವಾರ ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿ, ₹10,30,000 ಮೊತ್ತದ ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಣೆಬೆನ್ನೂರಿನ ಗಾರ್ಮೆಂಟ್ಸ್ ನೌಕರ, ಆಕಾಶ್ ಮುದೋಳಕರ (23) ಬಂಧಿತ ಆರೋಪಿಯಾಗಿದ್ದು, ಆತನಿಂದ 123.5 ಗ್ರಾಂ ಬಂಗಾರ, 59.72 ಗ್ರಾಂ ತೂಕದ ಬೆಳ್ಳಿಲೋಟ, ಎರಡು ಮೋಟಾರ್ ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೊಬ್ಬ ಆರೋಪಿ ರಾಣೆಬೆನ್ನೂರಿನ ಮಾಸೂರು ರಟ್ಟಿಹಳ್ಳಿ ನಿವಾಸಿ ಪ್ರವೀಣ ಆನಂದಪ್ಪ ಹಡಗಲಿ ತಲೆತಪ್ಪಿಸಿಕೊಂಡಿದ್ದಾನೆ. ಈ ಇಬ್ಬರೂ ಕದ್ದಿದ್ದ ಬೈಕ್‍ನಲ್ಲಿ ಬರುತ್ತಿದ್ದಾಗ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ದಾವಣಗೆರೆ, ಹರಿಹರ, ಶಿವಮೊಗ್ಗ, ತೀರ್ಥಹಳ್ಳಿ, ಹುಬ್ಬಳ್ಳಿ, ಧಾರವಾಡ ಠಾಣೆಗಳಲ್ಲೂ ಆರೋಪಿಗಳ ವಿರುದ್ಧ ಪ್ರಕರಣಗಳು ಇರುವುದು ಪತ್ತೆಯಾಗಿದೆ.

- - - -02ಎಚ್‍ಆರ್‌ಆರ್02: