ಸಾರಾಂಶ
ಚನ್ನಪಟ್ಟಣ: ತಾಲೂಕಿನ ತಿಮ್ಮಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣೇಗೌಡ ಬಿ. ಹಾಗೂ ಉಪಾಧ್ಯಕ್ಷರಾಗಿ ಚಿಕ್ಕತಾಯಮ್ಮ ಅವಿರೋಧ ಆಯ್ಕೆಯಾದರು.
ಚನ್ನಪಟ್ಟಣ: ತಾಲೂಕಿನ ತಿಮ್ಮಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣೇಗೌಡ ಬಿ. ಹಾಗೂ ಉಪಾಧ್ಯಕ್ಷರಾಗಿ ಚಿಕ್ಕತಾಯಮ್ಮ ಅವಿರೋಧ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಈ ಇಬ್ಬರ ಹೊರತಾಗಿ ಬೇರೆ ಯಾವ ನಿರ್ದೇಶಕರು ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಎಸ್.ಪುರುಷೋತ್ತಮ ಘೋಷಿಸಿದರು. ಡೈರಿ ನಿರ್ದೇಶಕರಾದ ಪ್ರಕಾಶ್ ಎಂ., ಮಹದೇವಯ್ಯ, ಮಂಚೇಗೌಡ, ಲಕ್ಷ್ಮೀಶ ಟಿ.ಎಸ್., ರವಿ, ಮಲ್ಲೇಶ್, ಕಾಳಮ್ಮ, ಪುಷ್ಪ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಅವಿರೋಧ ಆಯ್ಕೆ ಸಹಮತ ವ್ಯಕ್ತಪಡಿಸಿದರು. ಸಂಘದ ಸಿಇಒ ಜಗದೀಶ್ ಹಾಗೂ ಹಾಲು ಪರಿಕ್ಷಕ ಉಮೇಶ್ ಟಿ.ಎಸ್ ಸುಗಮ ಚುನಾವಣೆಗೆ ಸಹಕಾರ ನೀಡಿದರು.ತಿಮ್ಮಸಂದ್ರ ಡೇರಿ ನೂತನ ಅಧ್ಯಕ್ಷ ಕೃಷ್ಣೇಗೌಡ ಬಿ ಅವರನ್ನು ಡೇರಿ ನಿರ್ದೇಶಕರು ಹಾಗೂ ಗ್ರಾಮದ ಪ್ರಮುಖರು ಅಭಿನಂದಿಸಿದರು.
ಪೊಟೋ೩೧ಸಿಪಿಟಿ೨: ತಿಮ್ಮಸಂದ್ರ ಡೇರಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣೇಗೌಡ ಅವರನ್ನು ಡೇರಿ ನಿರ್ದೇಶಕರು ಹಾಗೂ ಗ್ರಾಮದ ಪ್ರಮುಖರು ಅಭಿನಂದಿಸಿದರು.