ಮನೆಯ ಬಾಗಿಲು ಮುರಿದು ಚಿನ್ನಾಭರಣ, ನಗದು ದೋಚಿದ ಕಳ್ಳರು

| Published : Jul 10 2024, 12:31 AM IST

ಮನೆಯ ಬಾಗಿಲು ಮುರಿದು ಚಿನ್ನಾಭರಣ, ನಗದು ದೋಚಿದ ಕಳ್ಳರು
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಮ್ಮನ ಕಿತ್ತೂರು ಪಟ್ಟಣದ ವಿದ್ಯಾಗಿರಿಯಲ್ಲಿನ ಮನೆಯೊಂದಕ್ಕೆ ಸೋಮವಾರ ಸಂಜೆ ಕನ್ನ ಹಾಕಿರುವ ಕಳ್ಳರು ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಪಟ್ಟಣದ ವಿದ್ಯಾಗಿರಿಯಲ್ಲಿನ ಮನೆಯೊಂದಕ್ಕೆ ಸೋಮವಾರ ಸಂಜೆ ಕನ್ನ ಹಾಕಿರುವ ಕಳ್ಳರು ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಪಟ್ಟಣದ ನಿವಾಸಿ ಶಂಕರ ಇಟಗಿ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಹಿತ್ತಲು ಬಾಗಿಲನ್ನು ಹಾರಿಯಿಂದ ಒಡೆದು ಒಳಗೆ ಇದ್ದ 4 ಟ್ರಜರಿಗಳನ್ನು ಒಡೆದು ಹಾಕಿ ಕಳ್ಳತನ ನಡೆಸಿದ್ದಾರೆ.

35 ಗ್ರಾಂನ ಎರಡು ಬಂಗಾರದ ಗಂಟನ್‌, ಕಿವಿಯೋಲೆ, ಚಿನ್ನಡ ಉಂಗುರ, ಬೆಳ್ಳಿಯ ವಸ್ತುಗಳ ಜೊತೆಗೆ ₹5.30 ಲಕ್ಷ ನಗದನ್ನು ದೋಚಿದ್ದಾರೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಆರ್.ಬಿ.ಬಸರಗಿ, ಡಿವೈಎಸ್ಪಿ ರವಿ ನಾಯ್ಕ, ನಂದಗಡ ಸಿಪಿಐ ಎಸ್.ಸಿ. ಪಾಟೀಲ ಹಾಗೂ ಕಿತ್ತೂರು ಪಿಎಸ್ಐ ಪ್ರವೀಣ ಗಂಗೋಳ ಸೇರಿದಂತೆ ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದರು‌. ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.