ಸಾರಾಂಶ
ಇದು ಸ್ಪರ್ಧಾತ್ಮಕ ಯುಗ ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿ ,ಶಿಕ್ಷಣ ಬಹಳ ಮುಖ್ಯ
ಜೋಯಿಡಾ: ಇದು ಸ್ಪರ್ಧಾತ್ಮಕ ಯುಗ ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿ ,ಶಿಕ್ಷಣ ಬಹಳ ಮುಖ್ಯ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ,ಜೋಯಿಡಾ ಶಾಸಕ ಆರ್ ವಿ ದೇಶಪಾಂಡೆ ಹೇಳಿದರು.
ಅವರು ಕುಂಬಾರವಾಡಾ ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿಯ ರೂ, 1 ಕೋಟಿ 25 ಲಕ್ಷ ವೆಚ್ಚದಲ್ಲಿ ನಿರ್ಮಾಣದ ಅಡಿಗಲ್ಲು ಸಮಾರಂಭದಲ್ಲಿ ಗುದ್ದಲಿ ಪೂಜೆ ನಡೆಸಿ ಮಾತನಾಡುತ್ತಾ ಜೋಯಿಡಾ ತಾಲೂಕಿನಲ್ಲಿ ಮೊದಲು ಏನಿತ್ತು ಎಂಬುದನ್ನು ಗಮನಿಸಿ ಈಗ ಏನಾಗಿದೆ ಎಂಬುದನ್ನು ತಿಳಿಯಿರಿ ಎಲ್ಲಾ ಸೌಕರ್ಯಗಳು ಈಗ ಜನರಿಗೆ ಸಿಕ್ಕಿವೆ, ಶಾಲೆ ,ಕಾಲೇಜು, ರಸ್ತೆ ,ನೀರು, ಎಲ್ಲಾ ಮೂಲ ಸೌಕರ್ಯಗಳು ಸಿಕ್ಕಿವೆ ,ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಜೋಯಿಡಾ ತಾಲೂಕಿನಲ್ಲಿ ಕೆಲಸ ಮಾಡುವುದು ಅಂದರೆ ಶಿಕ್ಷೆ ಎಂದು ಭಾವಿಸುತ್ತಾರೆ,ಆದರೆ ಜೋಯಿಡಾದಲ್ಲಿ ಕೆಲಸ ಮಾಡುವುದರಿಂದ ನೀವು ಇನ್ನೂ ಹೆಚ್ಚು ವರ್ಷ ಆರೋಗ್ಯವಾಗಿ ಇರುತ್ತಿರಿ ಇಲ್ಲಿನ ವಾತಾವರಣ ಹಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಹೆಚ್ಚಿನ ಅಂಕ ಪಡೆದು ಉತ್ತಿರ್ಣರಾದ ಮಕ್ಕಳನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಅಧ್ಯಕ್ಷ ಮಂಗೇಶ್ ಕಾಮತ್, ಕೆ.ಪಿ.ಸಿ.ಸಿ ಸದಸ್ಯ ಸದಾನಂದ ದಬ್ಗಾರ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟೀಲ್, ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ, ಉಳವಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೋಕಾಶಿ, ಅವೇಡಾ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ಭಗವತಿರಾಜ್ ,ಕುಂಬಾರವಾಡಾ ಗ್ರಾಮ ಪಂಚಾಯತ ಉಪಾಧ್ಯಕ್ಷ ದತ್ತಾ ನಾಯ್ಕ, ಹಾಗೂ ಶಾಲೆಯ ಶಿಕ್ಷಕರು ಮಕ್ಕಳು ಇದ್ದರು.ಜೋಯಿಡಾ ತಾಲೂಕಿನಲ್ಲಿ. ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ನೀಡಿದ ಶಾಸಕ ಆರ್ ವಿ ದೇಶಪಾಂಡೆ