ಕೇರಳದ ಹಿಂದೂ ಮಲಿಯಾಳಿ ಬಾಂಧವರ ದೇಶಿಯ ಮತ್ತು ಸಾಂಪ್ರದಾಯಕ ಹಬ್ಬಗಳಲ್ಲಿ ಒಂದಾದ ತಿರು ಓಣಂ ಹಬ್ಬವನ್ನು ಬುಧವಾರ ಶನಿವಾರಸಂತೆ ವ್ಯಾಪ್ತಿಯಲ್ಲಿರುವ ಮಲೆಯಾಳಿ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.

ಶನಿವಾರಸಂತೆ: ಕೇರಳದ ಹಿಂದೂ ಮಲಿಯಾಳಿ ಬಾಂಧವರ ದೇಶಿಯ ಮತ್ತು ಸಾಂಪ್ರದಾಯಕ ಹಬ್ಬಗಳಲ್ಲಿ ಒಂದಾದ ತಿರು ಓಣಂ ಹಬ್ಬವನ್ನು ಬುಧವಾರ ಶನಿವಾರಸಂತೆ ವ್ಯಾಪ್ತಿಯಲ್ಲಿರುವ ಮಲೆಯಾಳಿ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು. ಶನಿವಾರಸಂತೆ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಗೋಪಾಲಪುರ, ಒಡೆಯನಪುರ, ಮುಳ್ಳೂರು, ಜಾಗೇನಹಳ್ಳಿ, ನಿಡ್ತ, ಮಾಲಂಬಿ, ಕಣಿವೆಬಸವನಹಳ್ಳಿ, ಆಲೂರುಸಿದ್ದಾಪುರ, ಹೊಸಗುತ್ತಿ ಮುಂತಾದ ಗ್ರಾಮಗಳಲ್ಲಿ ಹಲವಾರು ದಶಕಗಳಿಂದ ಕೇರಳ ಮೂಲದ ಮಲೆಯಾಳಿ ಬಾಂಧವರು ನೆಲೆಸಿದ್ದಾರೆ. ಹಿನ್ನಲೆ: ಪುರಾಣದಲ್ಲಿ ವಿಷ್ಣುವಿನ ದಶ ಅವತಾರಗಳಲ್ಲಿ ಒಂದಾದ ವಾಮನ ಅವತಾರ ಒಂದಾಗಿದ್ದು ಬಲಿ ಚಕ್ರವರ್ತಿಯ ತ್ಯಾಗದ ನೆನಪಿಗಾಗಿ ಕೇರಳದ ಹಿಂದೂ ಮಲೆಯಾಳಿ ಬಾಂಧವರು ಬಲಿ ಚಕ್ರವರ್ತಿಯ ಸಂಕೇತವಾಗಿ ಒಣಂ ಹಬ್ಬವನ್ನು ಸಾಂಪ್ರದಾಯಕವಾಗಿ ಹತ್ತು ದಿನಗಳ ವರೆಗೆ ಆಚರಿಸುತ್ತಾರೆ. ಓಣಂ ಕೊನೆ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಓಣಂ ಹಬ್ಬದ ಅಂಗವಾಗಿ ಮಲೆಯಾಳಿ ಬಾಂಧವರು ತಮ್ಮ ಮನೆಯ ಅಂಗಳದಲ್ಲಿ ಬಣ್ಬಬಣ್ಣದ ಹೂವಿನ ಎಸಳುನಿಂದ ರಂಗೋಲಿ[ಪೂ ಕಳಂ] ಹಾಕುತ್ತಾರೆ ರಂಗೋಲಿ ಮಧ್ಯದಲ್ಲಿ ಹಣತೆಯನ್ನಿಡುತ್ತಾರೆ. ಓಣಂ ಹಬ್ಬದ ದಿನ ಮಲೆಯಾಳಿ ಬಾಂಧವರ ಮನೆಗಳಲ್ಲಿ ವಿಶೇಷ ಪೂಜೆ ನೆರವೇರಿಸುತ್ತಾರೆ.

ತದ ನಂತರ ಮನೆಯಲ್ಲಿ ಬಗೆಬಗೆಯ ಸಿಹಿ ಅಡುಗೆ ಮಾಡಿ ಮನೆ ಮಂದಿಯಲ್ಲದೆ ಅಕ್ಕಪಕ್ಕದವರನ್ನು ಕರೆದು ಸಿಹಿ ಭೋಜನ ಸವಿಯುತ್ತಾರೆ ಅದರಂತೆ ಬುಧವಾರ ಶನಿವಾರಸಂತೆ ವ್ಯಾಪ್ತಿಯಲ್ಲಿ ಮಲೆಯಾಳಿ ಬಾಂಧವರು ಓಣಂ ಹಬ್ಬವನ್ನು ತಮ್ಮ ಮನೆಗಳಲ್ಲಿ ಮನೆಮಂದಿ ಸೇರಿದಂತೆ ಅಕ್ಕಪಕ್ಕದವರನ್ನು ಕರೆದು ಸಡಗರ ಸಂಭ್ರಮದಿಂದ ಆಚರಿಸಿದರು.