ಸಾರಾಂಶ
ಫೋಟೋ- 10ಎಂವೈಎಸ್ 60
--------ಕನ್ನಡಪ್ರಭ ವಾರ್ತೆ ಹುಣಸೂರು
ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಟಾಪರ್ ಸ್ಥಾನ ಸರ್ಕಾರಿ ಶಾಲೆಗೆ ಲಭಿಸಿದೆ.ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಎಸ್. ಸ್ನೇಹಾ- 613 ಅಂಕಗಳೊಂದಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಪಟ್ಟಣದ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಆರ್. ಚಂದು- 608 ಅಂಕಗಳೊಂದಿಗೆ ದ್ವಿತೀಯ ಹಾಗೂ ಟ್ಯಾಲೆಂಟ್ ಪ್ರೌಢಶಾಲೆಯ ಎ.ಆರ್. ಅನನ್ಯ- 607 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾರೆ.
ಪಟ್ಟಣದ ರೋಟರಿ ವಿದ್ಯಾಸಂಸ್ಥೆ, ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಮತ್ತು ಬಿಳಿಕೆರೆ ವಿದ್ಯಾವಾರಿಧಿ ಪ್ರೌಢಶಾಲೆ ಶೇ. 100 ಫಲಿತಾಂಶ ಗಳಿಸಿವೆ.ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಎಸ್. ಸ್ನೇಹಾ ತಾಲೂಕಿನ ಟಾಪರ್ ಆಗುವ ಮೂಲಕ ಸರ್ಕಾರಿ ಶಾಲೆಗಳಿಗೆ ಹೆಮ್ಮೆ ತಂದಿದ್ದಾರೆ. ಶಾಲೆಯು ಶೇ. 97.8ರ ಫಲಿತಾಂಶ ಗಳಿಸಿದೆ. ಎ ಪ್ಲಸ್ 15 ವಿದ್ಯಾರ್ಥಿಗಳು, ಎ 23, ಬಿ ಪ್ಲಸ್ 23, ಬಿ 13, ಸಿ ಪ್ಲಸ್ 4 ಮತ್ತು ಸಿ ಗ್ರೇಡ್‌ನಲಿ ಒಬ್ಬ ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ.
ಪಟ್ಟಣದ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆರ್. ಚಂದು- 608 ಅಂಕಗಳಿಸಿ ತಾಲೂಕಿಗೆ ಎರಡನೇ ಟಾಪರ್ ಆಗಿದ್ದರೆ, ಶಾಲೆಗೆ ಶೇ. 100 ಫಲಿತಾಂಶ ದೊರಕಿದೆ. ಅತ್ಯುತ್ತಮ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ - 16, ದ್ವಿತೀಯ ಶ್ರೇಣಿಯಲ್ಲಿ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಸಂಸ್ಥಾಪಕ ಸಿದ್ದರಾಮಯ್ಯ, ಅಧ್ಯಕ್ಷೆ ಪ್ರಿಯಾಂಕ ಎಸ್. ರಾಮ್, ಪ್ರಾಂಶುಪಾಲೆ ಎಚ್.ಎಲ್. ರಾಣಿ ಅಭಿನಂದಿಸಿದ್ದಾರೆ.ಟ್ಯಾಲೆಂಟ್ ವಿದ್ಯಾಸಂಸ್ಥೆಯ ಎ.ಆರ್. ಅನನ್ಯ- 607 ಅಂಕಗಳೊಂದಿಗೆ ತಾಲೂಕಿನ ಮೂರನೇ ಟಾಪರ್ ಆಗಿದ್ದಾರೆ. ಶಾಲೆಗೆ ಶೇ. 