ಹಿರಿಯ ವಿದ್ಯಾರ್ಥಿಗಳು ಲಕ್ಷಾಂತರ ರೂ ಬೆಲೆ ಬಾಳುವ ಬೈಕ್‌ ಅನ್ನು ಉಡುಗೊರೆಯಾಗಿ ನೀಡಿದ್ದ

ಕನ್ನಡಪ್ರಭ ವಾರ್ತೆ ಸುತ್ತೂರುಸುತ್ತೂರಿನ ಕ್ಷೇಮಪಾಲಕ ಎಚ್.ಡಿ. ಮಹೇಶ್ ಎಂಬವರಿಗೆ ಅಲ್ಲಿನ ಹಿರಿಯ ವಿದ್ಯಾರ್ಥಿಗಳು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ.ವಿದ್ಯಾರ್ಥಿಗಳ ಈ ಗುರುಕಾಣಿಕೆ ಎಲ್ಲರಿಗೂ ಆಶ್ಚರ್ಯ ಮೂಡಿಸಿತು. ಆ ವಿದ್ಯಾರ್ಥಿಗಳ ಪ್ರೀತಿ ನಿಜಕ್ಕೂ ನಿಸ್ಪಹವಾದದ್ದು ಎಂದು ಸಾಬೀತಾಯಿತು. ಫೆಬ್ರವರಿ ಮಾಹೆಯಲ್ಲಿ ಸಾಗರ್ ಎಂಬ ಕ್ಷೇಮಪಾಲಕರ ವಿವಾಹದ ದಿನ ಇದೇ ರೀತಿ ಹಿರಿಯ ವಿದ್ಯಾರ್ಥಿಗಳು ಲಕ್ಷಾಂತರ ರೂ ಬೆಲೆ ಬಾಳುವ ಬೈಕ್‌ ಅನ್ನು ಉಡುಗೊರೆಯಾಗಿ ನೀಡಿದ್ದನ್ನು ಸ್ಮರಿಸಬಹುದು. ಇಂತಹ ಕೃತಜ್ಞತೆಯುಳ್ಳ ವಿದ್ಯಾರ್ಥಿಗಳನ್ನು ರೂಪಿಸಿದ ಕೀರ್ತಿ ಸುತ್ತೂರು ಮಠದ ವಸತಿ ಶಾಲೆಗೆ ಸಲ್ಲುತ್ತದೆ.ಶಿಕ್ಷಣ ವ್ಯವಸ್ಥೆಯಲ್ಲಿ ವಸತಿ ಸಹಿತ ಶಿಕ್ಷಣ ಅಂದರೆ ಹಾಸ್ಟೆಲ್ ಸೌಲಭ್ಯ ಹೊಂದಿರುವ ಶಾಲಾ ಶಿಕ್ಷಣದ್ದೂ ಭಿನ್ನವಾದ ವ್ಯವಸ್ಥೆ. ಡೇ ಸ್ಕೂಲ್‌ ಗಳಲ್ಲಿ ಶಾಲೆ ಮುಗಿಸಿ ಮನೆಗೆ ಹೋದ ಮೇಲೆ ಮಕ್ಕಳ ಕ್ಷೇಮಪಾಲನೆ ಅಂದರೆ ಹೋಂವರ್ಕ್, ಊಟ- ತಿಂಡಿ, ಶುಚಿತ್ವ, ಆರೋಗ್ಯ ಇವುಗಳ ಜವಾಬ್ದಾರಿ ತಾಯಿ- ತಂದೆ/ ಪೋಷಕರದ್ದು. ಆದರೆ ವಸತಿ ಶಾಲೆಗಳಲ್ಲಿ ಹಾಸ್ಟೆಲ್ ವಾರ್ಡನ್ ಹಾಗೂ ಕೊಠಡಿ ಶಿಕ್ಷಕರು ಅಥವಾ ಕ್ಷೇಮಪಾಲಕರು ತಾಯಿ ತಂದೆಯ ಜವಾಬ್ದಾರಿ ನಿರ್ವಹಿಸುತ್ತಾರೆ.ಸುತ್ತೂರು ಮಠದ ನೂರಾರು ಸಂಸ್ಥೆಗಳಲ್ಲಿ ಸುತ್ತೂರಿನ ವಸತಿ ಶಾಲೆಯು ಹಲವಾರು ವಿಶೇಷತೆ ಹೊಂದಿದೆ. 2002ನೇ ಇಸವಿಯಲ್ಲಿ ಅಂದಿನ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಉದ್ಘಾಟಿಸಿರುವ ಈ ವಸತಿ ಶಾಲೆಯು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ವರದಾನವಾಗಿದೆ. ಕರ್ನಾಟಕದಲ್ಲಿನ ಎಲ್ಲಾ ಜಿಲ್ಲೆಗಳಿಂದ, ನೆರೆ ರಾಜ್ಯಗಳಿಂದ ಅಲ್ಲದೆ ದೂರದ ಮೇಘಾಲಯ, ಮಣಿಪುರ, ಜಾರ್ಖಾಂಡ್, ಅರುಣಾಚಲಪ್ರದೇಶ ರಾಜ್ಯಗಳ 1 ರಿಂದ 10ನೇ ತರಗತಿಯವರೆಗೆ 4000 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.2014-15ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪೂರೈಸಿದ್ದ ಹಿರಿಯ ವಿದ್ಯಾರ್ಥಿಗಳು ವಿವಿಧ ಹುದ್ದಗೆಳನ್ನು ನಿರ್ವಹಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥರು, ಗುರುಗಳು, ಕ್ಷೇಮಪಾಲಕರು ಹಾಗೂ ಅಡುಗೆ ಸಿಬ್ಬಂದಿಯನ್ನು ಗೌರವಿಸಿದರು.