ಹಬ್ಬವೆಂದು ಭಾವಿಸಿ ಸಂಭ್ರಮದಿಂದ ಮತದಾನ ಮಾಡಿ

| Published : Apr 18 2024, 02:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ: ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿದಂತೆ ಮತದಾನ ಮಾಡುವುದು ಸಹ ಒಂದು ವಿಶೇಷ ಹಬ್ಬವೆಂದು ಭಾವಿಸಿ ಸಂಭ್ರಮದಿಂದ ಮತದಾನ ಮಾಡಬೇಕೆಂದು ತಾಪಂ ಇಒ ಯಶವಂತಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿದಂತೆ ಮತದಾನ ಮಾಡುವುದು ಸಹ ಒಂದು ವಿಶೇಷ ಹಬ್ಬವೆಂದು ಭಾವಿಸಿ ಸಂಭ್ರಮದಿಂದ ಮತದಾನ ಮಾಡಬೇಕೆಂದು ತಾಪಂ ಇಒ ಯಶವಂತಕುಮಾರ ಹೇಳಿದರು.

ಪಟ್ಟಣದ ತಾಪಂ ಸಭಾಭವನದ ಮುಂಭಾಗದಲ್ಲಿ ತಾಲೂಕು ಆಡಳಿತ ಮತ್ತು ಸ್ವಿಫ್ಟ್ ಸಮಿತಿ ವತಿಯಿಂದ ಹಮ್ಮಿಕೊಂಡ ರಂಗೋಲಿ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಬ್ಬಗಳು ಪ್ರತಿ ವರ್ಷವೂ ಬರುತ್ತವೆ. ಆದರೆ, ಚುನಾವಣೆ ಐದು ವರ್ಷಕ್ಕೊಮ್ಮೆ ಮಾತ್ರ ಬರುವ ಹಬ್ಬವಾಗಿರುವುದರಿಂದ ಎಲ್ಲರಲ್ಲೂ ಮತದಾನದ ಜಾಗೃತಿ ಅತ್ಯವಶ್ಯವಾಗಿದೆ ಎಂದು ಹೇಳಿದರು.

ಸಹಾಯಕ ಚುನಾವಣಾಧಿಕಾರಿ ಡಾ.ರಾಜೀವ ಕೊಲೇರ ಚುನಾವಣೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ದಾನಗಳಲ್ಲಿ ಮತದಾನ ಸಹ ಶ್ರೇಷ್ಠವಾಗಿದೆ. ಪ್ರತಿಯೊಬ್ಬರು ಮೇ.7ರಂದು ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕೆಂದರು.

ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.ತಹಸೀಲ್ದಾರ್‌ ಮಧುಸೂದನ್ ಕುಲಕರ್ಣಿ, ಎಚ್.ಎ.ಕದ್ರಾಪುರಕರ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಶಿವಪ್ರಕಾಶ ಪಾಟೀಲ್, ಸಿಡಿಪಿಒ ಸುನಿತಾ ಪಾಟೀಲ, ಬಸವರಾಜ ಅಯ್ಯನಗೌಡರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಆರ್. ಕುಲಕರ್ಣಿ, ಗೀತಾ ಬೀಳಗಿ, ಸಿ.ವಿ. ದಾಸರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಾಗೂ ವಸತಿ ನಿಲಯಗಳ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.