97.12ರ ಫಲಿತಾಂಶ ಲಭಿಸಿದ್ದು, ಅತ್ಯುತ್ತಮ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 24, ದ್ವಿತೀಯ ಶ್ರೇಣಿಯಲ್ಲಿ 14 ಮತ್ತು ತೃತೀಯ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರೋಟರಿಗೆ ಶೇ. 100ರ ಫಲಿತಾಂಶ:ಪಟ್ಟಣದ ರೋಟರಿ ಪ್ರೌಢಶಾಲೆಗೆ ಈ ಬಾರಿ ಶೇ. 100 ಫಲಿತಾಂಶ ದೊರಕಿದ್ದು, ಶಾಲೆಯ ವಿದ್ಯಾರ್ಥಿನಿ ಡಿ. ತನುಶ್ರೀ 600 ಅಂಕಗಳೊಂದಿಗೆ ಶಾಲೆಗೆ ಟಾಪರ್ ಆಗಿದ್ದಾರೆ. ವಿದ್ಯಾರ್ಥಿನಿ ಶಿಫಾ ಅಂಜುಂ- 571 ಅಂಕಗಳು (ದ್ವಿತೀಯ) ಹಾಗೂ ಶ್ರೀಲಕ್ಷ್ಮೀ- 570 ಅಂಕಗಳೊಂದಿಗೆ ತೃತೀಯಸ್ಥಾನ ಗಳಿಸಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 30, ದ್ವಿತೀಯ ಶ್ರೇಣಿಯಲ್ಲಿ 8 ಮತ್ತು ತೃತೀಯ ಶ್ರೇಣಿಯಲ್ಲಿ ಮೂವರು ಉತ್ತೀರ್ಣರಾಗಿದ್ದಾರೆ.
ಸಂತ ಜೋಸಫರ ಶಾಲೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಕೆ.ಪಿ. ಹಿತಾಶ್ರೀ -602 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದ್ದಾರೆ. ವಿದ್ಯಾಲಕ್ಷ್ಮೀ- 586, ಅಮಾನ್ ಫಾತಿಮಾ- 585 ಅಂಕಗಳೊಂದಿಗೆ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ.ಕನ್ನಡ ಮಾಧ್ಯಮ ವಿಭಾಗದಲ್ಲಿ ಆರ್. ಮೇಘನಾ- 572 ಮತ್ತು ಎಚ್.ಎಸ್. ಯೋಗೇಶ್ ಕುಮಾರ್- 564, ವೈಶಾಲಿ- 557 ಅಂಕ ಗಳಿಸಿದ್ದಾರೆ.
ಒಟ್ಟು 259 ವಿದ್ಯಾರ್ಥಿಗಳ ಪೈಕಿ ಅತ್ಯುತ್ತಮ ಶ್ರೇಣಿಯಲ್ಲಿ 24 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 134 ಮತ್ತು ದ್ವಿತೀಯ ಶ್ರೇಣಿಯಲ್ಲಿ 88 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕನ್ನಡ ಭಾಷೆಯಲ್ಲಿ ನಾಲ್ವರು ಹಿಂದಿ ಭಾಷೆಯಲ್ಲಿ 6 ವಿದ್ಯಾರ್ಥಿಗಳು ಶೇ. 100 ಅಂಕಗಳಿಸಿದ್ದಾರೆ.---------
ಬಾಕ್ಸ್,,ವಿದ್ಯಾವಾರಧಿ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಬಿಳಿಕೆರೆಯ ವಿದ್ಯಾವಾರಿಧಿ ಪ್ರೌಢಶಾಲೆಗೆ ಶೇ. 100ರ ಫಲಿತಾಂಶ ಲಭಿಸಿದ್ದು, ವಿದ್ಯಾರ್ಥಿನಿ ಹೇಮಾಕ್ಷಿ- 583 ಅಂಕಗಳಿಸಿದ್ದಾರೆ. ಸಮಾಜ ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಡಿ.ಜೆ. ಮಿಥುನ್ ಕುಮಾರ್ -529 ಮತ್ತು ಎಸ್.ಬಿ. ಮಿಥುನ್ - 519 ಅಂಕಗಳಿಸಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್. ರಮೇಶ್ ಅಭಿನಂದಿಸಿದ್ದಾರೆ.