ಕೇಂದ್ರ ಸರ್ಕಾರವು ಯುಪಿಐ ಮೂಲಕ ಹಣ ವರ್ಗಾವಣೆಯ ಮೇಲೆ ತೆರಿಗೆ ಹಾಕುವುದಕ್ಕೆ ಇದು ಸಕಾಲವಲ್ಲ ಎಂದು ''ವಿ ದ ಲೀಡರ್ಸ್ ಮೂವ್‌ಮೆಂಟ್'' ಮುಖ್ಯಸ್ಥ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.

ಉಡುಪಿ : ಕೇಂದ್ರ ಸರ್ಕಾರವು ಯುಪಿಐ ಮೂಲಕ ಹಣ ವರ್ಗಾವಣೆಯ ಮೇಲೆ ತೆರಿಗೆ ಹಾಕುವುದಕ್ಕೆ ಇದು ಸಕಾಲವಲ್ಲ ಎಂದು ''''''''ವಿ ದ ಲೀಡರ್ಸ್ ಮೂವ್‌ಮೆಂಟ್'''''''' ಮುಖ್ಯಸ್ಥ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 2026 ವರೆಗೆ, ನಮ್ಮ ದೇಶದಲ್ಲಿ ಯುಪಿಐ ಮೂಲಕ 30 ಲಕ್ಷ ಕೋಟಿ ರು. ವ್ಯವಹಾರ ನಡೆದಿದೆ, ಇದು ಪ್ರಪಂಚದಲ್ಲಿ ಅತಿ ದೊಡ್ಡ ವ್ಯವಹಾರ ದಾಖಲೆಯಾಗಿದೆ. ಯುಪಿಐ ಮೂಲಕ ಹಣ ವರ್ಗಾವಣೆ ಸಂಪೂರ್ಣ ಉಚಿತವಾಗಿದ್ದರಿಂದ ಇಷ್ಟು ವೇಗವಾಗಿ ಅದು ಬೆಳೆದಿದೆ. ಆದರೆ ಈಗ ಕೇಂದ್ರ ಸರ್ಕಾರ ಯುಪಿಐ ವ್ಯವಹಾರಕ್ಕೆ ತೆರಿಗೆ ಹಾಕುವ ಬಗ್ಗೆ ಯೋಚಿಸುತ್ತಿದೆ. ತೆರಿಗೆ ಹಾಕಿದರೇ ಕೇವಲ ಶೇ.4 ರಷ್ಟು ಬಳಕೆದಾರರಿಗೆ ಮಾತ್ರ ಸಮಸ್ಯೆಯಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೇ ಈ ಶೇ.4 ಗ್ರಾಹಕರಿಂದ ಶೇ.67 ರಷ್ಟು ಅಂದರೇ ಬಹಳ ದೊಡ್ಡ ಮೊತ್ತದ ಆರ್ಥಿಕ ವ್ಯವಹಾರಕ್ಕೆ ತೊಂದರೆಯಾಗಲಿದೆ ಎಂದು ಅಣ್ಣಾಮಲೈ ವಿಶ್ಲೇಷಿಸಿದರು. ಭಾರತದಂತಹ ದೇಶದಲ್ಲಿ ಈ ರೀತಿಯ ನಿರ್ಧಾರಗಳಿಗೆ ಮತ್ತಷ್ಟು ಸಮಯಬೇಕು, ತಕ್ಷಣ ಈ ರೀತಿಯ ನಿರ್ಧಾರಕ್ಕೆ ಇದು ಸಕಾಲವಲ್ಲ, ಐದು ಹತ್ತು ವರ್ಷಗಳ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದವರು ಹೇಳಿದರು

ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಲಿ, ದೀಪಾವಳಿಗೆ ಗುಡ್ ನ್ಯೂಸ್ ಸಿಗಲಿ, ಇದರಿಂದ ಭಾರತ ಶೇಕಡ 100 ಯುಪಿಐ ಬಳಕೆದಾರರ ರಾಷ್ಟ್ರವಾಗಲಿ ಎಂದು ಆಶಿಸಿದರು.