ಸಾರಾಂಶ
ಮೈಸೂರು : ಕರ್ತವ್ಯದಲ್ಲಿ ಇರುವಷ್ಟು ದಿನವೂ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ ನಾಗೇಶಯ್ಯ ನಿವೃತ್ತರಾಗಿದ್ದಾರೆ.
ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಅತಿಥಿ ಉಪನ್ಯಾಸಕ ನಾಗೇಶಯ್ಯ ಅವರು ತಮ್ಮ ಕರ್ತವ್ಯದಿಂದ ನಿವೃತ್ತರಾದರು.
ಉನ್ನತ ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ 5 ಲಕ್ಷ ಹಿಡಿಗಂಟು ಪಡೆದ ರಾಜ್ಯದ ಮೊದಲಿಗರಾಗಿದ್ದಾರೆ.
ಕಾಲೇಜಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನಾಗೇಶಯ್ಯ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ವಿಜಯಲಕ್ಷ್ಮಿ ಅಭಿನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ರಾಜ್ಯ ಸರ್ಕಾರದ ಆದೇಶದಂತೆ ನಿವೃತ್ತಿ ಪಡೆಯುವ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಹಿಡಿಗಂಟನ್ನು ಶೀಘ್ರವಾಗಿ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ಪ್ರಾಧ್ಯಾಪಕ ಡಾ.ಎನ್. ನಾಗೇಂದ್ರ ಮಾತನಾಡಿ, ಸುಮಾರು 38 ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಾಗೇಶ ಎಲ್ಲರಿಗೂ ಮಾದರಿಯಾಗಿದ್ದಾರೆ. ರಾಜ್ಯದಲ್ಲಿ ಇದೊಂದು ಇತಿಹಾಸ ಎಂದರು.
ಜನಪರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ ಚಿಕ್ಕಲ್ಲೂರು, ಹನುಮೇಶ್, ವಿನೋದ್ ದೊಡ್ಡಕೊಪ್ಪಲು, ಡಾ. ರವಿಶಂಕರ್, ಡಾ. ಮಂಜುನಾಥ್, ಡಾ ಮಂಜು, ಡಾ. ವಾಲಿಕರ, ಡಾ ನಿರಂಜನಬಾಬು, ಡಾ. ನಂದೀಶ್. ಡಾ. ಶಿವಕುಮಾರ್, ಡಾ. ಪುನೀತ, ಡಾ. ಅನುಪಮಾ, ಡಾ. ಸುಗುಣ, ಶ್ರುತಿ, ಅನ್ನಪೂರ್ಣ, ಮಹಾಲಿಂಗು, ಬಸವರಾಜ್, ಸಹಾಯಕ, ಸಹ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಇದ್ದರು.