ಸಾರಾಂಶ
ಬಳ್ಳಾರಿ: ನಗರದ ಆಯ್ದ 10 ಪಾರ್ಕ್''''''''ಗಳಲ್ಲಿ ಧ್ಯಾನ ಕೇಂದ್ರಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.ಬಳ್ಳಾರಿಯ ಗಾಂಧಿನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂವ್‌ಮೆಂಟ್ ಸಂಸ್ಥೆಯಿಂದ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿಮ್ಮ ಸಂಸ್ಥೆಯ ಬೇಡಿಕೆಯಂತೆ ನಗರದ 10 ಆಯ್ದ ಪಾರ್ಕ್''''''''ಗಳಲ್ಲಿ ಧ್ಯಾನ ಕೇಂದ್ರ ನಿರ್ಮಿಸಲಾಗುವುದು, ಜನರು ಇದರ ಸದುಪಯೋಗ ಪಡೆಯಬೇಕು ಎಂದರು.ಮಾನಸಿಕ ಖಿನ್ನತೆಯಿಂದ ಹೊರ ಬರಲು ಧ್ಯಾನ ಸಹಕಾರಿಯಾಗಿದೆ. ಖಿನ್ನತೆಗೆ ಸಿಲುಕಿದ್ದ ಎಷ್ಟೋ ಜನರಿಗೆ ಧ್ಯಾನದಿಂದ ಜೀವದಾನ ಆಗಿದೆ. ಭೌತಿಕ ಜಗತ್ತಿನ ಆಸೆ, ಆಕಾಂಕ್ಷೆಗಳಿಂದಾಗಿ ಜನರು ಒತ್ತಡಕ್ಕೆ ಸಿಲುಕಿದ್ದಾರೆ. ಅನಾರೋಗ್ಯಕರ ಸ್ಪರ್ಧೆ, ನಾ ಮುಂದೆ ಹೋಗಬೇಕೆಂಬ ಒತ್ತಡಕ್ಕೆ ಸಿಲುಕಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಸ್ಟರ್ ಅಯ್ಯಪ್ಪ, ಪ್ರತಿ ದೇವಸ್ಥಾನ ಪಿರಾಮಿಡ್ ಕೇಂದ್ರ ಆಗಬೇಕು.ನಗರದ ಪಾರ್ಕ್‌ಗಳಲ್ಲಿ ಧ್ಯಾನ ಕೇಂದ್ರಗಳು ಸ್ಥಾಪನೆ ಆಗಬೇಕು. ಧ್ಯಾನದಿಂದ ಎಲ್ಲವನ್ನೂ ಸಾಧಿಸಬಹುದು ಎಂದು ಹೇಳಿದರು.
ಮಾಸ್ಟರ್ ಕೇತಪ್ಪ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಧ್ಯಾನ ಕಡ್ಡಾಯ ಆಗಬೇಕು. ದೇಶದ ಎಲ್ಲ ಪಾರ್ಕ್''''''''ಗಳಲ್ಲಿ ಧ್ಯಾನ ಕೇಂದ್ರಗಳು ಸ್ಥಾಪನೆಯಾಗಬೇಕು ಎಂದರು.ಕಾರ್ಯಕ್ರಮ ಆಯೋಜಿಸಿದ್ದ ಸುಮಾ ರೆಡ್ಡಿ ಸ್ವಾಗತಿಸಿ, ವಂದಿಸಿದರು.
ಗಡಗಿಚನ್ನಪ್ಪ ವೃತ್ತ ಕಾಮಗಾರಿ ಪರಿಶೀಲನೆ:ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಗಡಿಯಾರ ಗೋಪುರ ಕಾಮಗಾರಿಯನ್ನು ಶಾಸಕ ನಾರಾ ಭರತ್ ರೆಡ್ಡಿ ಪರಿಶೀಲಿಸಿದರು.
ಇದೇ ವೇಳೆ ಮಾತನಾಡಿದ ಅವರು, ಗಡಿಗಿ ಚನ್ನಪ್ಪ ವೃತ್ತ, ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.ಕಾಮಗಾರಿ ಉದ್ಘಾಟನೆಗೆ ಸಮಯಾವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕೋರಲಾಗಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿದಲ್ಲಿ ಸಾರ್ವಜನಿಕರಿಗೂ ಅನುಕೂಲ ಮಾಡಿ ಕೊಟ್ಟಂತಾಗುತ್ತದೆ ಎಂದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹೇಮರಾಜ್, ಕಾಂಗ್ರೆಸ್ ಮುಖಂಡ ಎಂ.ಸುಬ್ಬರಾಯುಡು, ಗುತ್ತಿಗೆದಾರರು, ಮತ್ತಿತರರು ಹಾಜರಿದ್ದರು.