ತಿಮ್ಮಕ್ಕನವರು ತಮ್ಮ ಸರಳ ಜೀವನ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಇಡೀ ಜಗತ್ತಿಗೆ ಪರಿಸರ ಸಂರಕ್ಷಣೆ ಮತ್ತು ಬದ್ಧತೆಯ ಪಾಠವನ್ನು ಬೋಧಿಸಿದ್ದಾರೆ ಎಂದು ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನದ ಪೀಠಾಧ್ಯಕ್ಷರಾದ ಜ್ಞಾನಪ್ರಕಾಶ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ಗುಬ್ಬಿ

ತಿಮ್ಮಕ್ಕನವರು ತಮ್ಮ ಸರಳ ಜೀವನ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಇಡೀ ಜಗತ್ತಿಗೆ ಪರಿಸರ ಸಂರಕ್ಷಣೆ ಮತ್ತು ಬದ್ಧತೆಯ ಪಾಠವನ್ನು ಬೋಧಿಸಿದ್ದಾರೆ ಎಂದು ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನದ ಪೀಠಾಧ್ಯಕ್ಷರಾದ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಛಲವಾದಿ ಮಹಾಸಭಾ ಹಾಗೂ ಸಾಲುಮರದ ತಿಮ್ಮಕ್ಕ ಅಭಿಮಾನಿ ಬಳಗದ ವತಿಯಿಂದ ಸಾಲಮರದ ತಿಮ್ಮಕ್ಕನವರ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಲುಮರದ ತಿಮ್ಮಕ್ಕನವರಿಗೆ ಸಾವಿಲ್ಲ ಅವರ ನುಡಿ ನಮನವನ್ನ ನಾವು ನೆಪ ಮಾತ್ರಕ್ಕೆ ಮಾಡಿ ನಿರಂತರವಾಗಿ ಸಸಿಗಳನ್ನು ನೆಡುವ ಮೂಲಕ ಅವರ ಇರುವಿಕೆಯನ್ನು ತೋರಿಸಬೇಕು ಎಂದು ಹೇಳಿದರು. ಚಾಲುಕ್ಯ ಆಸ್ಪತ್ರೆ ಸಿಇಒ ಡಾ. ಬಿ ಎಂ.ನಾಗಭೂಷಣ್ ಮಾತನಾಡಿ, ಸಾಲುಮರದ ತಿಮ್ಮಕ್ಕ ಯಾವುದೇ ಶಿಕ್ಷಣ ಪಡೆಯದೆ, ಮಕ್ಕಳಿಲ್ಲ ಎಂಬ ಕೊರಗಿನಲ್ಲಿ ಗಂಡ ಹೆಂಡತಿ ಸೇರಿ ಸುಮಾರು ನಾಲ್ಕು ಕಿಲೋಮೀಟರ್ ಆಲದ ಸಸಿಗಳನ್ನು ಹಾಕಿ ಬೆಳೆಸಿರುವುದು ಪ್ರಪಂಚಕ್ಕೆ ಮಾದರಿಯಾಗಿದೆ. ಆದ್ದರಿಂದ ಗುಬ್ಬಿ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಸಾಲುಮರದ ತಿಮ್ಮಕ್ಕನ ಹೆಸರಿಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.ಮಾಜಿ ಸದಸ್ಯರಾದ ಜಿ.ಎ ಚ್.ಜಗನ್ನಾಥ್ ಮಾತನಾಡಿ, ತುಮಕೂರು ಜಿಲ್ಲೆಯ ಮಹಾನ್ ವ್ಯಕ್ತಿಗಳಾದ ಸಾಲುಮರದ ತಿಮ್ಮಕ್ಕ ಹಾಗೂ ಸುಲುಗಿತ್ತಿ ನರಸಮ್ಮನವರು ಸರ್ಕಾರದ ಯಾವುದೇ ಸವಲತ್ತನ್ನು ಪಡೆಯದೆ ನಿರಂತರವಾಗಿ ಸೇವೆ ಮಾಡಿರುವುದಕ್ಕೆ ಇವರ ಹೆಸರು ಸೂರ್ಯ ಚಂದ್ರ ಇರುವವರೆಗೂ ಇರುತ್ತದೆ ಎಂದು ತಿಳಿಸಿದರು.ಪ್ರೌಢಶಾಲಾ ಶಿಕ್ಷಕರಾದ ಎಚ್.ಎಲ್ ಜಯಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಟಿ. ಈರಣ್ಣ ಟಿ.ಜಿ.ಸತೀಶ್, , ಶ್ವೇತಜಗದೀಶ್, ಶಶಿಕುಮಾರ್, ಪ್ರಕಾಶ್, ಟಿ.ದಾಸಪ್ಪ, ಚಿಕ್ಕಹನುಮಂತಯ್ಯ, ಕಿಟ್ಟಕುಪ್ಪೆ ನಾಗರಾಜು, ಕೆ.ಸಿ ರವೀಶ್, ಸಚಿನ್, ಎನ್.ಮಂಜುನಾಥ್, ಸಿ.ರಮೇಶ್, ಗಿರಿಜಮ್ಮ, ಎಚ್ ಕೆ ಮಂಜುನಾಥ್, ಎಚ್ ಕೆ ಮಧು ಬಿ ಆರ್ ಗೋಪಾಲ್, ಮುನಿರಾಜು , ನಾಗರಾಜು, ಲಕ್ಷ್ಮಮ್ಮ, ಕೆಂಪಯ್ಯ ಇತರರಿದ್ದರು.